ಬೆಂಗಳೂರು: ಯುವಕ-ಯುವತಿಯರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಪತ್ನೂಲ್ ಕಲಂದರ್ ಖಾನ್ (43) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಭಾರತ ಮೂಲದ ಈ ಆರೋಪಿಯಿಂದ ₹1.50 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಖಾನ್ ಸುಮಾರು 8 ಅಭ್ಯರ್ಥಿಗಳಿಂದ ₹14.23 ಲಕ್ಷ ವಂಚಿಸಿದ್ದಾನೆ.
2024ರಲ್ಲಿ ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಂದಿದ್ದ ಈತ, ಬಿಟಿಎಂ ಲೇಔಟ್‌ನ ಮ್ಯಾಗ್ನಾಮಿಕ್ಸ್ ಸರ್ವೀಸ್ ಪ್ರೈ.ಲಿ.ನಲ್ಲಿ HR ಮತ್ತು ಟ್ರೈನರ್ ಆಗಿ ಕೆಲಸ ಮಾಡಿಕೊಂಡಿದ್ದ. ನಂತರ, MNC ಉದ್ಯೋಗ ಒದಗಿಸುತ್ತೇನೆ ಎಂಬ ಹೆಸರಿನಲ್ಲಿ ಅಭ್ಯರ್ಥಿಗಳಿಂದ ಹಣ ಸಂಗ್ರಹಿಸಿದ್ದಾನೆ.
ಗೀತಾ ಎಂಬ ಮಹಿಳೆ ತನ್ನ ಬಳಿ ₹2.70 ಲಕ್ಷ ಪಡೆದಿದ್ದಾನೆಂದು ದೂರು ನೀಡಿದ್ದು, ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಖಾನ್‌ಗೆ ವಿರೇಶ್ ಮತ್ತು ಇನಾಯತ್ ಸಹಾಯ ಮಾಡಿದ್ದು, ಇಬ್ಬರೂ ನಾಪತ್ತೆಯಾಗಿದ್ದಾರೆ. ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.