Saturday, April 19, 2025
Google search engine

Homeರಾಜಕೀಯಮಂಡ್ಯದಲ್ಲಿ ಜೆಡಿಎಸ್, ಬೆಂಗಳೂರಿನ ಭಾಗದಲ್ಲಿ ಸುಮಲತಾ ಸ್ಪರ್ಧೆಗೆ ಅವಕಾಶ: ಕೆ.ಟಿ.ಶ್ರೀಕಂಠೇಗೌಡ

ಮಂಡ್ಯದಲ್ಲಿ ಜೆಡಿಎಸ್, ಬೆಂಗಳೂರಿನ ಭಾಗದಲ್ಲಿ ಸುಮಲತಾ ಸ್ಪರ್ಧೆಗೆ ಅವಕಾಶ: ಕೆ.ಟಿ.ಶ್ರೀಕಂಠೇಗೌಡ

ಮಂಡ್ಯ: ಲೋಕಸಭಾ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿ ಪಿಕ್ಸ್ ಆಗಿದ್ದು, ಸುಮಲತಾ ಅವರಿಗೆ ಬೆಂಗಳೂರಿನ ಭಾಗದಲ್ಲಿ ಸ್ಪರ್ಧೆಗೆ ಅವಕಾಶ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಬೆನ್ನಲ್ಲೇ ಮಾತನಾಡಿದ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಮಂಡ್ಯದಲ್ಲಿ ಜೆಡಿಎಸ್ ಗೆಲ್ಲುತ್ತದೆ. ಸುಮಲತಾ ಅವರಿಗೆ ಬೆಂಗಳೂರಿನ ಭಾಗದಲ್ಲಿ ಅವಕಾಶ ಮಾಡಿಕೊಡ್ತಾರೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಗೆ ಜೆಡಿಎಸ್ – ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿದ ಕೆ.ಟಿ.ಶ್ರೀಕಂಠೇಗೌಡ, ಮೈತ್ರಿ ಬಗ್ಗೆ ಈಗಾಗಲೇ ಚರ್ಚೆಯಾಗಿದೆ, ದೇವೇಗೌಡ ಅವರೇ ಸಭೆಯಲ್ಲಿ ಮೈತ್ರಿ ಸುಳಿವನ್ನು ಕೊಟ್ಟಿದ್ದಾರೆ. ಈ ಹಿಂದೆಯೇ ಬಿಜೆಪಿ ಜೊತೆ ಸರ್ಕಾರವನ್ನು ಕೂಡ ಮಾಡಿದ್ದೇವೆ. ಇಂದಿನ ಕಾಂಗ್ರೆಸ್ ನಡೆ ಕಂಡು ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಾಗುವ ಬಗ್ಗೆ ಜನಾಭಿಪ್ರಾಯ ಇದೆ ಎಂದು ಹೇಳಿದರು.

ಜೆಡಿಎಸ್ ಸಮಾವೇಶದಲ್ಲಿ ಜೆಡಿಎಸ್ ಕಾರ್ಯಕರ್ತರು ಬೆಂಬಲ ಕೊಟ್ಟಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆ ಅಷ್ಟೆ ಅಲ್ಲದೇ ಮುಂದಿನ ಎಲ್ಲಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ನಿಶ್ಚಯವಾಗಿದೆ. ಹಾಸನ-ಮಂಡ್ಯ ಸೇರಿ 7 ಕ್ಷೇತ್ರ ಕೇಳಿದ್ದೇವೆ. ಅಂತಿಮವಾಗಿ ಬಿಜೆಪಿ-ಜೆಡಿಎಸ್ ವರಿಷ್ಠರು ತಿರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಮಂಡ್ಯದಲ್ಲಿ ಸಂಸದೆ ಸುಮಲತಾ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಮಂಡ್ಯ ಕೇಳಿದ್ದೇವೆ ಅವರಿಗೆ ಬೇರೆ ಕಡೆ ಅವಕಾಶ ಕೊಡ್ತಾರೆ. ಸುಮಲತಾ ಸ್ಪರ್ಧೆ ಬಗ್ಗೆ ವರಿಷ್ಠರು ತಿರ್ಮಾನ. ಚುನಾವಣೆಗೆ ನಿಲ್ಲುವುದು ಪ್ರತಿಯೊಬ್ಬರ ಹಕ್ಕು ಅವರಿಗೆ ಬಿಟ್ಟ ವಿಚಾರ. ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆ ಅವರ ತೀರ್ಮಾನಕ್ಕೆ ಬದ್ದರಾಗಿರುತ್ತಾರೆ  ಎಂದರು.

ಈ ಬಾರಿ ಮಂಡ್ಯದಲ್ಲಿ ಕಾಂಗ್ರೆಸ್ ಬಗ್ಗೆ ಅಭಿಪ್ರಾಯ ಹೋಗಿದೆ. ತಮಿಳುನಾಡಿಗೆ ನೀರು ಬಿಟ್ಟು ನಮ್ಮ ಜನರನ್ನು ಬಲಿ ಕೊಟ್ಟಿದ್ದಾರೆ. ಕಾಂಗ್ರೆಸ್ ಜನರ ರಕ್ಷಣೆ ಮಾಡಲ್ಲ. ಕಾಂಗ್ರೆಸ್ ಕೊಟ್ಟ ಮಾತನ್ನು ಯಾವತ್ತು ಉಳಿಸಿಕೊಂಡಿಲ್ಲ. ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾಗ ಬೆಂಬಲ ಕೊಟ್ಟಿದ್ದು, ಕಾಂಗ್ರೆಸ್ 10 ತಿಂಗಳ ಬಳಿಕ ಕೆಳಗಿಳಿಸಿದ್ದು ಅವರೆ. ರಾಜ್ಯದಲ್ಲಿ ನೀವೇ ಸರ್ಕಾರ ನಡೆಸಿ ಅಂತ ಹೇಳಿ ಶಾಸಕರನ್ನ ವಾಪಸ್ ಕಳಿಸಿದರು. ಸುಮಲತಾ ಅವರು ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದಾಗ ಕಾಂಗ್ರೆಸ್ ನವರು ನಾವು ಗೆಲ್ಲಿಸಿದ್ದು ತಪ್ಪಾಯ್ತು ಎಂದು ಹೇಳಿದ್ದರು ಎಂದು ತಿಳಿಸಿದರು.

ತುಮಕೂರಿನಲ್ಲಿ ದೇವೇಗೌಡರನ್ನು ಸೋಲಿಸಿದ್ದು ಕಾಂಗ್ರೆಸ್.  ಮಂಡ್ಯದಲ್ಲಿ ನಿಖಿಲ್ ಸೋಲಿಸಿದ್ದು ಕೂಡ ಕಾಂಗ್ರೆಸ್ ನವರೇ. ಕಾಂಗ್ರೆಸ್ ನವರು ಹೊಂದಾಣಿಕೆ ವಿಶ್ವಾಸವನ್ನು ಉಳಿಸಿಕೊಂಡಿಲ್ಲ. ಕೊಟ್ಟ ಮಾತಿನಂತೆ ಕಾಂಗ್ರೆಸ್ ಯಾವ ಸಂದರ್ಭದಲ್ಲು ನಡೆದಿಲ್ಲ. ಹೊಂದಾಣಿಕೆ ವೈಫಲ್ಯತೆ ಕಾಂಗ್ರೆಸ್ ಗೆ ಸಲ್ಲುತ್ತೆ ಎಂದರು.

ಎಂಪಿ ಚುನಾವಣೆಯಲ್ಲಿ ಕೆಟಿಎಸ್ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಶಿಕ್ಷಕ ಕ್ಷೇತ್ರಕ್ಕೆ ಹೋಗಲು ನಮ್ಮ ನಾಯಕರು ಸೂಚನೆ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ. ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಸಿದ್ದತೆ ಮಾಡಿಕೊಳ್ಳುತ್ತಿದ್ದೇನೆ ಎಂದರು.

RELATED ARTICLES
- Advertisment -
Google search engine

Most Popular