ಮೈಸೂರು: ಹಿರಿಯ ಪತ್ರಕರ್ತರಾದ ಕೆ.ವಿ. ಶ್ರೀನಿವಾಸನ್ (ಬ್ರದರ್) ಅವರು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಸ್ಥಾಪಿಸಿರುವ ನಾಲ್ಕು ದತ್ತಿ ಪ್ರಶಸ್ತಿಗೆ ಕೆಳಕಂಡ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.
1.ಮುದ್ರಣ ಮಾಧ್ಯಮ ವಿಭಾಗದಿಂದ ಮಹಾತ್ಮ ಗಾಂಧಿ ಪ್ರಶಸ್ತಿ- ಆರ್ ಸುವರ್ಣ (ನಗರ ಬೆಳಕು)
- ಛಾಯಾಗ್ರಾಹಕ ವಿಭಾಗದಿಂದ ಜಾನಕಮ್ಮ ವೆಂಕಟಪ್ಪ ಗೌಡ ಪ್ರಶಸ್ತಿ- ಶ್ರೀ ರಾಮ್ ಎಂ.ಎ (ದಿ ಹಿಂದೂ)
- ಗ್ರಾಮಾಂತರ ವಿಭಾಗದಿಂದ ಕೆ ವಿ ಶ್ರೀನಿವಾಸನ್ ಪ್ರಶಸ್ತಿ- ಎಸ್ ಮಂಜುನಾಥ್ (ಬೀಚನಹಳ್ಳಿ ಮಂಜು) (ಎಚ್ ಡಿ ಕೋಟೆ ಮೈಸೂರು ಮಿತ್ರ)
- ವಿದ್ಯುನ್ಮಾನ ವಿಭಾಗದಿಂದ ಜೆಪಿ ಸ್ಮಾರಕ ಮಾಧ್ಯಮ ಪ್ರಶಸ್ತಿಗೆ-ಬಾಪುಲಿಂಗರಾಜ್ ಅರಸ್(ಕಸ್ತೂರಿ ಟಿವಿ) ಅವರು ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಶೀಘ್ರದಲ್ಲೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ನಡೆಯಲಿದೆ. ಪ್ರಶಸ್ತಿಗೆ ಭಾಜನರಾಗಿರುವ ಎಲ್ಲ ಪತ್ರಕರ್ತರಿಗೂ ಸಂಘದ ಅಧ್ಯಕ್ಷರಾದ ಎಸ್.ಟಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ ಸುಬ್ರಹ್ಮಣ್ಯ, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.