Wednesday, April 30, 2025
Google search engine

Homeರಾಜ್ಯಸುದ್ದಿಜಾಲನಾಮಧಾರಿ ಸಮಾಜಕ್ಕೆ ನ್ಯಾಯ: ಶಾಸಕರಿಂದ ಪ್ರವರ್ಗ 2(A) ಸೇರಿಸಲು ವಿಧಾನಸಭೆಯಲ್ಲಿ ಚರ್ಚೆಗೆ ಆಗ್ರಹ

ನಾಮಧಾರಿ ಸಮಾಜಕ್ಕೆ ನ್ಯಾಯ: ಶಾಸಕರಿಂದ ಪ್ರವರ್ಗ 2(A) ಸೇರಿಸಲು ವಿಧಾನಸಭೆಯಲ್ಲಿ ಚರ್ಚೆಗೆ ಆಗ್ರಹ

ವರದಿ:ವಿನಯ್ ದೊಡ್ಡಕೊಪ್ಪಲು

ಹೊಸೂರು : ನಾಮಧಾರಿ ಸಮಾಜವನ್ನು ಪ್ರವರ್ಗ 2(A) ಕ್ಕೆ ಸೇರಿಸಲು ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಬೆಂಬಲ ಇದ್ದು ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ವಿಧಾನ ಸಭೆಯಲ್ಲಿ ಚರ್ಚೆ ನಡೆಸುವುದಾಗಿ ಶಾಸಕ‌ ಡಿ.ರವಿಶಂಕರ್ ಹೇಳಿದರು.

ಸಾಲಿಗ್ರಾಮ ತಾಲೂಕಿನ ಕುಪ್ಪೆ ಗ್ರಾಮದಲ್ಲಿ ನಡೆದ ನಾಮದಾರಿ ಗೌಡರ ಸಂಘದ ಮೂರನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು‌. ಜಾತಿಗಣತಿಯಲ್ಲಿ‌ ನಾಮದಾರಿ ಸಮುದಾಯ ರಾಜ್ಯದಲ್ಲಿ 21 ಸಾವಿರ ಇದೆ ಎಂದು ಮಾಹಿತಿ ಸೋರಿಕೆಯಾಗಿದೆ ಎಂಬುದು ಸತ್ಯಕ್ಕೆ ದೂರವಾಗಿದ್ದು ಜಾತಿ ಗಣತಿ ಬಿಡುಗಡೆಯಾದ ನಂತರವೇ ಇದು ತಿಳಿಯ ಬಹುದಾಗಿದ್ದು ಈ ಸಮುದಾಯಕ್ಕೆ ಅನ್ಯಾಯವಾಗಲು ತಾವು ಬಿಡುವುದಿಲ್ಲ ಈ ಸಮುದಾಯಕ್ಕೆ ನ್ಯಾಯ ಸಮ್ಮತವಾಗಿ ಸರ್ಕಾರ ದಿಂದ ಸಿಗಬಹುದಾ ಸವಲತ್ತುಗಳನ್ನು ಒದಗಿಸಿಕೊಡಲು ಶ್ರಮಿಸುವುದಾಗಿ ತಿಳಿಸಿದರು.

ನಾಮದಾರಿ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಅನುಕೂಲವಾಗುವಂತೆ ಓಬಿಸಿ ಸರ್ಟಿಪಿಕೇಟ್ ಕೊಡಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮೂಲಕ ಒತ್ತಡ ತರುವುದಾಗಿ ತಿಳಿಸಿದ ರವಿಶಂಕರ್ ಗ್ರಾಮದಲ್ಲಿ‌ ನಾಮದಾರಿ ಸಮುದಾಯ ಭವನ ನಿರ್ಮಾಣಕ್ಕೆ ಅನುಧಾನವನ್ನು ಬಿಡುಗಡೆ ಮಾಡಿ ಅತಿ ಶೀಘ್ರದಲ್ಲಿಯೇ ಗುದ್ದಲಿ ಪೂಜೆ ನೇರವೇರಿಸುವೆ ಜತಗೆ ಬಸವೇಶ್ವರ ದೇವಸ್ಥಾನಕ್ಕೆ ೧೦ ಲಕ್ಷ ಅನುದಾನ ನೀಡುವುದರ ಜತಗೆ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಪುತ್ತಳಿ ನಿರ್ಮಾಣಕ್ಕೆ‌ ಅದ್ಯತೆ ನೀಡಲಾಗುತ್ತದೆ ಎಂದರು.

ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವ ಸ್ವಾಮಿ, ಮೈಸೂರು ಯುವರಾಜ ಕಾಲೇನ ಕನ್ನಡ ವಿಭಾಗದ ಮುಖ್ಯಸ್ಥ ಚಿಕ್ಕಕೊಪ್ಪಲು ಡಾ.ಸಿ.ಡಿ.ಪರಶುರಾಮ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ರವಿ ವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರು ಮತ್ತು ಸೇವೆಯಿಂದ ನಿವೃತ್ತರಾದವರು ಅಲ್ಲದೇ ಗ್ರಾಮದ ಹಿರಿಯರನ್ನು ಶಾಸಕ ಡಿ.ರವಿಶಂಕರ್ ಸಂಘದ ಪರವಾಗಿ‌ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಎಪಿಎಂಸಿ‌ ಮಾಜಿ‌ಅಧ್ಯಕ್ಷ ಕೃಷ್ಣೇಗೌಡ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದಯಶಂಕರ್, ಕುಪ್ಪೆ ಗ್ರಾ.ಪಂ.ಅಧ್ಯಕ್ಷೆ ಶಾರದಮ್ಮ, ಮಾಜಿ‌ ಅಧ್ಯಕ್ಷರಾದ ಗೀತಾಮಹೇಂದ್ರ, ತಿಮ್ಮೇಗೌಡ, ಮಾಜಿ ಉಪಾಧ್ಯಕ್ಷ ನವೀನ್, ಸದಸ್ಯೆ ಮಹೇಂದ್ರ, ಹಳಿಯೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಬಡ್ಡೆ ಮಂಜಣ್ಣ,‌ ನಾಮದಾರಿ ಸಮಾಜದ ಕೇಂದ್ರ ಸಮಿತಿ ಅಧ್ಯಕ್ಷ ಗೋವಿಂದರಾಜು, ಉಪಾಧ್ಯಕ್ಷ ನಾ.ರಾ.ಗಿರೀಶ್, ಕೆ.ಆರ್.ನಗರ ಘಟಕದ ಅಧ್ಯಕ್ಷ ಅಶೋಕ್, ಗ್ರಾಮದ ಮುಖಂಡರಾದ ಮಾಸ್ಟರ್ ಹಿರಣಯ್ಯ, ಸುಬ್ಬೇಗೌಡ, ಸಂಘದ ಗೌರವಾಧ್ಯಕ್ಷ ಡಿ. ರಾಮಕೃಷ್ಣೇಗೌಡ, ಉಪಾಧ್ಯಕ್ಷ ಕೆ.ವಿ. ಜಗದೀಶ್, ಕಾರ್ಯದರ್ಶಿ ಕೆ.ಸಿ‌.ಮಹದೇವ್, ನಿರ್ದೇಶಕರಾದ ಗೋವಿಂದರಾಜು, ಕೆ.ಸಿ.ಕೃಷ್ಣ, ಕೆ.ಪಿ.ನಟರಾಜ್, ಕೆ.ಅರ್.ಮಂಜುನಾಥ್, ಮೋಹನ್, ಕೆ.ಅರ್.ಉದಯ್, ಕೆ.ಎನ್.ಉದಯ್, ಯೋಗರಾಜ್, ಕೆ.ಸಿ.ಮಹದೇವ್, ಸಾಗರ್, ಅಣ್ಣೇಗೌಡ, ಶಿವಕುಮಾರ್, ಅರುಣ್ ಕುಮಾರ್, ಕೆ.ಅರ್.ಮಂಜುನಾಥ್, ಸಮಾಜದ ಕಂಠೇನಹಳ್ಳಿ ಸುಮಂತ್ ಕೆ.ಅರ್.ಬಾಬು, ಕಾಂತರಾಜ್, ಭರತ್, ವಸಂತಕುಮಾರ್ ಯೋಗರಾಜ್ ವಿಶ್ವನಾಥ್, ರಘುರಾಜ್, ಸುರೇಂದ್ರ, ಅನಿಶ್, ಕೆಂಪರಾಜು, ಡೈರಿ ಕಾರ್ಯದರ್ಶಿ ನಾಗರಾಜು, ಬಿಲ್ ಕಲ್ಟೆಕ್ಟರ್ ರಾಮೇಗೌಡ, ನಾಟಿ ವೈದ್ಯ ನಾಗರಾಜೇಗೌಡ, ಕಲಾವಿದ ಚಂದ್ರ ಶೇಖರಯ್ಯ, ಸದಾಶಿವ ಕೀರ್ತಿ, ರೈತಪರ್ವದ ಅಧ್ಯಕ್ಷ ಲೋಹಿತಾಶ್, ಚಂದ್ರಯ್ಯ, ದಾಸಯ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular