ಮಂಡ್ಯ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ವಿಚಾರವಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯಿಸಿದ್ದು, ರೇಣುಕಾಸ್ವಾಮಿ ಪತ್ನಿಗೆ ನ್ಯಾಯ ಕೊಡಿಸಬೇಕು. ಆಯಮ್ಮ ಗರ್ಭಿಣಿ ವಿಧವೆ ಆಗುವ ಕನಸನ್ನ ಕಂಡಿರಲಿಲ್ಲ. ಇನ್ನು ಹುಟ್ಟದ ಮಗುವಿಗೆ ಭವಿಷ್ಯ ಇಲ್ಲದಾಗಿದೆ ಎಂದರು.
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯದ ಜೊತೆಗೆ ಆರ್ಥಿಕವಾಗಿ ಸಹಾಯ ಮಾಡಬೇಕು. ರೇಣುಕಾಸ್ವಾಮಿ ಕುಟುಂಬಕ್ಕೆ ನಾನು ವಯಕ್ತಿಕವಾಗಿ 20 ಸಾವಿರ ಕೊಡ್ತಿದ್ದೇನೆ. ಯಾರು ಮುಂದೆ ಬಂದು ಸಹಾಯ ಮಾಡಿ ಮಗುವಿಗೆ ಭವಿಷ್ಯ ಕಟ್ಟಿಕೊಡಿ ಎಂದು ತಿಳಿಸಿದರು.
ನಾನು ಈಗಾಗಲೇ ಇದರ ಬಗ್ಗೆ ಮಾತಡಿದ್ದೇನೆ. ಮೊಟ್ಟ ಮೊದಲು ನಾನೇ ಮಾತನಾಡಿದ್ದು. 2021 ರಲ್ಲಿ ದರ್ಶನ್ ಬಗ್ಗೆ ಮಾತನಾಡಿದ್ದೆ. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ನಾನು ಮಾತನಾಡುವುದಕ್ಕೆ ಇಷ್ಟ ಇಲ್ಲ. 2021ರಲ್ಲಿ ದರ್ಶನ್ ನನ್ನ ಮಾತು ಕೇಳಿದಿದ್ರೆ ಈಗಾಗುತ್ತಿರಲಿಲ್ಲ. ಅವರ ಒಳ್ಳೆಯದಕ್ಕೆ ನಾನು ಹೇಳಿದ್ದೆ ವೈಯಕ್ತಿಕವಾಗಿ ನನಗೂ ಅವರಿಗೂ ದ್ವೇಷ ಇಲ್ಲ ಎಂದರು.
ಎರಡೂ ಸಿನಿಮಾ ಮಾಡಿದ್ದೆ ಯುವ ಪ್ರತಿಭೆ ಇದ್ದಾಗ ನಾನು ಎಷ್ಟಾಬ್ಲಿಶ್ ಮಾಡಿದ್ದೆ. ಇವತ್ತಿಗೂ ಅವರತ್ರ ಸ್ಕೋಡಾ ಕಾರು171 ಇದೆ. ಲಂಕೇಶ್ ಪತ್ರಿಕೆ ಸಿನಿಮಾ ಮೂಲಕ ಅಡ್ವಾನ್ಸ್ ಕೊಟ್ಟಾಗ ಕಾರು ತಕೊಂಡ್ರು. ದರ್ಶನ್ ಬೆಳೆದು ಬಂದ ದಾರಿ ಬಹಳ ಕಷ್ಟವಾಗಿತ್ತು. ಇಂತಹ ಪರಿಸ್ಥಿತಿ ದರ್ಶನ್ ಗೆ ಆಗಬಾರದಿತ್ತು. 2021 ರಲ್ಲಿ ಏಕಾಂಗಿಯಾಗಿ ದ್ವನಿ ಎತ್ತಿದ್ದೆ. ಅವತ್ತು ಸುಧಾರಣೆಯಾಗಿದ್ರೆ ಈತರಹ ಅನಾಹುತ ಆಗುತ್ತಿರಲಿಲ್ಲ. ನನ್ನ ಮಾತು ಕೇಳಿದ್ರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ತಿಳಿಸಿದರು.
ರೇಣುಕಾಸ್ವಾಮಿ ಅನ್ಯಾಯ ಆಗಿದೆ ನ್ಯಾಯ ಕೊಡಿಸಿ. ಈ ಘಟನೆ ನಡೆಯೋದಕ್ಕೆ ಸಾಮಾಜಿಕ ಜಾಲತಾಣವೇ ಕಾರಣ. ಸಾಮಾಜಿಕ ಜಾಲತಾಣ ಇಂದು ಅದ್ಭುತವಾದ ಮಾಧ್ಯಮ. ಆದ್ರೆ ಸಾಮಾಜಿಕ ಜಾಲತಾಣಕ್ಕೆ ತುಂಬಾ ಮಿಸ್ ಯೂಸ್ ಆಗುತ್ತಿದೆ. ಈ ಘಟನೆ ನಡೆಯೋದಕ್ಕೆ ಸೋಷಿಯಲ್ ಮೀಡಿಯಾವೇ ಕಾರಣ. ಅಶ್ಲೀಲವಾದ ಮೆಸೇಜ್ ಹಾಕಿದಿದ್ದರೆ ಈ ಘಟನೆಯೇ ನಡೆಯುತ್ತಿರಲಿಲ್ಲ. ಸರ್ಕಾರ ಸಮಾಜಿಕ ಜಾಲತಾಣದ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದರು.
ಪತ್ರಕರ್ತರ ಹೇಗೆ ಡೆಫರ್ಮೇಶನ್ ಕೇಸ್ ಹಾಕುತಾರೆ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲೂ ತಪ್ಪು ಮಾಹಿತಿ ಅಥವಾ ಅಶ್ಲೀಲ ಮೆಸೇಜ್ ಹಾಕುವವರಿಗೂ ಕೇಸ್ ಹಾಕಬೇಕು. ಮಂತ್ರಿ, ಸಿಎಂ ಮನೆಯಲ್ಲಿ ಕ್ರೈಂ ನಡೆದರೆ ಕ್ರಮ ಕೈಗೊಳ್ಳುತ್ತಾರೆ. ಬೇರೆ ಮನೆಯವರ ಮನೆಯಲ್ಲಿ ನಗುತ್ತ ಕೂರುತ್ತಾರೆ. ಸಿಎಂ ಸಿದ್ದರಾಮಯ್ಯನವರು ಸೈಬರ್ ಕ್ರೈಮ್ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು.
ಚಿತ್ರರಂಗದಿಂದ ದರ್ಶನ್ ಬ್ಯಾನ್ ಮಾಡಬೇಕೆಂಬ ಒತ್ತಾಯದ ವಿಚಾರದ ಬಗ್ಗೆ ಮಾತನಾಡಿ, ಬ್ಯಾನ್ ಅನ್ನೋ ಶಬ್ದವನ್ನ ಯಾರೂ ಉಪಯೋಗಿಸಿಕೊಳ್ಳಬಾರದು. ಯಾವುದೇ ಸಂದರ್ಭದಲ್ಲೂ ಯಾರನ್ನೂ ಬ್ಯಾನ್ ಮಾಡಬಾರದು. ಈ ಹಿಂದೆ ಮಹಿಳೆಯರನ್ನ ಬ್ಯಾನ್ ಮಾಡಿದ್ರು, ಆದ್ರೆ ಬ್ಯಾನ್ ಮಾಡಬಾರದಿತ್ತು. ಕೋರ್ಟ್ ಕೂಡ ಕೆಲಸ ಇಲ್ಲದೇ ಯಾರೂ ಇರಬಾರದು ಅಂತ ಹೇಳುತ್ತೆ. ಪ್ರತಿಯೊಬ್ಬರೂ ಜೀವಿಸೋದಕ್ಕೆ ಕೆಲಸ ಮಾಡಲೇಬೇಕು. ಘಟನೆಯನ್ನ ಈಗಾಗಲೇ ನಾವು ಖಂಡಿಸಿದ್ದೇವೆ. ತನಿಖೆ ನಡೆಯುತ್ತಿದೆ, ಚಾರ್ಜ್ ಶೀಟ್ ಹಾಕುತ್ತಾರೆ. ಚಾರ್ಜ್ ಶೀಟ್ ಹಾಕಿದ ಮೇಲೆ ಮಾತನಾಡುತ್ತೇನೆ ಎಂದರು.