ಹುಣಸೂರು: ತಾಲೂಕಿನ ಕೇಂದ್ರವಾಗಿ ಬಿಳಿಕೆರೆ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು ಇಲ್ಲಿಗೆ ಉಪನೋಂದಣಿ ಕಛೇರಿ ಅಗತ್ಯವಿದೆ ಎಂದು ಜನಧ್ವನಿ ಫೌಂಡೇಷನ್ ಅಧ್ಯಕ್ಷ ಪ್ರವೀಣ್ ಸರಕಾರವನ್ನು ಆಗ್ರಹಿಸಿದ್ದಾರೆ.
ಹುಣಸೂರು ಬಿಟ್ಟರೆ ಆ ಸ್ಥಾನ ತುಂಬುವ ಏಕೈಕ ಕೇಂದ್ರ ಸ್ಥಾನ ಬಿಳಿಕೆರೆ ಮೈಸೂರು ಹುಣಸೂರು ಹೈವೆ ಪ್ರಮುಖ ಅತೀ ಅಷ್ಟೆ ಅಲ್ಲದೆ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು ಸಹ ಬಿಳಿಕೆರೆ ಮೂಲಕವೇ ಹಾದು ಹೋಗುತ್ತವೆ ಹಾಗೂ ಬಿಳಿಕೆರೆ ಹೋಬಳಿ ಸುತ್ತ ಮುತ್ತ ಅತಿ ಹೆಚ್ಚು ಹಳ್ಳಿಗಳಿದ್ದು ರೈತಾಪಿ ವರ್ಗಗಳು ಹೆಚ್ಚಾಗಿವೆ ಇದಲ್ಲದೆ ಬಿಳಿಕೆರೆ ಸುತ್ತ ಮುತ್ತ ವಾಣಿಜ್ಯ ಸಂಬಂಧಿತ ವ್ಯವಹಾರಗಳು ನಡೆಯುವುದರಿಂದ ಇಲ್ಲಿನ ಜನರು ಹುಣಸೂರಿನವರೆಗೆ ಹೋಗಿ ಬರಲು ತೊಂದರೆ ಆಗುತ್ತಿದ್ದು ಈ ಕಡೆ ಗಮನಹರಿಸಬೇಕಿದೆ ಎಂದಿದ್ದಾರೆ.
ಇದಕ್ಕೆ ಸಂಬಂಧ ಪಟ್ಟವರು ಈ ಕೂಡಲೇ ದಯಮಾಡಿ ಬಿಳಿಕೆರೆಯಲ್ಲಿ ಉಪವಿಭಾಗಾಧಿಕಾರಿ ಕಛೇರಿ ಜರೂರು ಅತ್ಯವಶ್ಯಕವಾಗಿರುವುದಿರಂದ ಸರಕಾರ ಇದರ ಬಗ್ಗೆ ಗಮನಹರಿಸಿ ಇದನ್ನು ಕಾರ್ಯರೂಪಕ್ಕೆ ತರಲು ಚಿಂತಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.
ನಮ್ಮ ಆಗ್ರಹಕ್ಕೆ ಸರಕಾರ ಸ್ವಂದಿಸದಿದ್ದರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಸ್ಥಳೀಯರಿಂದ ಸಹಿ ಸಂಗ್ರಹ ಅಭಿಯಾನ ನಡೆಸಿ ಸಂಬಂಧ ಪಟ್ಟ ಇಲಾಖೆಯ ಮಂತ್ರಿಗಳ ಗಮನ ಸೆಳೆಯಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.