ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ:ಕಳೆದ ಹದಿನೈದು ವರ್ಷಗಳಿಂದ ಅಭಿವೃದ್ದಿ ಕಾಣದ ಗಂಧನಹಳ್ಳಿ ಗ್ರಾಮ ಸೇರಿದಂತೆ ಹಲವಾರು ಗ್ರಾಮಗಳಿಗೆ ವಿವಿಧ ಇಲಾಖೆಗಳಿಂದ ಸಾಕಷ್ಟು ಅನುದಾನ ಮಂಜೂರು ಮಾಡಿಸಲಾಗಿದ್ದು ಮೇ.೨೩ರಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಗಂಧನಹಳ್ಳಿ ಗ್ರಾಮದಲ್ಲಿ ೨.೧೦ ಕೋಟಿ ರೂಗಳಲ್ಲಿ ಗ್ರಾಮ ಪರಿಮಿತಿ ರಸ್ತೆಯ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಕೆ.ಆರ್.ನಗರದ ಪುರಸಭೆ ಬಯಲು ರಂಗ ಮಂದಿರದಲ್ಲಿ ಮುಖ್ಯಮಂತ್ರಿ ಸೇರಿದಂತೆ ವಿವಿಧ ಇಲಾಖೆಯ ಸಚಿವರು ಆಗಮಿಸಲಿದ್ದು ೪೦೦ ಕೋಟಿ ರೂಗಳಿಗೂ ಅಧಿಕ ಅಭಿವೃದ್ದಿ ಕಾಮಗಾರಿಗಳಿಗೆ ಶಿಲನ್ಯಾಸ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಅಭಿವೃದ್ದಿಯಲ್ಲಿ ಹಿಂದುಳಿದ ಗ್ರಾಮಗಳನ್ನು ಗುರುತಿಸಲಾಗಿದ್ದು ಪ್ರಮುಖವಾಗಿ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲು ಬೇಕಾಗುವ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಿಸಲಾಗಿದೆ ಎಂದ ಅವರು ಕ್ಷೇತ್ರಕ್ಕೆ ೫ ಕರ್ನಾಟಕ ಪಬ್ಲಿಕ್ ಶಾಲೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದುಗಂಧನಹಳ್ಳಿ ಗ್ರಾಮದಲ್ಲೂ ಶಾಲೆ ಆರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಗಂಧನಹಳ್ಳಿ ಗ್ರಾಮದ ಸಮಗ್ರ ಅಭಿವೃದ್ದಿಗೆ ಕ್ರಿಯಾಯೋಜನೆ ತಯಾರಿಸಲಾಗಿದ್ದು ಹಂತ ಹಂತವಾಗಿ ಅನುದಾನ ತಂದು ಕಾಮಗಾರಿಗಳನ್ನು ಮಾಡಲಾಗುತ್ತದೆ ಆವರೆಗೆ ಗ್ರಾಮದ ಜನತೆ ತಾಳ್ಮೆಯಿಂದ ಇದ್ದು ನನಗೆ ಸಹಕಾರ ನೀಡಬೇಕೆಂದರು.
ಕಪ್ಪಡಿ ಕ್ಷೇತ್ರದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಲು ೨೫ ಕೋಟಿ ಮತ್ತು ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರವನ್ನು ೧೦೦ ಹಾಸಿಗೆಯ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಮೂಲಕ ತಾಲೂಕು ಆಸ್ಪತ್ರೆಯಾಗಿ ಪರಿವರ್ತನೆ ಮಾಡಿಸಲಾಗಿದ್ದು ಆ ಭಾಗದ ಜನತೆಗೆ ಸಾಕಷ್ಟು ಅನುದಾನವಾಗಲಿದೆ ಎಂದು ಹೇಳಿದರು.
ಚುಂಚನಕಟ್ಟೆಯ ಶ್ರೀ ರಾಮ ಸಕ್ಕರೆ ಕಾರ್ಖಾನೆ ಪುನರ್ ಆರಂಭವಾಗಲಿದ್ದು ಈಗಾಗಲೇ ಗುತ್ತಿಗೆ ಕರಾರನನ್ನು ಮಾಡಿಸಿಕೊಂಡಿರುವ ನಿರಾಣಿ ಶುರ‍್ಸ್ನವರು ರೈತರಿಗೆ ಭಿತ್ತನೆ ಕಬ್ಬು ಮತ್ತು ರಸಗೊಬ್ಬರವನ್ನು ವಿತರಣೆ ಮಾಡುವುದಾಗಿ ಭರವಸೆ ನೀಡಿದ್ದು ಕಾರ್ಖಾನೆ ಆರಂಭಕ್ಕೂ ಮುನ್ನ ಕಬ್ಬು ಬೆಳೆಗಾರರ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದ ಶಾಸಕರು ಕಾರ್ಖಾನೆ ಆರಂಭವಾಗುವುದರಿAದ ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆಂದರು. ಆನಂತರ ಬಾಲೂರು ಗ್ರಾಮದಲ್ಲಿ ೧೫ ಲಕ್ಷ ರೂಗಳ ಸಿ.ಸಿ.ರಸ್ತೆಗೆ ಚಾಲನೆನೀಡಿದರು.
ಗಂಧನಹಳ್ಳಿ ಗ್ರಾಮದ ಯುವ ಮುಖಂಡ ಜಿ.ಎಸ್.ವೆಂಕಟೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹದೇವಿಬಲರಾಮು, ಸದಸ್ಯರಾದ ಸುಲೋಜನಾ, ಲೋಕೇಶ್, ಸಣ್ಣದೊಡ್ಡೇಗೌಡ, ಮಂಗಳಮ್ಮ, ಸತೀಶ್, ಚಿಕ್ಕ ವಡ್ಡರಗುಡಿ ವಿಎಸ್‌ಎಸ್ ಎನ್ ಮಾಜಿ ಅಧ್ಯಕ್ಷ ಜಿ.ಆರ್.ಕೃಷ್ಣೇಗೌಡ, ತಾ.ಪಂ. ಮಾಜಿ ಸದಸ್ಯ ಜಿ.ಎಸ್.ಮಂಜುನಾಥ್, ಕಾಂಗ್ರೆಸ್ ವಕ್ತಾರ ಸೈಯದ್‌ಜಾಬೀರ್, ಮುಖಂಡರಾದ ಜಿ.ಎನ್.ರಘು, ಜಿ.ಆರ್.ದೇವೇಂದ್ರ, ಜಿ.ಎಂ.ಹೇಮAತ್, ಎಸ್.ರಾಮು, ನವೀನ್‌ಕುಮಾರ್, ಕೃಷ್ಣಪ್ರಸಾದ್, ಜಿ.ಆರ್.ಮಹದೇವ್, ಹಂಪಾಪುರ ನಾಗೇಶ್, ಗಜೇಂದ್ರ, ಆದರ್ಶ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.