Wednesday, April 9, 2025
Google search engine

Homeವಿದೇಶಜಪಾನ್: ಹೊಕ್ಕೈಡೋ ವಿಶ್ವವಿದ್ಯಾಲಯದಲ್ಲಿ ಪ್ರೊ.ಕೆ.ಎಸ್.ರಂಗಪ್ಪ ವಿಶೇಷ ಉಪನ್ಯಾಸ

ಜಪಾನ್: ಹೊಕ್ಕೈಡೋ ವಿಶ್ವವಿದ್ಯಾಲಯದಲ್ಲಿ ಪ್ರೊ.ಕೆ.ಎಸ್.ರಂಗಪ್ಪ ವಿಶೇಷ ಉಪನ್ಯಾಸ

ಮೈಸೂರು: ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ರಂಗಪ್ಪ ಅವರು ಇತ್ತೀಚಿಗೆ ಜಪಾನ್’ನ ಹೊಕ್ಕೈಡೋ ವಿಶ್ವವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಹೊಕ್ಕೈಡೋ ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನ, ಲ್ಯಾಬೊರೇಟರಿ ಸೈನ್ಸ್ ವಿಭಾಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಲ್ಝೈಮರ್ ಹಾಗೂ ಕ್ಯಾನ್ಸರ್ ರೋಗದ ಕುರಿತು ಪ್ರೊ.ರಂಗಪ್ಪ ಅವರು ವಿಶೇಷ ಉಪನ್ಯಾಸ ನೀಡಿದರು. ವಿವಿಯ ವಿವಿಧ ವಿಭಾಗಗಳ ಡೀನ್‌ಗಳು, ಪ್ರಾಧ್ಯಾಪಕರು, ನಿರ್ದೇಶಕರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.

ರಾಸಾಯನಿಕ ಜೀವಶಾಸ್ತ್ರದ ವಿವಿಧ ಅಂಶಗಳ ಕುರಿತು ಚರ್ಚೆ ನಡೆಯಿತು. ಹೊಕ್ಕೈಡೋ ವಿಶ್ವವಿದ್ಯಾನಿಲಯದ ಅಧ್ಯಕ್ಷ ಡಾ.ಹೌಕಿನ್ ಕಿಯೋಹಿರೊ ಅವರೊಂದಿಗೆ ಸಭೆ ನಡೆಸಲಾಯಿತು. ನಿರ್ದೇಶಕರು, ಅಂತರಾಷ್ಟ್ರೀಯ ವ್ಯವಹಾರಗಳ ಇಲಾಖೆ, ಎರಿ ಹಟಾ, ಕಾರ್ಯನಿರ್ವಾಹಕ ನಿರ್ದೇಶಕ ಯುಕಿಮಾಟ್ಸ್ಡುಯಸುಹಿರೊ ಮತ್ತು ಹೊಕ್ಕೈಡೊ ವಿಶ್ವವಿದ್ಯಾಲಯದ ಪ್ರೊ.ಕೆಂಜಿ ಮೊಂಡೆ ಅವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಹೊಕ್ಕೈಡೋ ವಿಶ್ವವಿದ್ಯಾಲಯದ ರಾಯಭಾರಿಯೂ ಆಗಿರುವ ಪ್ರೊ.ಕೆ.ಎಸ್.ರಂಗಪ್ಪ ಅವರು ಹಲವು ವೈಜ್ಞಾನಿಕ ಸಲಹೆಗಳನ್ನು ನೀಡಿದರು.

ಹೊಕ್ಕೈಡೊ ವಿಶ್ವವಿದ್ಯಾಲಯ ಹಾಗೂ ಕರ್ನಾಟಕದಲ್ಲಿರುವ ವಿವಿ ಹಾಗೂ ಶಿಕ್ಷಣ ಸಂಸ್ಥೆಗಳ ನಡುವೆ ನಡೆಯುವ ಸಂಶೋಧನೆಗೆ ಸಂಬಂಧಿಸಿದ ಸಹಯೋಗಗಳು, ಚಟುವಟಿಕೆಗಳು ಸೇರಿದಂತೆ ನಾನಾ ವಿಷಯಗಳ ಕುರಿತು ಸಲಹೆ ನೀಡಿದರು.

RELATED ARTICLES
- Advertisment -
Google search engine

Most Popular