Friday, April 4, 2025
Google search engine

Homeವಿದೇಶಜಾನ್ ಜೆ. ಹಾಪ್‌ಫೀಲ್ಡ್ , ಜೆಫ್ರಿ ಇ. ಹಿಂಟನ್​​ಗೆ 2024ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ

ಜಾನ್ ಜೆ. ಹಾಪ್‌ಫೀಲ್ಡ್ , ಜೆಫ್ರಿ ಇ. ಹಿಂಟನ್​​ಗೆ 2024ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ

ಜಾನ್ ಜೆ. ಹಾಪ್‌ಫೀಲ್ಡ್ ಮತ್ತು ಜೆಫ್ರಿ ಇ. ಹಿಂಟನ್ ಅವರ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್​​ ನಡೆಸಿದ ಅಧ್ಯಯನಕ್ಕಾಗಿ 2024ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಸಿಕ್ಕಿದೆ. ನರಗಳ ಜಾಲದಲ್ಲಿ ಕೃತಕ ಯಂತ್ರಗಳನ್ನು ಸಕ್ರಿಯಗೊಳಿಸುವ ಬಗ್ಗೆ ನಡೆಸಿದ ಸಂಶೋಧನೆಗಳು ಮತ್ತು ಆವಿಷ್ಕಾರಕ್ಕಾಗಿ ಇಬ್ಬರಿಗೂ ಕೂಡ ನೊಬೆಲ್​​ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಸ್ತುತ ಕಾಲಮಾನದಲ್ಲಿ ದೇಹದ ನರಗಳಲ್ಲಿ ಶಕ್ತಿಶಾಲಿ ಯಂತ್ರ ಕಲಿಕೆಗೆ ಇದು ಅಡಿಪಾಯವಾಗಲಿದೆ.

ಈ ಸಂಶೋಧನೆಗೆ ಸಂಬಂಧಿಸಿದಂತೆ ಜಾನ್ ಹಾಪ್‌ಫೆಲ್ಡ್ ಅವರು ಡೇಟಾ, ಅದರ ಚಿತ್ರ, ಇತರ ರೀತಿಯ ಮಾದರಿಗಳನ್ನು ಸಂಗ್ರಹಿಸಲು ಮತ್ತು ಮರುನಿರ್ಮಾಣ ಮಾಡಲು ಸಹಾಯಕ ತಂತ್ರಗಳನ್ನು ಬಳಸಿದ್ದಾರೆ. ಜೆಫ್ರಿ ಹಿಂಟನ್ ಅವರು ಜಾನ್ ಹಾಪ್‌ಫೆಲ್ಡ್ ಅವರು ನೀಡಿದ ಡೇಟಾಗಳ ಆಧಾರದ ಮೇಲೆ ಅವುಗಳ ಗುಣಲಕ್ಷಣಗಳನ್ನು ಸ್ವಾಯತ್ತವಾಗಿ ಕಂಡುಹಿಡಿಯುತ್ತಾರೆ.

ಕೃತಕ ಬುದ್ಧಿಮತ್ತೆಯ ರೀತಿಯಲ್ಲೇ ಕೃತಕ ನರ ಜಾಲಗಳನ್ನು ಬಳಸಿಕೊಂಡು ಯಂತ್ರ ಕಲಿಕೆ ಮಾಡುವುದು ಎಂದರ್ಥವಾಗಿದೆ. ಈ ತಂತ್ರಜ್ಞಾನವು ಮೆದುಳಿನ ರಚನೆಯಿಂದ ಪ್ರೇರಿತವಾಗಿದೆ.

ಕೃತಕ ನರಮಂಡಲದಲ್ಲಿ, ಮೆದುಳಿನ ನ್ಯೂರಾನ್‌ಗಳು ವಿಭಿನ್ನ ಮೌಲ್ಯಗಳ ಬಗ್ಗೆ ಅಧ್ಯಯನ ಮಾಡುತ್ತದೆ. ಇನ್ನು ಈ ಅಧ್ಯಯನಕ್ಕೆ 1980 ರ ದಶಕದಿಂದ ಕೃತಕ ನರಗಳ ಜಾಲದ ಮಾದರಿಯನ್ನು ಬಳಸಲಾಗಿದೆ.

RELATED ARTICLES
- Advertisment -
Google search engine

Most Popular