ಗುಂಡ್ಲುಪೇಟೆ: ಪಟ್ಟಣದಲ್ಲಿ ಜು.10ರಂದು ರಫ್ತು ಗುಣಮಟ್ಟದ ಅರಿಶಿಣ ಉತ್ಪಾದನೆ ಕುರಿತು ಒಂದು ದಿನದ ಕಾರ್ಯಾಗಾರ, ಉತ್ಪಾದಕತೆ ಹೆಚ್ಚಳ ಮತ್ತು ಉತ್ಪಾದನಾ ವೆಚ್ಚ ನಿಯಂತ್ರಣಗೊಳಿಸಿ ಉಳಿತಾಯ ಹೆಚ್ಚಿಸುವ ಕುರಿತು ರೈತರಿಗೆ ಒಂದು ದಿನದ ಕಾರ್ಯಾಗಾರ ನಡೆಯಲಿದೆ.
ಪಟ್ಟಣದ ಗುರುಭವನದಲ್ಲಿ ತೋಟಗಾರಿಕಾ ಇಲಾಖೆ ಮತ್ತು ರಾಜ್ಯ ಅರಿಶಿಣ ಬೆಳೆಗಾರರ ಒಕ್ಕೂಟ ಸಹಯೋಗದಲ್ಲಿ ನಡೆಯುವ ಕಾರ್ಯಾಗಾರದಲ್ಲಿ ಐಸಿಎಆರ್ ಉಪ ಮಹಾನಿರ್ದೇಶಕ ಎನ್.ಕೆ.ಕೃಷ್ಣಕುಮಾರ್, ಪ್ರಧಾನ ವಿಜ್ಞಾನಿ ಡಿ.ಪ್ರಶಾಂತ್, ಸುತ್ತೂರು ಕೆವಿಕೆ ಮಣ್ಣು ವಿಜ್ಞಾನಿ ರಾಜಣ್ಣ, ತೋಟಗಾರಿಕಾ ಕಾಲೇಜು, ಜಿಕೆವಿಕೆ ಕ್ಯಾಂಪಸ್ ಬೆಂಗಳೂರಿನ ಸಹಾಯಕ ಪ್ರಾಧ್ಯಾಪಕ ಡಾ.ಬಿ.ಎಸ್.ಹರೀಶ್, ಭಾರತ ಸರಕಾರದ ಸಾಂಬಾರು ಮಂಡಳಿ ಹಿರಿಯ ಕ್ಷೇತ್ರಾಧಿಕಾರಿ ಎಸ್.ಕುಮಾರ್, ಒಲೆಮ್ ಪುಟ್ ಇನ್ಗ್ರೇಡಿಯೆಂಟ್ಸ್‍ನ ಹಿರಿಯ ವ್ಯವಸ್ಥಾಪಕ ಪೆÇನ್ನಣ್ಣ, ಎಚ್‍ಡಿಎಫ್‍ಸಿ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಜಿ.ಸ್ವಾಮಿ ರಫ್ತು ಗುಣಮಟ್ಟದ ಅರಿಶಿಣ ಉತ್ಪಾದನೆ ಕುರಿತು ಒಂದು ದಿನದ ಕಾರ್ಯಾಗಾರ, ಉತ್ಪಾದಕತೆ ಹೆಚ್ಚಳ ಮತ್ತು ಉತ್ಪಾದನಾ ವೆಚ್ಚ ನಿಯಂತ್ರಣಗೊಳಿಸಿ ಉಳಿತಾಯ ಹೆಚ್ಚಿಸುವ, ಮಣ್ಣು ಪರೀಕ್ಷೆ, ಮಾರುಕಟ್ಟೆ ವ್ಯವಸ್ಥೆ, ಸಾಲ ಸೌಲಭ್ಯ ಇನ್ನೂ ಹಲವು ವಿಷಯಗಳ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ.
ಪ್ರಾಯೋಗಿಕವಾಗಿ ತಾಲೂಕಿನ ಆಸಕ್ತ 300 ರೈತರಿಗೆ ಸೀಮಿತಗೊಳಿಸಿ ಆಯೋಜಿಸಲಾಗುತ್ತಿದೆ. ಆದ್ದರಿಂದ ಕಾರ್ಯಾಗಾರದ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ರಾಜ್ಯ ಅರಿಶಿನ ಬೆಳೆಗಾರರ ಒಕ್ಕೂಟ ಮತ್ತು ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.