ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಜೆಡಿಎಸ್ ಪಕ್ಷದ ರಾಜ್ಯದ ನೂತನ ಕಾರ್ಯಧ್ಯಕ್ಷರಾಗಿ ನೇಮಕ ಗೊಂಡ ಮಾಜಿ ಸಚಿವ ಸಾ.ರಾ.ಮಹೇಶ್ ಅವರನ್ನು ಬೇಟಿ ಮಾಡಿದ ಕೆ.ಆರ್.ನಗರ ಜೆಡಿಎಸ್ ಪಕ್ಷದ ಮುಖಂಡರು ಅಭಿನಂದಿಸಿ ಶುಭ ಕೋರಿದರು ಮೈಸೂರಿನಲ್ಲಿರುವ ಸಾ.ರಾ.ಮಹೇಶ್ ಅವರ ಕಚೇರಿಯಲ್ಲಿ ಬೇಟಿಮಾಡಿದ ಕೆ.ಆರ್.ನಗರ ಜೆಡಿಎಸ್ ಮುಖಂಡರು ಸಾ.ರಾ.ಮಹೇಶ್ ಅವರನ್ನು ಕಾರ್ಯಾಧ್ಯಕ್ಷರಾಗಿ ನೇಮಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾ.ರಾ.ಮಹೇಶ್ ಅವರು ನಮ್ಮ ಸಂಘಟನೆ ನಾಯಕತ್ವ ಮೆಚ್ಚಿ ರಾಜ್ಯ ಮಟ್ಟದ ಕಾರ್ಯಾಧ್ಯಕ್ಷ ಹುದ್ದೆ ನೀಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರ ನಂಬಿಕೆ ಉಳಿಸಿ ಪಕ್ಷ ಸಂಘಟನೆ ಮಾಡುವುದಾಗಿ ತಿಳಿಸಿದರು

ಕೆ.ಆರ್.ನಗರದಲ್ಲಿ ಬೃಹತ್ ಅಭಿನಂದನಾ ಕಾರ್ಯಕ್ರಮ : ಸಾ.ರಾ.ಮಹೇಶ್ ಅವರನ್ನು ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷ ಹುದ್ದೆ ನೀಡಿರುವ ಹಿನ್ನಲೆಯಲ್ಲಿ ಕೆ.ಆರ್.ನಗರದ ರೇಡಿಯೋ ಮೈಧಾನದಲ್ಲಿ ಬೃಹತ್ ಅಭಿನಂದನಾ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದಿನಾಂಕ ನೀಡಿದ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಒಕ್ಕಲಿಗ ಕೋ ಕ್ರೆಡಿಟ್ ಕೊ ಅಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ವಡ್ಡರಕೊಪ್ಪಲು ಶಿವರಾಮು ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಹೊಸೂರು ಎಚ್.ಕೆ.ಕೀರ್ತಿ, ಜೆಡಿಎಸ್ ಅಧ್ಯಕ್ಷ ಹಂಪಾಪುರ ಕುಮಾರ್, ಎಪಿಎಂಸಿ ಮಾಜಿ ನಿರ್ದೇಶಕ ಬಂಡಹಳ್ಳಿ ಕುಚೇಲ್, ಮುಖಂಡರಾದ ಮೂ.ರಾ.ಹರ್ಷಕುಮಾರ್ ಗೌಡ, ಮುದುಗುಪ್ಪೆ ಮಂಜಣ್ಣ, ಸಾಲಿಗ್ರಾಮ ರಮೇಶ್,
ವಡ್ಡಕೊಪ್ಪಲು ಶ್ರೀಧರ್, ಸಿ.ವಿ.ಗುಡಿ ಶಂಬು,ಯೋಗೇಶ್, ತೋಟದ ಮಂಜು, ಕನುಗನಹಳ್ಳಿ ಸಂದೇಶ್, ಚಿಕ್ಕನಾಯಕನಹಳ್ಳಿ ಸುರೇಶ್, ಚಾಮುಂಡೇಶ್ವರಿ ಬಾರ್ ಮನು, ಮಾಯಿಗೌಡನಹಳ್ಳಿ ಪಾಟೀಲ, ನಿವೃತ್ತ ಕೃಷಿ ಅಧಿಕಾರಿ ಮಲ್ಲಪ್ಪ, ನಿವೃತ್ತ ಆರ್.ಐ.ಪ್ರಭಾಕರ್, ನಿವೃತ್ತ ಇಂಜಿನಿಯರ್ ಶಿಗವಾಳ್ ಪ್ರಕಾಶ್, ಸೇರಿದಂತೆ ಮತ್ತಿತರರು ಸಾ.ರಾ.ಮಹೇಶ್ ಅವರನ್ನು ಅಭಿನಂಧಿಸಿದರು.