Monday, December 2, 2024
Google search engine

Homeಕ್ರೀಡೆಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ, ಹರ್ಮನ್ ಪ್ರೀತ್

ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ, ಹರ್ಮನ್ ಪ್ರೀತ್

ಮುಂಬಯಿ: ಟೀಮ್ ಇಂಡಿಯಾದ ಹೊಸ ಏಕದಿನ ಜೆರ್ಸಿಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ವನಿತಾ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಶುಕ್ರವಾರ(ನ29) ಜಂಟಿಯಾಗಿ ಬಿಡುಗಡೆ ಮಾಡಿದರು.

ಹೊಸ ಜೆರ್ಸಿಯು ಭುಜಗಳ ಮೇಲೆ ತ್ರಿವರ್ಣದ ಗ್ರೇಡಿಯಂಟ್ ಹೊಂದಿದ್ದು, ಹಿಂದಿನದಕ್ಕಿಂದ ಸ್ವಲ್ಪ ಬದಲಾವಣೆಯಾಗಿದೆ. ಹಿಂದೆ ಬಿಳಿಯ ಮೂರು ಪಟ್ಟೆಗಳನ್ನು ಮಾತ್ರ ಹೊಂದಿತ್ತು. ಬಿಸಿಸಿಐ ವಿಡಿಯೋವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಡಿಸೆಂಬರ್ 22 ರಿಂದ 27 ರವರೆಗೆ ವಡೋದರಾದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ವನಿತಾ ತಂಡವು ಮೊದಲು ಹೊಸ ODI ಜರ್ಸಿಯನ್ನು ಧರಿಸಿ ಆಡಲಿದೆ ಎಂದು ಹರ್ಮನ್‌ಪ್ರೀತ್ ಕೌರ್ ಖಚಿತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular