ಮೈಸೂರು: ಜೆಎಸ್‌ಎಸ್ ವಿಜ್ಞಾನ ಮತ್ತುತಂತ್ರಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಡಾ. ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್‌ಟೆಕ್ನಾಲಜಿ ವತಿಯಿಂದ ೧೩.೦೪.೨೦೨೪ ರಂದು ಏರ್ಪಡಿಸಲಾಗಿದ್ದ ೮ನೇ ರಾಷ್ಟ್ರ ಮಟ್ಟದತಾಂತ್ರಿಕ ಪ್ರದರ್ಶನದಲ್ಲಿ ಎರಡನೆಯ ಸ್ಥಾನ ಪಡೆದಿದ್ದು, ರೂ. ೫೦,೦೦೦/- ಗಳ ನಗದು ಬಹುಮಾನ ಪಡೆದುಕೊಂಡಿದ್ದಾರೆ.
PHYSIO Assistive device ಉಪಕರಣದಯೋಜನೆಯನ್ನು ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಪ್ರದರ್ಶಿಸಿರುತ್ತಾರೆ. ಈ ಯೋಜನೆಯುಜಾಗತಿಕ ಮಟ್ಟದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಗಮನಾರ್ಹವಾಗುತ್ತಿರುವ ಹೃದಯ ರಕ್ತನಾಳದ ಕಾಯಿಲೆಗಳ ಆಧಾರಿತವಾಗಿರುತ್ತದೆ. ಹೃದಯರಕ್ತನಾಳದ ಕಾಯಿಲೆಗಳ ಆರೈಕೆ ವಿಶೇಷ ಉಪಕರಣಗಳ ಅಭಾವದಿಂದಾಗಿ ಒಂದು ಸವಾಲಾಗಿದೆ. ಆದಾಗ್ಯೂ, IoT ಆಧಾರಿತ ತಂತ್ರಜ್ಞಾನಗಳು ಸಂಬಂಧಿಸಿದ ರೋಗ ನಿರ್ವಹಣೆಯಲ್ಲಿ ಬಹಳ ಪರಿಪೂರ್ಣವಾಗಿ ಕಾರ್ಯ ಪ್ರವೃತ್ತಿಯಲ್ಲಿವೆ. ‘ಫಿಸಿಯೋ ಅಸಿಸ್ಟಿವ’ ಉಪಕರಣವುಒಂದು ಸುಧಾರಿತ ಪರಿಹಾರವಾಗಿದ್ದು, ನೈಜ ಸಮಯದ ಮೇಲ್ವಿಚಾರಣೆಗಾಗಿ ಸಂವೇದಕಗಳನ್ನು ಸಂಯೋಜಿಸುತ್ತದೆ ಹಾಗೂ ದೂರ ಸ್ಥಳಗಳಲ್ಲಿರುವ ರೋಗಿಗಳನ್ನು ವೀಕ್ಷಿಸಿ ವೈಯಕ್ತೀಕರಿಸಿದ ಚಿಕಿತ್ಸೆ ನೀಡಬಹುದಾಗಿರುತ್ತದೆ. ಇದರಿಂದಾಗಿ ರೋಗಿಯ ಜೀವನದ ಗುಣಮಟ್ಟವು ಅಭಿವೃದ್ದಿ ಹೊಂದುತ್ತದೆ.
ಅಧ್ಯಾಪಕ ಪ್ರೊ. ರವಿಶಂಕರ್ ಬಿ ಎಸ್ ಮತ್ತು ವಿಭಾಗದ ಮುಖ್ಯಸ್ಥ ಡಾ. ಎಂ.ಹೆಚ್ ಸಿಧ್ರಾಮ್‌ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಪರ್ವೇಜ್‌ಖಾನ್, ಸುಜಯ್ ಹೆಚ್‌ಎಲ್, ಮಾನಸಾ ಕೆ, ಸ್ಮಿತಾ ಹೆಗ್ಡೆ ಪಿ ರವರು PHYSIO Assistive device ಅನ್ನು ರಚಿಸಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತಮಂಡಳಿ ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಶ್ಲಾಘಿಸಿರುತ್ತಾರೆ.