ಮೈಸೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಆಗ್ರಹಿಸಿ ಮೈಸೂರು ಅಥ್ಲೆಟಿಕ್ಸ್ ತರಬೇತುದಾರರು ಹಾಗೂ ಅಥ್ಲೆಟಿಕ್ಸ್ ಕ್ರೀಡಾಪಟುಗಳು ಮೈಸೂರು ವಿವಿ ಓವಲ್ ಮೈದಾನದ ಬಳಿ ಶುಕ್ರವಾರ ಸಂಜೆ ಕೆಲಕಾಲ ಪ್ರತಿಭಟಿಸಿದರು.
ತಲೆಗೆ ಕಪ್ಪು ಪಟ್ಟಿ ಧರಿಸಿ, ಕೈಯಲ್ಲಿ ಮೇಣದ ಬತ್ತಿ ಹಿಡಿದು ಪ್ರತಿಭಟಿಸಿದ ಅವರು, ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆ ಆಗಲಿ, ಸೌಜನ್ಯಳ ಆತ್ಮಕ್ಕೆ ಶಾಂತಿ ಸಿಗಲಿ, ಸೌಜನ್ಯಳಿಗೆ ನ್ಯಾಯ ಸಿಗಲಿ, ಹೆಣ್ಣು ಮಕ್ಕಳ ಶೋಷಣೆ ನಿಲ್ಲಲಿ. ಮೊದಲಾದ ಘೋಷಣೆ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಓವಲ್ ಗ್ರೂಪ್‌ನ ರವಿ, ಚಂದ್ರಶೇಖರ್ ಮೊದಲಾದವರು ಇದ್ದರು.