Wednesday, April 16, 2025
Google search engine

Homeರಾಜ್ಯಸುದ್ದಿಜಾಲಮಾನವೀಯತೆಯ ಮೌಲ್ಯಗಳನ್ನು ಭಿತ್ತಿದ ಪವಾಡ ಪುರುಷ ಯೇಸು ಕ್ರಿಸ್ತ: ದೊಡ್ಡಸ್ವಾಮೇಗೌಡ

ಮಾನವೀಯತೆಯ ಮೌಲ್ಯಗಳನ್ನು ಭಿತ್ತಿದ ಪವಾಡ ಪುರುಷ ಯೇಸು ಕ್ರಿಸ್ತ: ದೊಡ್ಡಸ್ವಾಮೇಗೌಡ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಕ್ರೈಸ್ತ ರ ಆರಾಧ್ಯ ಧೈವವಾಗಿರುವ ಯೇಸು ಕ್ರಿಸ್ತನು ಜನರ ಒಳಿತಿಗಾಗಿ ತನ್ನ ಪ್ರಾಣವನ್ನೆ ತ್ಯಾಗ ಮಾಡಿ ಮತ್ತೆ ಮರುಜನ್ಮ ತಾಳಿದ ಮಹಾನ್ ಪುರುಷನಾಗಿದ್ದು ಆತ ದೇವರ ಪ್ರತಿ ರೂಪ ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು.

ಪಟ್ಟಣದ ಸುಭಾಷ್ ನಗರದಲ್ಲಿರುವ ದಿವ್ಯ ಕರುಣೆಯ ದೇವಾಲಯದಲ್ಲಿ ಕ್ರಿಸ್ ಮಸ್ ಹಬ್ಬದ ಅಂಗವಾಗಿ ಪುರಸಭೆ ಸದಸ್ಯ ನಟರಾಜ್ ಕೊಡಮಾಡಿದ ಕೇಕ್ ಗಳನ್ನು ವಿತರಿಸಿ ಮಾತನಾಡಿದ ಅವರು ಕ್ರಿ.ಪೂ 4 ರಲ್ಲಿ ಜನಿಸಿದ ಅವರು ಮಾನವೀಯತೆಯ ಮೌಲ್ಯ ಗಳನ್ನು ಭಿತ್ತಿದ ಪವಾಡ ಪುರುಷ ಎಂದರು.

ಕೊಟ್ಟಿಗೆಯಲ್ಲಿ ಜನ್ಮ ತಾಳಿದ ಯೇಸು ಕ್ರಿಸ್ತನು ಪ್ರಪಂಚದ ಎಲ್ಲರ ಉದ್ದಾರಕ್ಕೆ ತನ್ನ ಜೀವನ ವನ್ನು ಮುಡುಪಾಗಿಟ್ಟು ಆದರ್ಶ ದೈವವಾಗಿದ್ದು ಅವರ ಜೀವನ ಮತ್ತು ಸಂದೇಶಗಳು ಸದಾ ಪ್ರಸ್ತುತ ಎಂದು ಅಭಿಪ್ರಾಯ ಪಟ್ಟರು.
ಸಮಾಜದ ಒಳಿತಿಗಾಗಿ ಕೆಟ್ಟದರ ನಾಶಕ್ಕಾಗಿ ಯೇಸು ಕ್ರಿಸ್ತನು ಮತ್ತೆ ಜನ್ಮ ತಾಳಿದ ಎಂದು ಕಥೆಗಳು ಹೇಳುತ್ತಿದ್ದು 1870ರ ಡಿ.25 ರ ದಿನವನ್ನು ಕ್ರಿಸ್ ಮಸ್ ದಿನವಾಗಿ ಆಚರಿಸುತ್ತಿದ್ದು ಇದು ಜಗತ್ತಿನ ಹಬ್ಬವಾಗಿದೆ ಎಂದು ಹೇಳಿದರು.

ಜಗತ್ತಿನ ಎಲ್ಲೆಡೆ ಕ್ರಿಸ್ ಮಸ್ ಹಬ್ಬವನ್ನು ಎಲ್ಲರೂ ಜ್ಯಾತ್ಯಾತೀತವಾಗಿ ಆಚರಿಸುತ್ತಿದ್ದು ಇದರಲ್ಲಿ ನಾವು ಪಾಲ್ಗೊಳ್ಳುತ್ತಿದ್ದು ಹೊಸ ವರ್ಷಕ್ಕೆ ಐದು ದಿನಗಳು ಬಾಕಿ ಇರುವ ಯೇಸು ಕ್ರಿಸ್ತನ ಜನ್ಮ ದಿನವು ಸರ್ವರಿಗೂ ಆಶಾದಾಯಕ ಭವಿಷ್ಯವನ್ನು ನೀಡಲಿ ಎಂದು ಆರೈಸಿದರು.

ಪುರಸಭೆ ಸದಸ್ಯ ನಟರಾಜ್ ಮಾತನಾಡಿ ಪಟ್ಟಣದ ನನ್ನ ವಾರ್ಡಿನ ವ್ಯಾಪ್ತಿಗೆ ಸೇರಿದ ಚರ್ಚಿನಲ್ಲಿ ನಿರಂತರವಾಗಿ ಸಮಾಜ ಮುಖಿ ಕೆಲಸಗಳು ನಡೆಯುತ್ತಿದ್ದು ಇಂತಹಾ ಕೆಲಸ ಮಾಡುವ ವರಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು.

ಚರ್ಚ್ ನ ಫಾದರ್ ರಾಯಪ್ಪ ಮಾತನಾಡಿ ಯೇಸು ಕ್ರಿಸ್ತನ ಜನ್ಮ ದಿನವು ಜಗತ್ತಿನ ಸಕಲ ಜೀವ ರಾಶಿಗಳಿಗೂ ಒಳಿತನ್ನು ಉಂಟು ಮಾಡಲಿ ಎಂದು ಶುಭ ಹಾರೈಸಿದರು.

ಪುರಸಭೆ ಸದಸ್ಯ ಶಿವುನಾಯಕ್, ಮಾಜಿ ಸದಸ್ಯ ಕೆ.ವಿನಯ್, ಸಂತ ಅಂತೋಣಿ ಶಿಕ್ಷಣ ಸಂಸ್ಥೆ ಮುಖ್ಯ ಶಿಕ್ಷಕಿ ಪುಷ್ಪ, ಮುಖಂಡರಾದ ಪುಟ್ಟರಾಜು, ಮಂಜುನಾಥ್, ಆದರ್ಶ, ಇಮ್ಯಾನ್ಯುಯಲ್ ಕ್ರಿಸ್ಟಿ, ಪಿಲೀಪ್, ಚಾರ್ಚ್, ಸಿಸ್ಟರ್ ಪ್ರಿಯಲತಾ, ಸಿಸ್ಟರ್ ರೀಮಾ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular