Friday, April 4, 2025
Google search engine

Homeರಾಜ್ಯಸುದ್ದಿಜಾಲಕೆ.ಎಡತೊರೆ ಗ್ರಾಮ:ಶಬರಿಮಲೆ ಅಯ್ಯಪ್ಪನ ಪಲ್ಲಕ್ಕಿ ಪೂಜೆ

ಕೆ.ಎಡತೊರೆ ಗ್ರಾಮ:ಶಬರಿಮಲೆ ಅಯ್ಯಪ್ಪನ ಪಲ್ಲಕ್ಕಿ ಪೂಜೆ

ವರದಿಗಾರರು
ಎಡತೊರೆ ಮಹೇಶ್

ಎಚ್ ಡಿ ಕೋಟೆ: ಕೆ ಎಡತೊರೆ ಗ್ರಾಮದಲ್ಲಿ ಶಬರಿಮಲೆ ಅಯ್ಯಪ್ಪನ ಪಲ್ಲಕ್ಕಿ ಪೂಜೆ ವಿಜೃಂಭಣೆಯಿಂದ ನಡೆಯಿತು.ತಾಲೂಕಿನ ಎಡತೊರೆ ಗ್ರಾಮದಲ್ಲಿ ಸ್ವಾಮಿ ಅಯ್ಯಪ್ಪನ ವಿಗ್ರಹವನ್ನು ಬೆಳ್ಳಿರಥ ಮತ್ತು ಕೇರಳದ ಚಂಡ ವಾದ್ಯದ ಮತ್ತು ಹರಿಯುವ ನದಿಯಿಂದ ಸುಮಾರು ಎರಡು ಕಿಲೋಮೀಟರ್ ನಿಂದ ಕಳಸ ತಂದರು. ಮೆರವಣಿಗೆ ಮುಖಾಂತರ ಗ್ರಾಮಕ್ಕೆ ತಂದು ಸುಮಾರು ಮೂರು ಗಂಟೆಗಳ ಕಾಲ ಭಜನೆ ಹೋಮಗಳಿಂದ ಪೂಜೆ ನೆರವೇರಿತು.

ಪೂಜೆಯ ನಂತರ ಭೋಜನ ವ್ಯವಸ್ಥೆ ಮಾಡಿದರು. ನಂತರ 52 ಶಬರಿಮಲೆ ಸ್ವಾಮಿಗಳು ಇರುಮುಡಿ ಕಟ್ಟಿ ಶಬರಿಮಲೆ ಯತ್ತ ಪ್ರಯಾಣ ಬೆಳೆಸಿದರು . ಊರಿನ ತುಂಬಾ ಕೇಸರಿ ಬಣ್ಣದ ಬಾವುಟಗಳು ಲೈಟಿನ ಅಲಂಕಾರ ಚಂಡ ವಾದ್ಯ ಬೆಳ್ಳಿರಥ ಮೆರವಣಿಗೆಯಲ್ಲಿ ಸಾಗಿದವು .ಇದನ್ನು ನೋಡಲು ಗ್ರಾಮದ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವುದರ ಜೊತೆಗೆ ಸಂಭ್ರಮಿಸಿದರು. ಗುರುಸ್ವಾಮಿಗಳಾದ ಕೂಸಣ್ಣ, ಸ್ವಾಮಿಗಳು ಟೈಗರ್ ಬ್ಲಾಕ್ ಮಂಜು ಸ್ವಾಮಿಗಳು ರೇವಣ್ಣ ಸ್ವಾಮಿಗಳು ಊರಿನ ಯಜಮಾನರುಗಳು ಗ್ರಾಮದ ಮುಖ್ಯಸ್ಥರು ಮತ್ತು ಟೈಗರ್ ಬ್ಲಾಕಿನ ಸ್ವಾಮಿಗಳು ಮತ್ತು ಅಕ್ಕ ಪಕ್ಕದ ಗ್ರಾಮಸ್ಥರು ಆಗಮಿಸಿದ್ದು ವಿಶೇಷವಾಗಿತ್ತು.

RELATED ARTICLES
- Advertisment -
Google search engine

Most Popular