Thursday, April 17, 2025
Google search engine

Homeರಾಜ್ಯಅಧಿಕಾರಕ್ಕಾಗಿ ಜೆಡಿಎಸ್ ನವರು ಯಾರ ಜೊತೆಯದರೂ ಮೈತ್ರಿ ಮಾಡಿಕೊಳ್ಳುತ್ತಾರೆ: ಸಿದ್ದರಾಮಯ್ಯ

ಅಧಿಕಾರಕ್ಕಾಗಿ ಜೆಡಿಎಸ್ ನವರು ಯಾರ ಜೊತೆಯದರೂ ಮೈತ್ರಿ ಮಾಡಿಕೊಳ್ಳುತ್ತಾರೆ: ಸಿದ್ದರಾಮಯ್ಯ

ಹುಬ್ಬಳ್ಳಿ: ಮಾಜಿ ಪ್ರಧಾನಿ ದೇವೇಗೌಡ ಅವರು ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲ್ಲ‌ ಎಂದಿದ್ದರು. ಆದರೆ ಇದೀಗ ಬಿಜೆಪಿಯವರ ಜೊತೆ ಸೇರಿ‌ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಕ್ಕಾಗಿ ಯಾರ ಜೊತೆಯಾದರೂ ಜೆಡಿಎಸ್ ​ನವರು ಸೇರಿಕೊಳ್ಳುತ್ತಾರೆ ಎಂಬುದು ಸಾಬೀತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಜೆಡಿಎಸ್​ನವರು ಜಾತ್ಯತೀತ ಅಂತ ಹೆಸರಿಟ್ಟುಕೊಂಡು ಕೋಮುವಾದಿಗಳ ಜೊತೆ ಮೈತ್ರಿಗೆ ಮುಂದಾಗಿರುವುದು ದುರ್ದೈವದ ಸಂಗತಿ ಎಂದರು.

ನಾನು ಜೆಡಿಎಸ್​ನ ಬಿಜೆಪಿಯ ‘ಬಿಟೀಂ‌’ ಅಂತಿದ್ದೆ ಅದಕ್ಕೆ ಅವರು ಕೋಪಿಸಿಕೊಳ್ಳುತ್ತಿದ್ದರು. ಈಗ ಜ್ಯಾತ್ಯಾತೀತ ಹೆಸರಿಟ್ಟುಕೊಂಡು ಕೋಮುವಾದಿಗಳೊಂದಿಗೆ ಸೇರಿಕೊಂಡಿದ್ದಾರೆ. ದೇವೇಗೌಡರು ಯಾರೊಂದಿಗೂ ಸೇರಿಕೊಳ್ಳಲ್ಲ ಅಂತ ಪಕ್ಷದ ಉಳಿವಿಗಾಗಿ ಸೇರಿಕೊಂಡ್ವಿ ಅಂತಾರೆ.‌ ಅಧಿಕಾರಕ್ಕಾಗಿ ಏನೆಲ್ಲಾ ಮಾಡುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಟೀಕಿಸಿದರು.

ಜಿ 20ಗೆ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಆಹ್ವಾನ ಮಾಡದಿರುವ ವಿಚಾರವಾಗಿ ಮಾತನಾಡಿದ ಅವರು, ವಿಪಕ್ಷ ನಾಯಕರನ್ನ ಆಹ್ವಾನ‌ ಮಾಡದಿರುವುದು ತಪ್ಪು. ಅಧಿಕೃತವಾಗಿ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಬೇಕಿತ್ತು. ಆದರೆ ಜಿ20 ಸಭೆಗೆ ನ ಕರಿದಿಲ್ಲ. ಕರಿಯುತ್ತಿದ್ದರೆ ಹೋಗುತ್ತಿದೆ. ಕೇವಲ ಊಟಕ್ಕೆ ಕರೆದಿದ್ದರಿಂದ ನಾನು ಹೋಗುವದಿಲ್ಲ, ನಾನು ಜಿ.20 ಸದಸ್ಯ ಅಲ್ಲ, ಎಂದು ಸ್ವಲ್ಪ ಖಾರವಾಗಿ ನುಡಿದರು.

ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ. ಗುಜರಾತ್ ಸಿಎಂ ಆಗಿ ನರೇಂದ್ರ ಮೋದಿಯವರು ಮುಂದೆ ಪ್ರಧಾನಿಯಾಗಿದ್ದಾರೆ. ನನ್ನ ಅಭಿಮಾನಿಗಳಿಗೆ ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕೆಂಬ ಅಪೇಕ್ಷೆ ಇದೆ. ಆದರೆ ನಾನು ಯಾವುದೇ ಕಾರಣಕ್ಕೂ ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.

RELATED ARTICLES
- Advertisment -
Google search engine

Most Popular