Friday, April 4, 2025
Google search engine

Homeರಾಜಕೀಯನಿಖಿಲ್ ಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನ; ಪಕ್ಷದಲ್ಲೇ ವಿರೋಧ?

ನಿಖಿಲ್ ಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನ; ಪಕ್ಷದಲ್ಲೇ ವಿರೋಧ?

ಚನ್ನಪಟ್ಟಣ: ಉಪಚುನಾವಣೆ ಮುಗಿದ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳು ನಡೆದಿವೆ. ಅದರಲ್ಲೂ ಜೆಡಿಎಸ್‌ ಪಕ್ಷಕ್ಕೆ ನಿಖಿಲ್‌ ಸೋಲು ನುಂಗಲಾರದ ತುತ್ತಾಗಿತ್ತು. ಇದರ ನಡುವೆಯೇ ನಿಖಿಲ್‌ಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಮಾತುಗಳು ಕೇಳಿಬಂದಿದ್ದವು. ಆದರೆ ಈ ನಡೆಗೆ ಜೆಡಿಎಸ್‌ ಪಕ್ಷದಲ್ಲೇ ತೀವ್ರವಾದ ವಿರೋಧ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.

ನಿಖಿಲ್ ವಿರುದ್ಧ ಪಕ್ಷದಲ್ಲೇ ಅಪಸ್ವರ ಕೇಳಿ ಬಂದಿದ್ಯಾಕೆ ಎಂಬ ಪ್ರಶ್ನೆ ಜೆಡಿಎಸ್‌ ವಲಯದಲ್ಲಿ ಹರಿದಾಡುತ್ತಿದೆ. ಜೆಡಿಎಸ್ ನಲ್ಲಿ ಸೀನಿಯರ್-ಜೂನಿಯರ್ ಫೈಟ್ ಶುರುವಾಗಿ ಬಿಟ್ಟಿದೆ. ನಿಖಿಲ್‌ರನ್ನ  ಅಧ್ಯಕ್ಷರನ್ನಾಗಿ ಮಾಡಲು ಹಿರಿಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ನಿರ್ಧಾರವನ್ನ ಮರುಪರಿಶೀಲಿಸುವಂತೆ ಕುಮಾರಸ್ವಾಮಿಗೂ ಒತ್ತಾಯ ಹಾಕಿದ್ದಾರೆ.

ಇನ್ನೂ ಈ ಬಗ್ಗೆ ಚರ್ಚೆ ನಡೆಸಲು ಶೀಘ್ರವೇ ದೇವೇಗೌಡರನ್ನ ಭೇಟಿ ಮಾಡಿ ಮಾತು ಕತೆ ನಡೆಸಲಿದ್ದಾರೆ. ರಾಜಕೀಯವಾಗಿ ನಿಖಿಲ್ ಕುಮಾರಸ್ವಾಮಿ ಮುನ್ನೆಲೆಗೆ ಬಂದಿಲ್ಲ. ಸ್ಪರ್ಧಿಸಿದ್ದ ಮೂರು ಚುನಾವಣೆಗಳಲ್ಲೂ ಸೋಲು ಕಂಡಿದ್ದಾರೆ. ನಿಖಿಲ್ ಕುಮಾರಸ್ವಾಮಿಯಿಂದಲೇ ಚುನಾವಣೆ ಗೆಲ್ಲಲು ಆಗ್ಲಿಲ್ಲ. HD ದೇವೇಗೌಡರ ನಾಮಬಲ, HD ಕುಮಾರಸ್ವಾಮಿಯವರ ತಂತ್ರಗಾರಿಕೆ ಮಧ್ಯೆಯೂ ಸೋಲಾಗಿದೆ. ಪಕ್ಷದ ಭದ್ರಕೋಟೆಗಳಲ್ಲೇ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ. ಹೀಗಿರಬೇಕಾದ್ರೆ ರಾಜ್ಯಾದ್ಯಂತ ಪಕ್ಷವನ್ನ ಹೇಗೆ ಮುನ್ನಡೆಸ್ತಾರೆ ಎಂದು ನಿಖಿಲ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಉತ್ತಮ ಆಯ್ಕೆ ಅಲ್ಲ ಎಂದು ಜೆಡಿಎಸ್‌ ಹಿರಿಯರು ಅಭಿಪ್ರಾಯ ಪಟ್ಟಿದ್ದಾರೆ.

ನಿಖಿಲ್ ಕುಮಾರಸ್ವಾಮಿಗೆ ವಯಸ್ಸು ಇಲ್ಲ..ಅನುಭವವೂ ಇಲ್ಲ, ಈ ಪರಿಸ್ಥಿತಿಯಲ್ಲಿ ಹೇಗೆ ಅವ್ರ ಜೊತೆ ಕೆಲಸ ಮಾಡಲು ಸಾಧ್ಯ.? ಬೇಕಿದ್ರೆ ಕುಮಾರಸ್ವಾಮಿಯೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿ, ಇಲ್ಲ ಅಂದ್ರೆ ಪಕ್ಷದ ಹಿರಿಯರೊಬ್ಬರನ್ನ ಅಧ್ಯಕ್ಷರನ್ನಾಗಿ ನೇಮಿಸಿ ಎಂದು ಜೆಡಿಎಸ್ ನ ಹಿರಿಯ ಮುಖಂಡರಿಂದ ಒತ್ತಡ ಹೆಚ್ಚಾಗಿರುವುದು ಎಂದು ತಿಳಿದುಬಂದಿದೆ.

RELATED ARTICLES
- Advertisment -
Google search engine

Most Popular