Monday, April 21, 2025
Google search engine

Homeರಾಜ್ಯಜಾತ್ಯಾತೀತವಾಗಿ ಸರ್ವರನ್ನು ಒಗ್ಗೂಡಿಸಿ ಕಾರ್ಯಕ್ರಮ ನಡೆಸಿದರೆ ಜಯಂತಿ ಆಚರಣೆಗೆ ಅರ್ಥ ಬರಲಿದೆ: ಎಚ್.ವಿಶ್ವನಾಥ್

ಜಾತ್ಯಾತೀತವಾಗಿ ಸರ್ವರನ್ನು ಒಗ್ಗೂಡಿಸಿ ಕಾರ್ಯಕ್ರಮ ನಡೆಸಿದರೆ ಜಯಂತಿ ಆಚರಣೆಗೆ ಅರ್ಥ ಬರಲಿದೆ: ಎಚ್.ವಿಶ್ವನಾಥ್

ಕೆ.ಆರ್.ನಗರ: ದೇಶದಲ್ಲೇ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿರುವ ಕರ್ನಾಟಕ ಸಾರಿಗೆ ಸಂಸ್ಥೆ ನೌಕರರು ಸಮಾಜದ ಸುಧಾರಣೆಗಾಗಿ ದುಡಿದಂಥ ಮಹಾತ್ಮರ ಜಯಂತಿಗಳನ್ನು ಆಚರಣೆ ಮಾಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.

ಪಟ್ಟಣದ ಸಾರಿಗೆ ಸಂಸ್ಥೆಯ ಘಟಕದ ಕನಕ ನೌಕರರ ಬಳಗದ ವತಿಯಿಂದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕನಕದಾಸರ ಜಯಂತೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ನೌಕರರು ಜಯಂತಿ ಆಚರಣೆ ಮಾಡುವಾಗ ಜಾತ್ಯಾತೀತವಾಗಿ ಸರ್ವರನ್ನು ಒಗ್ಗೂಡಿಸಿ ಕಾರ್ಯಕ್ರಮ ನಡೆಸಬೇಕು ಆಗ ಜಯಂತಿ ಆಚರಣೆಗೆ ಅರ್ಥ ಬರಲಿದೆ ಎಂದರು.

ಎಂಜಿಆರ್‌ ಟಿಡಿ ಎಂದು ಇದ್ದ ಸಂಸ್ಥೆಯನ್ನು ಡಿ.ದೇವರಾಜ್ ಅರಸು ಸಾರಿಗೆ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿಯಾಗಿ ನಾಮಕರಣ ಮಾಡಿದರು, ಅಜೀಜ್ ಸೇಠ್‌ರವರು ಇಲಾಖೆಯ ಮಂತ್ರಿಯಾಗಿದ್ದಾಗ ಸಾರಿಗೆ ಸಂಸ್ಥೆ ಸಾಕಷ್ಟು  ಬಲಗೊಳ್ಳಲು ಕಾರಣರಾಗಿದ್ದಾರೆ ಆದ್ದರಿಂದ ನೌಕರರು ಮತ್ತು ಕಾರ್ಮಿಕರು ಈ ಇಬ್ಬರು ನಾಯಕರನ್ನ ಸ್ಮರಿಸಬೇಕು ಎಂದು ಹೇಳಿದರು.

ನೌಕರರು ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ ಇದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗಿದ್ದು, ಸಾರಿಗೆ ಸಂಸ್ಥೆ ಉತ್ತಮ ಸೇವೆ ನೀಡುತ್ತಿರುವುದಕ್ಕೆ ಸಾಕ್ಷಿಯಾಗಿದ್ದರು ಕೂಡ ಕೆಲ ಸರ್ಕಾರಗಳಲ್ಲಿ ಇಲಾಖೆ ಮಂತ್ರಿಯಾಗಿದವರು ಮತ್ತು ಅಧಿಕಾರಿಗಳು ಮಾಡುತ್ತಿರುವ ಲೋಪದಿಂದ ನಿಗಮ ನಷ್ಟ ಅನುಭವಿಸುವಂತಾಗಿತ್ತು ಎಂದು ಮಾಹಿತಿ ನೀಡಿದರು.

ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ನಾನು ಸಹಕಾರ ಮಂತ್ರಿಯಾಗಿದ್ದಾಗ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳನ್ನು ರಚನೆ ಮಾಡಿದ್ದರಿಂದ ಮಹಿಳೆಯರು ಆರ್ಥಿಕವಾಗಿ ಬಲಿಷ್ಠಗೊಳ್ಳಲು ಸಾಧ್ಯವಾಯಿತು, ಇಂದು ಸಿದ್ದರಾಮಯ್ಯನವರ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿರುವುದರಿಂದ ಮಹಿಳೆಯರು ರಾಜ್ಯ ಸುತ್ತುವಂತಾಗಿದೆ ಅದಕ್ಕಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಸಕ ಡಿ.ರವಿಶಂಕರ್ ಮಾತನಾಡಿ, ಜಾತಿ ರಹಿತ ಸಮಾಜ ನಿರ್ಮಾಣ ಮಾಡಲು ದುಡಿದಂತಹಾ ಮಹಾಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಅವರ ಜಯಂತಿ ಆಚರಣೆ ಮಾಡುವಾಗ ಸರ್ವರೂ ಪಾಲ್ಗೊಳ್ಳಬೇಕು ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದರು.

ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದ ನಂತರ ಸಾರಿಗೆ ಸಂಸ್ಥೆಯ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ ಆದರೂ ಉತ್ತಮ ಸೇವೆ ನೀಡುತ್ತಿರುವ ನೌಕರರಿಗೆ ಸಮಸ್ಯೆಗಳು ಎದುರಾದಾಗ ಘಟಕಕ್ಕೆ ಬಂದು ಸಮಸ್ಯೆ ಆಲಿಸಿ ಅವುಗಳ ಪರಿಹಾರಕ್ಕೆ ಶ್ರಮಿಸುತ್ತೇನೆ ಎಂದು ಹೇಳಿದ ಶಾಸಕರು ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಸಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು. 

ಸರ್ಕಾರ ೫,೫೦೦ ಹೊಸ ಬಸ್‌ಗಳನ್ನು ಖರೀದಿ ಮಾಡಲಿದ್ದು ಆನಂತರ ವಿತರಣೆ ಮಾಡುವ ಸಂದರ್ಭದಲ್ಲಿ ಕೆ.ಆರ್.ನಗರ ಘಟಕಕ್ಕೆ ಹೆಚ್ಚು ಬಸ್‌ಗಳನ್ನು ನೀಡುವಂತೆ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ ಶಾಸಕ ಡಿ.ರವಿಶಂಕರ್ ಹೊಸ ಬಸ್‌ಗಳು ಬಂದ ನಂತರ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಜನತೆಗೆ ಬಸ್‌ಗಳ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.

ಇದೇ ಸಂಧರ್ಭದಲ್ಲಿ ಸಂಘದ ಸದಸ್ಯರುಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಿವೃತ್ತ ನೌಕರರಿಗೆ ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು. ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಶ್ರೀನಿವಾಸ್, ಯುವ ಮುಖಂಡ ಜಿ.ಎಸ್.ವೆಂಕಟೇಶ್, ಬಳಗದ ಅಧ್ಯಕ್ಷ ಸಿ.ಸಿ.ಮಂಜುನಾಥ್, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಭಾಸ್ಕರ್ ಮಾತನಾಡಿದರು.

ಪುರಸಭೆ ಸದಸ್ಯರಾದ ಕೋಳಿಪ್ರಕಾಶ್, ನಟರಾಜು, ಟಿಎಪಿಸಿಎಂಎಸ್ ನಿರ್ದೇಶಕ ಹೆಚ್.ಪಿ.ಪ್ರಶಾಂತ್, ದೊಡ್ಡಕೊಪ್ಪಲುರವಿ, ಕಾಂಗ್ರೆಸ್ ವಕ್ತಾರ ಸೈಯದ್‌ಜಾಬೀರ್, ಯುವ ಕಾಂಗ್ರೆಸ್ ಮುಖಂಡ ನವೀದ್, ಆಡಳಿತಾಧಿಕಾರಿ ಸಿ.ಟಿ.ಮಂಜುನಾಥ್, ಕಾರ್ಮಿಕ ಕಲ್ಯಾಣಾಧಿಕಾರಿ ಪುಟ್ಟೇಗೌಡ, ಘಟಕ ವ್ಯವಸ್ಥಾಪಕ ಪಿ.ಮಹೇಶ್, ಬಳಗದ ಗೌರವಾಧ್ಯಕ್ಷ ಜಿ.ಪಿ.ಶಿವಣ್ಣ, ಪದಾಧಿಕಾರಿಗಳಾದ ಮಂಜುನಾಥ್, ಟಿ.ಯೋಗೇಶ್, ರಾಜೇಶ್, ಜಿ.ಬಿ.ಚಂದ್ರ, ಶಿವಾನಂದಪುರಿ, ಕೆ.ಆರ್.ನವೀನ್, ಅಶೋಕ್, ರವಿಚಂದ್ರ, ಶಂಕರ್‌ಗುರು ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular