Monday, April 21, 2025
Google search engine

Homeಸ್ಥಳೀಯಜನಿವಾರ ಅವಮಾನ ಪ್ರಕರಣ: ಸಿದ್ದರಾಮಯ್ಯ ಕ್ಷಮೆ ಕೇಳಬೇಕು-ಯುವ ಭಾರತ್ ಸಂಘಟನೆ ಆಗ್ರಹ

ಜನಿವಾರ ಅವಮಾನ ಪ್ರಕರಣ: ಸಿದ್ದರಾಮಯ್ಯ ಕ್ಷಮೆ ಕೇಳಬೇಕು-ಯುವ ಭಾರತ್ ಸಂಘಟನೆ ಆಗ್ರಹ

ಮೈಸೂರು: ಸಿಇಟಿ ಪರೀಕ್ಷೆ ವೇಳೆ ಜನಿವಾರ ಧರಿಸಿದ್ದ ವಿದ್ಯಾರ್ಥಿಗಳಿಗೆ ಅಪಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ನೈತಿಕ ಹೊಣೆ ಹೊತ್ತು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಸಿದ್ದಾರ್ಥ ಲೇಔಟ್ ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ತಹಶೀಲ್ದಾರರಾದ ಶಿವಪ್ರಸಾದ್ ರವರಿಗೆ ಮೈಸೂರು ನಗರದ ಯುವ ಭಾರತ್ ಸಂಘಟನೆಯ ಸಂಚಾಲಕರು ಮನವಿ ಪತ್ರ ನೀಡಿದರು.

ನಂತರ ಮಾತನಾಡಿದ ಯುವ ಭಾರತ್ ಸಂಘಟನೆಯ ಸಂಚಾಲಕ ಜೋಗಿ ಮಂಜು ಜನಿವಾರವೋ ವಿಪ್ರ ಸಮಾಜ ಸೇರಿದಂತೆ ಇನ್ನೂ ಹಲವು ಸಮಾಜದ ಪ್ರಾಥಮಿಕ ಸಂಕೇತವಾಗಿದೆ ಅದನ್ನು ಪವಿತ್ರ ಭಾವದಿಂದ ಕಾಣಲಾಗುತ್ತಿದೆ ಆದರೆ ಪರೀಕ್ಷಾ ನೇಪವೇಳಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಕ್ರಮ ಖಂಡನೀಯ

ಬೀದರ್, ಧಾರವಾಡ, ಶಿವಮೊಗ್ಗದ ಜಿಲ್ಲಾಧಿಕಾರಿಗಳು ಪೊಲೀಸ್ ವರಷ್ಠಾಧಿಕಾರಿಗಳ ನಿರ್ಲಕ್ಷ ಇದಕ್ಕೆ ಕಾರಣವಾಗಿದೆ, ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದು ಧರ್ಮೀಯರ ಆಚರಣೆ ಸಂಸ್ಕೃತಿ, ಸಂಪ್ರದಾಯವನ್ನು ಅವಮಾನಿಸುತ್ತದೆ ಸಂವಿಧಾನ ನೀಡಿದ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯಲು ಯತ್ನಿಸುತ್ತಿದೆ ಹಾಗೆ ಜನಿವಾರ ತೆಗೆದ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಯುವ ಭಾರತ್ ಸಂಘಟನೆಯ ಸಂಚಲಕರಾದ ಜೋಗಿ ಮಂಜು, ಒಕ್ಕಲಿಗರ ಸಂಘದ ನಿರ್ದೇಶಕರಾದ ರವಿ, ಮುಖಂಡರಾದ ಕೇಬಲ್ ಮಹೇಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಆನಂದ್, ವಿನಯ್ ಪಾಂಚಜನ್ಯ ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular