Saturday, April 19, 2025
Google search engine

Homeರಾಜ್ಯಸುದ್ದಿಜಾಲಶಿಕ್ಷಣಕ್ಕೆ ಅಭಿವೃದ್ಧಿಯ ರೂಪ ನೀಡಿದ 'ಜೆಎಸ್ಎಸ್' ಸಂಸ್ಥೆ

ಶಿಕ್ಷಣಕ್ಕೆ ಅಭಿವೃದ್ಧಿಯ ರೂಪ ನೀಡಿದ ‘ಜೆಎಸ್ಎಸ್’ ಸಂಸ್ಥೆ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಗೆ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಕೊಡುಗೆ ಅಪಾರ. ಲಕ್ಷಾಂತರ ಜನರ ಶಿಕ್ಷಣ, ಆರೋಗ್ಯ, ಉದ್ಯೋಗ, ಶಿಕ್ಷಣ ತರಬೇತಿ, ಕೌಶಲ್ಯ ತರಬೇತಿ ಹಾಗೂ ಬದುಕು ರೂಪಿಸಿದ ಮಹಾನ್ ಸಂಸ್ಥೆ. ಜೆಎಸ್ಎಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ರಾಜ ಗುರು ತಿಲಕ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಸೇವೆ ಎಂದೂ ಮರೆಯಲಾಗದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್. ಋಗ್ವೇದಿ ತಿಳಿಸಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಸುತ್ತೂರು ಶ್ರೀ ಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರ 108 ರ ಜನ್ಮದಿನದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ ಮಾತನಾಡುತ್ತಾ ಗಡಿಭಾಗವಾದ ಚಾಮರಾಜನಗರ ಹಲವು ದಶಕಗಳ ಹಿಂದೆ ತುಂಬಾ ಹಿಂದುಳಿದ ಪ್ರದೇಶವಾಗಿತ್ತು. ಜೆಎಸ್ಎಸ್ ಶಿಕ್ಷಣ ಸಂಸ್ಥೆಯನ್ನು ಕಟ್ಟಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನದಾಸೋಹ ಅಕ್ಷರ ದಾಸೋಹವನ್ನು ನೀಡಿದ ಪುಣ್ಯವಂತರು. ಅವರ ಸಂಸ್ಥೆಯಲ್ಲಿ ಓದಿ ಇಂದು ಬದುಕು ರೂಪಿಸಿಕೊಂಡಿರುವ ಲಕ್ಷಾಂತರ ಮಂದಿ ಗೆ ಸ್ಮರಣೆಯರಾಗಿದ್ದಾರೆ. ಚಾಮರಾಜನಗರವನ್ನು ಶಿಕ್ಷಣದ ಅಭಿವೃದ್ಧಿಯ ರೂಪ ನೀಡಿದ ಜೆಎಸ್ಎಸ್ ಸಂಸ್ಥೆ ಚಾಮರಾಜನಗರ ಜನತೆ ಸದಾ ಋಣಿಯಾಗಿರುತ್ತಾರೆ. ಶಿಕ್ಷಣ ಆರೋಗ್ಯ ಕಲೆ ಸಾಹಿತ್ಯ ಸಂಗೀತ ವಸತಿ ನಿಲಯಗಳ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಿದ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರನ್ನು ಸದಾ ಗೌರವಿಸಬೇಕು . ಜೆಎಸ್ಎಸ್ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿ ಎಂದು ಕರೆಸಿಕೊಳ್ಳುವುದು ಗೌರವ ಎಂದು ಋಗ್ವೇದಿ ತಿಳಿಸಿದರು.

ಅಖಿಲ ಕರ್ನಾಟಕ ಕನ್ನಡ ಮಹಾಸಭೆಯ ಅಧ್ಯಕ್ಷರಾದ ಶ್ರೀನಿವಾಸ ಗೌಡ ಮಾತನಾಡಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಕೊಡುಗೆ ಸದಾ ಹಸಿರಾಗಲು ಚಾಮರಾಜನಗರದ ವೃತ್ತಕ್ಕೆ ಅವರ ಹೆಸರನ್ನು ಇಡುವ ಬಗ್ಗೆ ಸರ್ವರೂ ತೀರ್ಮಾನಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಂಘಟನೆಗಳ ಮೂಲಕ ಸರ್ವ ಜನರು ಸೇರಿ ಕಾರ್ಯವನ್ನು ಯಶಸ್ವಿಯಾಗಿ ಮಾಡೋಣ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ರವಿಚಂದ್ರಪ್ರಸಾದ್ ಕಹಳೆ ಮಾತನಾಡಿ ರಾಜೇಂದ್ರ ಮಹಾಸ್ವಾಮಿಗಳು ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನ್ನ ನೀಡಿ ಶಿಕ್ಷಣವನ್ನು ನೀಡಿ ಮೈಸೂರು ಪ್ರಾಂತ್ಯದಲ್ಲಿ ಅಭಿವೃದ್ಧಿಯ ಕಾರ್ಯ ಮಾಡಿದವರು . ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜನಗರದ ಶಿಕ್ಷಣದ ಮಹಾ ತಪಸ್ವಿಯನ್ನು ನೆನೆಸಿಕೊಂಡು ಕಾರ್ಯಕ್ರಮ ರೂಪಿಸಿರುವುದು ಮೆಚ್ಚುವಂತಹ ಕಾರ್ಯ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಎಸ್ ಲಕ್ಷ್ಮಿ ನರಸಿಂಹ ,ಸರಸ್ವತಿ ,ಬಿಕೆ ಆರಾಧ್ಯ, ಡಾ. ಮಂಜುನಾಥ್, ಸುರೇಶ್ ಗೌಡ , ಚಾ ಹ ರಾಮು, ನಂಜುಂಡಸ್ವಾಮಿ ,ಗೋವಿಂದರಾಜು, ಬೊಮ್ಮಾಯಿ ,ಸೋಮಣ್ಣ ಇದ್ದರು.

RELATED ARTICLES
- Advertisment -
Google search engine

Most Popular