ಕೆ.ಆರ್. ನಗರ :ಕೆ.ಆರ್.ನಗರ ಕ್ಷೇತ್ರದ ಮತದಾರರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸಲು ಶಾಸಕರ ಕಚೇರಿಯನ್ನು ತೆರೆಯಲಾಗಿದ್ದು ಜನತೆ ತಮ್ಮ ಕುಂದು ಕೊರತೆಗಳನ್ನು ಕಚೇರಿಗೆ ಆಗಮಿಸಿ ಪರಿಹರಿಸಿಕೊಳ್ಳಬಹುದು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು. ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿಯ ಕೆಳ ಅಂತಸ್ತಿನಲ್ಲಿ ತೆರೆಯಲಾಗಿರುವ ಶಾಸಕರ ನೂತನ ಕಚೇರಿಯನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮತದಾರರಿಗೆ ಒಳ್ಳೆಯದಾಗಲಿ ಎಂದು ಪೂಜೆ ಪುನಸ್ಕಾರ ಮಾಡಿ ಅಧಿಕೃತವಾಗಿ ಶಾಸಕರ ಕಚೇರಿ ಉದ್ಗಾಟಿಸಲಾಗಿದೆ ಎಂದರು.
ಕಚೇರಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದರ ಜತೆಗೆ ಸಂಬAದಿತ ಇಲಾಖೆಯ ಕೆಲಸ ಕಾರ್ಯಗಳನ್ನು ಮಾಡಿಕೊಡಲಾಗುವುದು ಎಂದು ನುಡಿದರಲ್ಲದೆ ವಾರದ ಯಾವ ದಿನ ಕಚೇರಿಯಲ್ಲಿ ಲಭ್ಯವಿರುತ್ತೇವೆ ಎಂಬುದನ್ನು ಮುAದೆ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.
ಕೃತಜ್ಞತಾ ಸಭೆ- ಜೂ, ೧೭ರಂದು ಶನಿವಾರ ಪಟ್ಟಣದ ಪುರಸಭಾ ಬಯಲುರಂಗ ಮಂದಿರದ ಮೈದಾನದಲ್ಲಿ
ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಭೆ ಏರ್ಪಡಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ರೇಷ್ಮೆ ಮತ್ತು ಪ್ರವಾಸೋಧ್ಯಮ ಸಚಿವ ಕೆ.ವೆಂಕಟೇಶ್, ಶಾಸಕರಾದ ಅನಿಲ್‌ಚಿಕ್ಕಮಾದು, ಗಣೇಶ್‌ಪ್ರಸಾದ್, ದರ್ಶನ್‌ಧೃವನಾರಾಯಣ್, ಕೆ.ಹರೀಶ್‌ಗೌಡ, ಮಾಜಿ ಶಾಸಕ
ಯತೀಂದ್ರ, ವಿಧಾನಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ಮಧು ಜಿ.ಮಾದೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಡಾ.ಬಿ.ಜೆ.ವಿಜಯಕುಮಾರ್, ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಡಾ.ರವೀಂದ್ರ ಸೇರಿದಂತೆ ವಿವಿಧ ಮುಖಂಡರು
ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.
ಕೆಪಿಸಿಸಿ ಕಾರ್ಯಕಾರಿಣ ಸದಸ್ಯ ದೊಡ್ಡಸ್ವಾಮೇಗೌಡ ಶಾಸಕರ ಕಛೇರಿ ಉದ್ಘಾಟಿಸಿದರು. ರಾಜ್ಯ ಕಾಂಗ್ರೆಸ್ ಪರಿಶಿಷ್ಠ ವಿಭಾಗದ ಉಪಾಧ್ಯಕ್ಷ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ವಕ್ತಾರ ಸೈಯ್ಯದ್‌ಜಾಬೀರ್, ಪ್ರಧಾನ ಕಾರ್ಯದರ್ಶಿ ರಾಜೇಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಜಿಲ್ಲಾ ಸಂಘದ ನಿರ್ದೇಶಕ ದಿಡ್ಡಹಳ್ಳಿಬಸವರಾಜು, ತಾ.ಪಂ.ಮಾಜಿ ಅಧ್ಯಕ್ಷರಾದ ಹಾಡ್ಯಮಹದೇವಸ್ವಾಮಿ, ಹೆಚ್.ಟಿ.ಮಂಜುನಾಥ್, ಜಿ.ಪಂ.ಮಾಜಿ ಸದಸ್ಯ ಸಿದ್ದಪ್ಪ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ರಮೇಶ್, ಮಾಜಿ ಉಪಾಧ್ಯಕ್ಷ ಹೆಚ್.ಹೆಚ್.ನಾಗೇಂದ್ರ, ನಗರ ಯೋಜನಾ ಪ್ರಾಧಿಕಾರದ ಮಾಜಿ ನಿರ್ದೇಶಕ ಕೆ.ಎನ್. ಪ್ರಸನ್ನಕುಮಾರ್, ಮುಖಂಡರಾದ ಮಿರ್ಲೆನಾಗರಾಜು, ದೀಪು, ನಂದೀಶ್ ಮತ್ತಿತರರು ಇದ್ದರು