ಗುಂಡ್ಲುಪೇಟೆ: ಪಟ್ಟಣದಲ್ಲಿ ಜು.31 ರಂದು ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ-ಲಿಂಗಾಯಿತ ಸಂಘಟನೆಗಳ ಒಕ್ಕೂಟದ ವತಿಯಿಂದ ವಿಜೃಂಭಣೆಯ ಬಸವ ಜಯಂತಿ ಆಚರಿಸಲು ತೀರ್ಮಾನಿಸಲಾಯಿತು.
ಪಟ್ಟಣದ ಸೋಮೇಶ್ವರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜು.31 ರಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಂದಿಧ್ವಜ, ವೀರಭದ್ರ ಕುಣಿತ ಇತರೆ ಕಲಾತಂಡಗಳೊಂದಿಗೆ ಶ್ರೀ ಬಸವೇಶ್ವರ ಭಾವಚಿತ್ರದ ಅದ್ದೂರಿ ಮೆರವಣಿಗೆ ಮಾಡುವುದು. ಪ್ರಸಾದ ವಿನಿಯೋಗ ಇತರೆ ಕಾರ್ಯಕ್ರಮಗಳನ್ನು ನಿರ್ವಹಿಸುವ ಬಗ್ಗೆ ತೀರ್ಮಾನಿಸಲಾಯಿತು.
ಬಸವ ಜಯಂತಿ ಯಶಸ್ವಿಗೆ ಹಿಂದೆ ಇದ್ದ ಹೋಬಳಿವಾರು ಸಮಿತಿಗಳವರೇ ಪಟ್ಟಣ ಮತ್ತು ಗ್ರಾಮ ಮಟ್ಟದಲ್ಲಿ ವ್ಯಾಪಕ ಪ್ರಚಾರ ಮಾಡಲು, ಅದ್ದೂರಿ ಮೆರವಣಿಗೆಗೆ ಸಿದ್ದತೆ ಕಾರ್ಯ ಮತ್ತು ನಿರ್ವಹಣೆ, ಪ್ರಸಾದ ತಯಾರಿಕೆ, ವಿನಿಯೋಗ, ಆರ್ಥಿಕ ಸಂಪನ್ಮೂಲ ಕ್ರೂಢೀಕರಣ ಇತರೆ ಜವಬ್ದಾರಿಗಳನ್ನು ನಿರ್ವಹಿಸುವುದಾಗಿ ಒಪ್ಪಿಕೊಂಡರು. ಸಮುದಾಯದ ಜನಪ್ರತಿನಿಧಿಗಳು, ಉದ್ಯಮಿಗಳು ಇತರೆ ಸಮುದಾಯದ ಎಲ್ಲರ ಸಹಕಾರ ಪಡೆಯುವ ಮೂಲಕ ಅರ್ಥ ಪೂರ್ಣ ಕಾರ್ಯಕ್ರಮ ಆಚರಿಸುವ ನಿರ್ಣಯ ಮಾಡಲಾಯಿತು.
ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ-ಲಿಂಗಾಯತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.