ಚಿಂತಾಮಣಿ: ಜೆಲ್ಲಿ ಕಲ್ಲು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಹೋಟಲ್ ಗೆ ನುಗ್ಗಿದ ಪರಿಣಾಮ ಇಬ್ಬರು ಸಾವನ್ನಪ್ಪಿ ಇಬ್ಬರಿಗೆ ಗಂಬೀರ ಸ್ವರೂಪದ ಗಾಯಗಳಾಗಿರುವ ಘಟನೆ ಗುರುವಾರ ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಕೋಲಾರ ಸರ್ಕಲ್ ನಲ್ಲಿ ನಡೆದಿದೆ.
ಅಪಘಾತದಲ್ಲಿ ಸ್ಥಳದಲ್ಲೆ ಸಾವನ್ನಪ್ಪಿರುವ ವ್ಯಕ್ತಿಗಳು ಕೋಲಾರ ವೃತ್ತದಲ್ಲಿನ ದರ್ಶಿನಿ ಹೋಟಲ್ ನ ಕ್ಯಾಶಿಯರ್ 50 ವರ್ಷದ ಶಿವಾನಂದ ಆಗಿದ್ದು ಕೋಲಾರ ತಾ. ವೆಗಲಬುರ್ರೆ ಗ್ರಾಮದ ಆಡಿಗೆ ಕೆಲಸ ಮಾಡುವ ಕುಮಾರ್ ಮತ್ತು ಶ್ರಿನಿವಾಸಬಾಬು ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಯಲ್ಲಿ ಮತ್ತೊಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ.
ಗುರುವಾರ ಬೆಳಿಗ್ಗೆ ಚಿಂತಾಮಣಿ ನಗರದಿಂದ ಕೋಲಾರ ವೃತ್ತದ ಕಡೆ ಜೆಲ್ಲಿ ಕಲ್ಲು ತುಂಬಿಕೊಂಡು ತೆರಳುತ್ತಿದ್ದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕೋಲಾರ ವೃತ್ತದಲ್ಲಿನ ದರ್ಶನ್ ಹೋಟಲ್ ಗೆ ನುಗ್ಗಿ ಪಲ್ಟಿಯಾಗಿ ಬಿದ್ದಿದೆ.