ಮಂಡ್ಯ: ಬೆಂ-ಮೈ ದಶಪಥ ಹೆದ್ದಾರಿ ಪಕ್ಕದಲ್ಲಿರುವ ಕಟ್ಟೇದೊಡ್ಡಿ ಗ್ರಾಮದಲ್ಲಿ ಬಳಿ ಕಾಡಾನೆಗಳ ತಂಡ ಬೀಡು ಬಿಟ್ಟಿವೆ.
ನೆನ್ನೆಯಿಂದಲೂ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹರಸಹಾಸ ಪಟ್ಟಿದ್ದು, ಇಸ್ರೇಲ್ ಮೂಲದ ತಜ್ಞರು ತಂಡ ಭೇಟಿ ಕೊಟ್ಟು ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸಿದ್ದರು.

ತಜ್ಞರ ತಂಡ ಚಿಕ್ಕಮಂಡ್ಯದಿಂದ ಬೂದನೂರು ವರೆಗೂ ಕಾರ್ಯಾಚರಣೆ ನಡೆಸಿತ್ತು. ಇದೀಗ ಕಟ್ಟೇದೊಡ್ಡಿಯ ಕಬ್ಬಿನ ಗದ್ದೆಯಲ್ಲೆ ಗಜಪಡೆಗಳು ಬೀಡು ಬಿಟ್ಟಿದ್ದು, ಆನೆಗಳ ನೋಡಲು ಜನರು ಮುಗಿಬಿದ್ದಿದ್ದಾರೆ.
ಆನೆಗಳಿಂದ ಸುತ್ತಮುತ್ತಲಿನ ಬೆಳೆಗೆ ಹಾನಿಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಕಾರ್ಯಾಚರಣೆ ನಡೆಸುತ್ತಿದ್ದಾರೆ.