ರಾಮನಗರ: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲುವಿಗೆ ಪರೋಕ್ಷವಾಗಿ ಕಾಂಗ್ರೆಸ್ ಗೆಲುವಿಗೆ ಜೆಡಿಎಸ್, ಬಿಜೆಪಿನವರೂ ಸಪೋರ್ಟ್ ಮಾಡಿದ್ದಾರೆ. ಪತ್ಯಕ್ಷ, ಪರೋಕ್ಷವಾಗಿ ಕೆಲಸ ಮಾಡದೇ ಹೋಗಿದ್ರೆ ಇಷ್ಟು ಮತ ನಮಗೆ ಬರುತ್ತಾ ಇರಲಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿ,. ಅಶ್ವಥ್ ನಾರಾಯಣ್ಗೆ ಯೋಗೇಶ್ವರ್ ಗೆಲ್ತಾರೆ ಅಂತ ಗೊತ್ತಿತ್ತು ಎಂದರು.
ಕ್ಷೇತ್ರದ ಜನರಿಗೆ ಏನು ಮಾತು ಕೊಟ್ಟಿದ್ವೊ ಅದನ್ನ ಮೊದಲು ಅನುಷ್ಠಾನ ಮಾಡಬೇಕು. ನಾನು ಯೋಗೇಶ್ವರ್, ಇಬ್ಬರೂ ಕೂತು ಚರ್ಚೆ ಮಾಡಿ ಇದಕ್ಕೆಲ್ಲ ಚಾಲನೆ ಕೊಡ್ತೇವೆ ಎಂದು ಆಶ್ವಾಸನೆ ನೀಡಿದರು.
ಕಾಂಗ್ರೆಸ್‌ಗೆ ಕೇವಲ ೧೬,೦೦೦ ಮತಗಳು ಈಗ ಜಾಸ್ತಿ ಆಗಿದೆ. ಬಿಜೆಪಿ ಪತ್ಯಕ್ಷವಾಗಿ ಪರೋಕ್ಷವಾಗಿ ಕೆಲಸ ಮಾಡದೇ ಹೋಗಿದ್ರೆ ಇಷ್ಟು ಮತ ನಮಗೆ ಬರುತ್ತಾ ಇರಲಿಲ್ಲ. ನಾನು ಅವರೆಲ್ಲರನ್ನೂ ಅಭಿನಂದಿಸುತ್ತೇನೆ ಎಂದು ನುಡಿದರು.