ಮಂಡ್ಯ: ಜೆಡಿಎಸ್ ಮುಖಂಡ ಅಪ್ಪುಗೌಡ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ಪುಗೌಡನ ಕೊಲೆಗೆ ಸ್ನೇಹಿತನೇ ಸುಪಾರಿ ನೀಡಿರುವುದು ಗೊತ್ತಾಗಿದೆ.
ಅಪ್ಪುಗೌಡನ ಸ್ನೇಹಿತ ಹಾಗೂ ಬ್ಯುಸಿನೆಸ್ ಪಾರ್ಟನರ್ ಆಗಿದ್ದ ಮಧು,ಜೈಲಿನಲ್ಲಿದ್ದ ಕುಖ್ಯಾತ ರೌಡಿಗೆ ಸುಪಾರಿ ನೀಡಿದ್ದ ಎನ್ನಲಾಗಿದೆ.
ವ್ಯವಹಾರದಲ್ಲಿ ಮನಸ್ತಾಪವಾಗಿ ಇಬ್ಬರು ಸ್ನೇಹಿತರು ದೂರವಾಗಿದ್ದು, ಇತ್ತೀಚಿಗೆ ಮಧು ವಿರುದ್ಧ ಅಪ್ಪುಗೌಡ ಚೆಕ್ ಬೌನ್ಸ್ ಕೇಸ್ ಹಾಕಿದ್ದ. ಇದರಿಂದ ಕೋಪಗೊಂಡಿದ್ದ ಮಧು ಅಪ್ಪುಗೌಡನ ಕೊಲೆಗೆ ನಿರ್ಧರಿಸಿದ್ದ. ಅದರಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಜಗದೀಶ್ ಗೆ ಸುಫಾರಿ ನೀಡಿದ್ದ. ಜಗದೀಶ್ ಜೈಲಿನಲ್ಲೆ ಕುಳಿತು ಅಪ್ಪುಗೌಡನ ಕೊಲೆಗೆ ಸ್ಕೆಚ್ ಹಾಕಿದ್ದ. ಅದರಂತೆ ಇಂದು ಜಗದೀಶ್ ಸಹಚರರಿಂದ ಅಪ್ಪುಗೌಡ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಅದೃಷ್ಟವಶಾತ್ ಅಪ್ಪುಗೌಡ ಬದುಕುಳಿದಿದ್ದಾನೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧು ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ.
ಮನೋಜ್ ಅಲಿಯಾಸ್ ಪಾಪಣ್ಣಿ, ಅಜಯ್ ಅಲಿಯಾಸ್ ಕ್ಯಾಟ್, ಮನೋಜ್ ಅಲಿಯಾಸ್ ಮಂಡೇಲಾ, ಮನು ಅಲಿಯಾಸ್ ಹುಲಿ, ನಿಶ್ಚಿತ್ ಅಲಿಯಾಸ್ ಮಲ್ಲಿ, ಅನಿಲ್ ಬಂಧಿತ ಆರೋಪಿಗಳಾಗಿದ್ದಾರೆ.