ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ -ಬಿಜೆಪಿ, ಮೈತ್ರಿ ನಡೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿಶ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಮಾತಾಡಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ಹೆಚ್‌ಡಿ ದೇವೇಗೌಡರು ಹೇಳಿದ್ದಾರೆ. ಮೈಸೂರು ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ. ನಾನು ಅಥವಾ ಪ್ರತಾಪ್ ಸಿಂಹ ಸಂಸದನಾಗಬೇಕು ಅಂತೇನಿಲ್ಲ. ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಬೇಕು, ಅದೇ ನಮ್ಮ ಗುರಿಯಾಗಿದೆ ಎಂದರು.
ದೇವೇಗೌಡರು ಮೋದಿ ಜೊತೆ ಮಾತಾಡಿದ್ದಾರೆ ಎಂದ ಕೊಡಲೇ ಎಲ್ಲಾ ಗೋಡೆ ಬಿದ್ದು ಹೋಯ್ತು. ದೇವೇಗೌಡರಿಗೆ ಇಡೀ ದೇಶ ಗೌರವ ನೀಡುತ್ತದೆ ಎಂದ ಜಿಟಿ ದೇವೇಗೌಡ, ಕಾಂಗ್ರೆಸ್ ಮುಕ್ತ ಮಾಡಬೇಕು ಅಂತ ಮೋದಿ ಹೇಳಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಗ್ಯಾರಂಟಿಗಳಿಂದ ಎಂದರು. ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲ್ಲ. ಮೋದಿಯನ್ನು ಸೋಲಿಸಲು ಆಗಲ್ಲ. ದೇವೇಗೌಡರು ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದರು.
ದೇವೇಗೌಡರು ಯಾರನ್ನೂ ಬಿಟ್ಟು ಕೊಡಲ್ಲ. ಕಾಂಗ್ರೆಸ್ ಆಮಿಷಕ್ಕೆ ಯಾರಾದರು ಬಲಿಯಾದರೆ ಜೆಡಿಎಸ್ ಹೊಣೆ ಅಲ್ಲ. ಬಿಜೆಪಿಯಿಂದ ಹೋಗುತ್ತಾರೆ ಅಂದರು, ಹೋಗಿದ್ದಾರಾ ಜೆಡಿಎಸ್-ಬಿಜೆಪಿಯಿಂದ ಯಾರೂ ಹೋಗುತ್ತಿಲ್ಲ ಎಂದರು.