Wednesday, April 9, 2025
Google search engine

Homeಸ್ಥಳೀಯಜವಾಹರ ನವೋದಯ ವಿದ್ಯಾಲಯ: ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

ಜವಾಹರ ನವೋದಯ ವಿದ್ಯಾಲಯ: ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

 ರಾಮನಗರ :ರಾಮನಗರ ಜಿಲ್ಲೆಯ ಜವಾಹರ ನವೋದಯ ವಿದ್ಯಾಲಯದಲ್ಲಿ 2024-25ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ರಾಮನಗರ ಜಿಲ್ಲೆಯ ನಿವಾಸಿಯಾಗಿದ್ದು, ಸರ್ಕಾರಿ, ಸರಕಾರದಿಂದ ಮಾನ್ಯತೆ ಪಡೆದ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ಹಾಗೂ ಮೇ 2012 ರಿಂದ ಜುಲೈ 2017ರ ಅವಧಿಯಲ್ಲಿ ಜನಿಸಿದ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಹರಾಗಿರುತ್ತಾರೆ. ಜವಾಹರ ನವೋದಯ ವಿದ್ಯಾಲಯಗಳು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ನಡೆಸುವ ಸಹಶಿಕ್ಷಣ ವಸತಿ ಶಾಲೆಗಳಾಗಿದ್ದು 6 ರಿಂದ 12ನೇ ತರಗತಿಯವರೆಗೆ ಅತ್ಯುತ್ತಮ ಉಚಿತ ಶಿಕ್ಷಣ ಸಂಸ್ಥೆಗಳಾಗಿವೆ, ಅಲ್ಲದೆ 10 ಮತ್ತು 12ನೇ ತರಗತಿ ಫಲಿತಾಂಶದಲ್ಲಿ ಇಡೀ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.

ಅರ್ಜಿಯನ್ನು navodaya.gov.in ಜಾಲತಾಣದ ನೆರವಿನಿಂದ ಆಗಸ್ಟ್ 10ರೊಳಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ.ನಂ. 9972830864, 7353665418 ಅಥವಾ 6362041094 ಗೆ ಸಂಪರ್ಕಿಸುವ0ತೆ ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular