ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಚುನಾವಣಾ ಅಖಾಡ ರಂಗೇರಿದ್ದು, ಲೋಕಸಭಾ ಚುನಾವಣೆ ಗೆಲ್ಲಲ್ಲು ಕಾಂಗ್ರೆಸ್ ತಂತ್ರಗಾರಿಗೆ ನಡೆಸಿದೆ.
ಲೋಕಸಭಾ ಚುನಾವಣೆ ಸಂಬಂಧ ಮಂಡ್ಯ ನಗರ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರೊಂದಿಗೆ ಖಾಸಗಿ ಸಮುದಾಯ ಭವನದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ನಗರಸಭೆ ಮಾಜಿ ಸದಸ್ಯರು, ಮುಖಂಡರ ಸಭೆ ನಡೆದಿದೆ.
ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಗೆಲ್ಲಿಸುವ ಬಗ್ಗೆ ಮುಖಂಡರ ಜೊತೆ ಚರ್ಚೆ ಮಾಡಲಾಗಿದೆ. ಸಭೆಯಲ್ಲಿ ಶಾಸಕ ಗಣಿಗ ರವಿಕುಮಾರ್, ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.
ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಜನರು ಉತ್ಸಾಹದಿಂದ ಸ್ವಾಭಿಮಾನದ ಚುನಾವಣೆ ರೀತಿ ಮಾಡ್ತಿದ್ದಾರೆ. ಏಂಟು ಕ್ಷೇತ್ರದಲ್ಲಿ ಕಾರ್ಯಕರ್ತರು, ಶಾಸಕರು ಒಗ್ಗಟ್ಟಿನಿಂದ ಕೆಲಸ ಮಾಡ್ತಿದ್ದಾರೆ. ಜೊತೆಗೆ ಪಕ್ಷತೀತವಾಗಿ ಒಲವು ಇದೆ. ಕಾಂಗ್ರೆಸ್ ಅಭ್ಯರ್ಥಿಗೆ ಆಶೀರ್ವಾದ ಮಾಡ್ತಾರೆ ಅನ್ನೋ ಭರವಸೆ ಇದೆ ಎಂದು ಹೇಳಿದ್ದಾರೆ.
ಚುನಾವಣೆ ಮಾಡಲು ಜೆಡಿಎಸ್ ಬಳಿ ಅಸ್ತ್ರವಿಲ್ಲ. ಅದಕ್ಕೆ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಚುನಾವಣಾಧಿಕಾರಿಗಳ ಜೊತೆ MLC ಸಭೆ ಮಾಜಿ ಶಾಸಕ ಸುರೇಶ್ ಗೌಡ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದರ ಬಗ್ಗೆ ನನಗೆ ಗೊತ್ತಿಲ್ಲ, ನನಗೂ ಸಂಬಂಧ ಇಲ್ಲ. ನಾಗಮಂಗಲದಲ್ಲಿ ನಾನು ಇರಲಿಲ್ಲ, ವೈಶಾಲಿ ಹೋಟೆಲ್ ಗೆ ಹೋಗಿ ಎರಡೂ ತಿಂಗಳು ಆಗಿದೆ. ಯಾರು ಸೇರಿದ್ರು, ಯಾತಕ್ಕೆ ಸೇರಿದ್ರು ಏನು ಅಂತ ಗೊತ್ತಿಲ್ಲ. ಮರಿತಿಬ್ಬೇಗೌಡ ನನಗೆ ಹೇಳಿಲ್ಲ, ಅದು ಯಾವುದು ಸಹ ನನಗೆ ಗೊತ್ತಿಲ್ಲ ಎಂದರು.
ಗಣಿ ಮಾಲೀಕರಿಂದ ಚುನಾವಣಾ ಫಂಡ್ ಕಲೆಕ್ಟ್ ಎಂಬ ಸುರೇಶ್ ಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರಿಗೆ ತಕೊಂಡು ಅಭ್ಯಾಸ ಇದೆ, ಅದಕ್ಕೆ ಅವರು ಹೇಳಿರುತ್ತಾರೆ. ಪಾಪ ಏನು ತಕೊಂಡಿದ್ರು ಅದನ್ನ ಇವರು ತಗೊಳ್ತಿದ್ದಾರೆ ಅಂತ ಅನ್ಕೊಂಡಿರುತ್ತಾರೆ ಅಷ್ಟೆ. ಪಾಪಾ ಅನ್ಕೊಳ್ಳಿ ಬಿಡಿ ಅವರು. ಏನು ಸಿಗದಿದ್ದಾಗ ಈ ರೀತಿಯ ಆರೋಪ. ಚುನಾವಣೆ ಮಾಡಲು ಅಸ್ತ್ರ ಇಲ್ಲ ಅದಕ್ಕೆ ಆರೋಪ ಮಾಡುತ್ತಿದ್ದಾರೆ ಎಂದರು.
ನಮ್ಮ ಹತ್ತಿರ ಅಭಿವೃದ್ಧಿ ಕೆಲಸ, ಗ್ಯಾರಂಟಿ, ಶುಗರ್ ಕಾರ್ಖಾನೆ, ಒಗ್ಗಟ್ಟು ಪ್ರಚಾರ ಮಾಡ್ತಿದ್ದೇವೆ ಇದೆ. ಅವರ ಅತ್ರ ಏನು ಇಲ್ಲ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನನ್ನ ಮೇಲೆ ಆರೋಪ ಮಾಡಬೇಕು ಅಷ್ಟೆ. ನಾವು ಒಕ್ಕಲಿಗರು ತಾನೆ, ಗಣಿಗ ರವಿಕುಮಾರ್, ಬಾಬಾಣ್ಣ, ಉದಯ್ ಗೆಲ್ಲಿಸಿಲ್ವಾ. ಒಕ್ಕಲಿಗರು ಏನು ಇವರು ಹೇಳಿದಾಗೆ ಕೇಳ್ತಾರೆ ಎಂದೇ. ಯಾವುದೇ ಸಮಾಜ ಒಂದು ಪಕ್ಷಕ್ಕೆ ಸೀಮಿತ ಇರಲ್ಲ. ಎಲ್ಲಾ ಪಕ್ಷಕ್ಕೂ ಇರುತ್ತೆ, ಎಲ್ಲಾ ಸಮಾಜ ಕೂಡ ನಮ್ಮ ಪರ ಇದೆ. ಚುನಾವಣೆ 26 ರ ವರೆಗೆ ನೋಡೋಣ ಕಿವಿ ಗಟ್ಟಿ ಮಾಡಿಕೊಳ್ಳೋಣ ಬಿಡಿ ಎಂದರು.
ಎಚ್ಚರಿಕೆ ಕೊಡೋಕೆ ನಾವೇನು ಮಕ್ಕಳ, ಸ್ಕೂಲ್ ಮಾಸ್ಟರ್ ಹಾ.? ಎಂದು ಪುಟ್ಟರಾಜು ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.
ಗಂಡಸ್ತನದ ಗುದ್ದಾಟ ಕಾಂಗ್ರೆಸ್ ನಾಯಕರಿಗೆ ಪುಟ್ಟರಾಜು ಎಚ್ಚರಿಕೆ ವಿಚಾರವಾಗಿ ಮಾತನಾಡಿ, ಓ ಓ ಪಾಪಾ ನಮಸ್ಕಾರ ನಿಮ್ಮ ಎಚ್ಚರಿಕೆ ಸ್ವೀಕಾರ ಮಾಡ್ತಾರೆ ಅಂತ ಹೇಳಿ. ಅವರು ಡೆಡ್ ಆರ್ಸ್ ಅಂತ ಹೇಳಿದ್ರು ಆಗಾ ಹೇಗಿತ್ತು? ಬೇರೆ ಬೇರೆ ಶಾಸಕರು ಮಾತನಾಡ್ತಿದ್ರು ಆಗ? ನಮ್ಮ ಶಾಸಕರ ಸ್ಪೀಡ್ ನಲ್ಲಿ ಹೇಳಿದ್ದಾರೆ, ಅದು ತಪ್ಪಿನ ಅರಿವಾಗಿದೆ. ಉದಯ್ ಜೊತೆ ಮಾತನಾಡಿದ್ದೇನೆ. ಪುಟ್ಟರಾಜು ವ್ಯಕ್ತಿತ್ವಕ್ಕೆ ಸರಿಯಾದ ರೀತಿಯಲ್ಲಿ ಹೇಳಿದ್ರೆ ಒಪ್ಪುತ್ತಿದ್ದೆ. ಅದನ್ನ ಬಿಟ್ಟು ಎಚ್ಚರಿಕೆ ಅಂದ್ರೆ ಏನು? ಮಕ್ಕಳ, ಸ್ಕೂಲ್ ಮಾಸ್ಟರ್ ಹಾ.? ಎಂದು ಪ್ರಶ್ನಿಸಿದರು.
ರವೀಂದ್ರ ಶ್ರೀಕಂಠಯ್ಯ ಅವರ ಬಾಯಿ ಮುಚ್ಚಿಸೋಕೆ ಆಗುತ್ತಾ ಇವರ ಕೈಯಲ್ಲಿ ಎಂದು ಸವಾಲು ಹಾಕಿದರು.
ನಾನು ಲೀಡರ್ ಅನ್ಲಿ ಅಂತ ಪುಟ್ಟರಾಜು ಮಾತನಾಡ್ತಾರೆ ಅಷ್ಟೆ. ಅವನು ನನ್ನ ಸ್ನೇಹಿತ ಅವನ ಮೇಲೆ ನನಗೆ ಬೇಜಾರಿಲ್ಲ ಎಂದರು.