Sunday, April 20, 2025
Google search engine

Homeರಾಜ್ಯಸುದ್ದಿಜಾಲಸಾರ್ವಜನಿಕರ ಸಮಸ್ಯೆ ಪರಿಹರಿಸಲು ಜನತಾ ದರ್ಶನ: ಎನ್ ಚಲುವರಾಯಸ್ವಾಮಿ

ಸಾರ್ವಜನಿಕರ ಸಮಸ್ಯೆ ಪರಿಹರಿಸಲು ಜನತಾ ದರ್ಶನ: ಎನ್ ಚಲುವರಾಯಸ್ವಾಮಿ

ಮಂಡ್ಯ: ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಶಾಸಕರು ತಾಲ್ಲೂಕು ಹಾಗೂ ಗ್ರಾಮಗಳಲ್ಲಿ ಜನತಾ ದರ್ಶನ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.

ಅವರು ಇಂದು ಮಳವಳ್ಳಿ ತಾಲ್ಲೂಕಿನ ಡಾ: ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕರ ಸೇವಕರು ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕ ಸೇವಕರು. ಕಾನೂನು ಬದ್ಧವಾಗಿರುವ ಕೆಲಸವನ್ನು ಮಾಡಿಕೊಡಲು ಬದ್ಧರಾಗಿತ್ತಾರೆ. ಲಂಚ ಪಡೆಯುವುದು ತಪ್ಪು ಎನ್ನುವ ರೀತಿ ನೀಡುವುದು ಸಹ ತಪ್ಪು. ಸಾರ್ವಜನಿಕರು ತಮ್ಮ ಕೆಲಸ ಸಿಬ್ಬಂದಿಗಳ ಬಳಿ ಆಗದಿದ್ದಾಗ ಅದನ್ನು ತಹಶೀಲ್ದಾರ್ ಅಥವಾ ಹಿರಿಯ ಅಧಿಕಾರಿಗಳ ಗಮನಕ್ಕೆ ತನ್ನಿ ಅಲ್ಲೂ ಆಗದಿದ್ದಾರೆ ಶಾಸಕರ ಗಮನಕ್ಕೆ ತನ್ನಿ ಮಾಡಿಸಿಕೊಳ್ಳಿ ಭ್ರಷ್ಟಚಾರವನ್ನು ಬೆಳಸಬೇಡಿ  ಎಂದರು.

ರ್ಸಾಜನಿಕರಿಗೆ ಸ್ಪಂದಿಸಿ ಸಾರ್ವಜನಿಕರು ತಮ್ಮ ಸಮಸ್ಯೆ ಪರಿಹಾರ ಕೋರಿ ಬಂದಾಗ ಬೇರೆ ಇಲಾಖೆ ಅರ್ಜಿ ಎಂದು ಹಿಂದಿರುಗಿಸುವAತಿಲ್ಲ. ಸಂಬAಧಿಸಿದ ಇಲಾಖೆ ಅಧಿಕಾರಿಗಳೊಂದಿಗರ ಚರ್ಚಿಸಿ ಅರ್ಜಿಯನ್ನು ವರ್ಗಾಯಿಸಿ ಎಂದರು. ನಾಳೆ ನ್ಯಾಯ ಸಿಗುವ ಭರವಸೆ ಕಾವೇರಿ ನದಿ ನೀರು ಹಂಚಿಕೆ ಸಂಬAಧ ಅWಖಅ ಕರ್ನಾಟಕ ರಾಜ್ಯದ ಪರವಾಗಿ ನ್ಯಾಯ ನೀಡಲಿದೆ ಎಂದು ಸಚಿವರು ಭರವಸೆ ವ್ಯಕ್ತ ಪಡಿಸಿದರು.

ಶ್ರೀ ಸಾಮಾನ್ಯರ ಜೊತೆಯಲ್ಲಿ ಸರ್ಕಾರ ಸದಾ ಇದೆ ಎಂದು ತಿಳಿಸಲು 5 ಗ್ಯಾರಂಟಿಗಳ ಜೊತೆ ಸನ್ಮಾನ್ಯ ಮುಖ್ಯಮಂತ್ರಿಗಳು ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ಶಾಸಕ ನರೇಂದ್ರಸ್ವಾಮಿ ಪಿ.ಎಂ ಅವರು ತಿಳಿಸಿದರು. ಆಡಳಿತ ಯಂತ್ರ ನಿಷ್ಕ್ರಿಯವಾದರೇ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುತ್ತರೆ. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಸಾರ್ವಜನಿಕರಿಗೆ ಶೀಘ್ರ ಪರಿಹಾರ ಒದಗಿಸಲು ಜನತಾ ದರ್ಶನ ನಡೆಸಲಾಗುತ್ತಿದೆ. ಜನತಾ ದರ್ಶನದಲ್ಲಿ ಸಾರ್ವಜನಿಕರ ಕೆಲಸವನ್ನು ಹಂತ ಹಂತವಾಗಿ ಪರಿಹರಿಸಿಕೊಡಲಾಗುವುದು ಎಂದರು.

2 ಲಕ್ಷ ಪರಿಹಾರ ವಿತರಣೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮಳವಳ್ಳಿ ತಾಲೂಕು, ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಚ್ಚೇಗೌಡನ ದೊಡ್ಡಿ ಗ್ರಾಮದ  ಪದ್ಮ  ಎನ್ನುವವರು  ಸೆಪ್ಟೆಂಬರ್ 23ರಂದು ಹುಲ್ಲೇಗಾಲ ಗ್ರಾಮದ ಸ್ಕೂಲ್  ಗುಡ್ಡೆ ಪೂರ್ವಕ್ಕೆ ಮಣ್ಣು ಮತ್ತು ಜಲಸಂರಕ್ಷಣೆ ಮಾಡುವ ಕಾಮಗಾರಿಯಲ್ಲಿ ಕೂಲಿ ಕೆಲಸ ನಿರ್ವಹಿಸಲು ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತವಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಮರಣ  ಹೊಂದಿರುತ್ತಾರೆ . ಮೃತ ಕೂಲಿ ಕಾರ್ಮಿಕರ ಅಧಿಕೃತ ವಾರಸುದಾರರು  ಅವರ ಪತಿ ಈರಲಿಂಗ ರವರಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ ದೊರೆಯುವ ರೂ. 2.00  ಲಕ್ಷ  ರೂ ಪರಿಹಾರವನ್ನು  ಸಚಿವರು ವಿತರಿಸಿದರು.

ಆರೋಗ್ಯ ಇಲಾಖೆಯ ಆಯುಷ್ಮಾನ್ ಕಾರ್ಡ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಕನ್ಯ ಸಮೃದ್ಧಿ ಪಾಸ್ ಪುಸ್ತಕ, ಶಿಕ್ಷಣ ಇಲಾಖೆಯಿಂದ ವಿಕಲಚೇತನ ಮಕ್ಕಳಿಗೆ ಸಲಕರಣೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯಕಾರ್ಶಿ ಡಾ.ಪಿ.ಸಿ ಜಾಫರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವೀರ್ ಆಸಿಫ್, ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಉಪವಿಭಾಗಾಧಿಕಾರಿ ಶಿವಮೂರ್ತಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular