Friday, April 11, 2025
Google search engine

HomeUncategorizedರಾಷ್ಟ್ರೀಯಜಂಟಿ ಪ್ರವೇಶ ಪರೀಕ್ಷೆ(ಜೆಇಇ)-ಅಡ್ವಾನ್ಸ್ಡ್ ಫಲಿತಾಂಶ ಪ್ರಕಟ

ಜಂಟಿ ಪ್ರವೇಶ ಪರೀಕ್ಷೆ(ಜೆಇಇ)-ಅಡ್ವಾನ್ಸ್ಡ್ ಫಲಿತಾಂಶ ಪ್ರಕಟ

ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ (ಜೆಇಇ)-ಅಡ್ವಾನ್ಸ್ಡ್ ಫಲಿತಾಂಶಗಳನ್ನು ಇಂದು ಬೆಳಿಗ್ಗೆ ಪ್ರಕಟಿಸಲಾಗಿದ್ದು, ಐಐಟಿ ದೆಹಲಿ ವಲಯದ ವೇದ್‌ ಲಹೋಟಿ 360 ಅಂಕಗಳಲ್ಲಿ 355 ಗಳಿಸುವ ಮೂಲಕ ಉನ್ನತ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ.

ಐಐಟಿ ಪ್ರವೇಶಕ್ಕಾಗಿ ಒಟ್ಟು 48,248 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, ಅವರಲ್ಲಿ 7,964 ಮಹಿಳೆಯರಿದ್ದಾರೆ. ಈ ಬಾರಿಯ ಪರೀಕ್ಷೆಯನ್ನು ನಡೆಸಿದ ಐಐಟಿ ಮದ್ರಾಸ್‌‍ ಪ್ರಕಾರ, ಐಐಟಿ ಬಾಂಬೆ ವಲಯದ ದ್ವಿಜಾರ್ಮೇಶ್‌ಕುರ್ಮಾ ಪಟೇಲ್‌ 360 ಅಂಕಗಳಿಗೆ 322 ಅಂಕಗಳೊಂದಿಗೆ ಮಹಿಳಾ ಅಭ್ಯರ್ಥಿಯಾಗಿ ಅಗ್ರಸ್ಥಾನ ಪಡೆದಿದ್ದಾರೆ. ಆಕೆಯ ಅಖಿಲ ಭಾರತ ಶ್ರೇಣಿ 7 ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್‌ 10 ರಲ್ಲಿರುವ ಇತರ ಅಭ್ಯರ್ಥಿಗಳು

ಆದಿತ್ಯ (ಐಐಟಿ ದೆಹಲಿ ವಲಯ),ಪೊಗಲ್‌ಪಲ್ಲಿ ಸಂದೇಶ್‌ (ಐಐಟಿ ಮದ್ರಾಸ್‌‍ ವಲಯ), ರಿದಮ್‌ ಕೆಡಿಯಾ (ಐಐಟಿ ರೂರ್ಕಿ ವಲಯ), ಪುಟ್ಟಿ ಕುಶಾಲ್‌ ಕುಮಾರ್‌ (ಐಐಟಿ ಮದ್ರಾಸ್‌‍), ರಾಜ್‌ದೀಪ್‌ ಮಿಶ್ರಾ (ಐಐಟಿ ಬಾಂಬೆ ವಲಯ), ಕೊಡೂರಿ ತೇಜೇಶ್ವರ್‌ (ಐಐಟಿ ಮದ್ರಾಸ್‌‍ ವಲಯ), ಹೇಮಂತ್‌ ದೋಷಿ (ಐಐಟಿ ಬಾಂಬೆ ವಲಯ) ಮತ್ತು ಅಲ್ಲದಬೋನ ಎಸ್‌‍ಎಸ್‌‍ಡಿಬಿ ಸಿಧ್ವಿಕ್‌ ಸುಹಾಸ್‌‍ (ಐಐಟಿ ಮದ್ರಾಸ್‌‍ ವಲಯ). ಜೆಇಇ-ಮೇನ್‌‍, ಇದು ದೇಶಾದ್ಯಂತ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಪ್ರವೇಶ ಪರೀಕ್ಷೆಯಾಗಿದ್ದು, ಜೆಇಇ-ಅಡ್ವಾನ್ಸ್ಡ್ಗೆ ಅರ್ಹತಾ ಪರೀಕ್ಷೆಯಾಗಿದೆ.

RELATED ARTICLES
- Advertisment -
Google search engine

Most Popular