ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: 28 ವರ್ಷಗಳಿಂದ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ 435 ಕೋಟಿ ರೂ. ವಹಿವಾಟು ನಡೆಸುತ್ತಿದ್ದು, 5 ಕೋಟಿ ರೂ. ನಿವ್ವಳ ಲಾಭದಲ್ಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೆ.ಎನ್. ಬಸಂತ್ ಹೇಳಿದರು.
ಕೆ.ಆರ್.ನಗರ: ಪಟ್ಟಣದ ಹೆಚ್.ಡಿ.ದೇವೇಗೌಡ ಸಮುದಾಯದ ಭವನದಲ್ಲಿ ನಡೆದ 2024-25 ನೇ ಸಾಲಿನ ಸರ್ವಸದಸ್ಯರ ಮಹಾಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕಿನಲ್ಲಿ 4,800 ಮಂದಿ ಸದಸ್ಯರಿದ್ದು, 350 ಕೋಟಿ ರೂ. ಸಾಲ ವಿತರಿಸಲಾಗಿದ್ದು, ಮುಂದಿನ ದಿನಗಳಲ್ಲಿ 475 ಕೋಟಿ ರೂ. ವಹಿವಾಟು ನಡೆಸುವ ಗುರಿ ಹೊಂದಿದ್ದು 6 ಕೋಟಿ ರೂ. ಲಾಭ ಗಳಿಸಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದರು.
ಬ್ಯಾಂಕಿನಲ್ಲಿ ಸದಸ್ಯತ್ವ ಪಡೆದಿರುವ 4637 ಮಂದಿ ಷೇರುದಾರ ಸದಸ್ಯರ ಪೈಕಿ ಹೊಸದಾಗಿ 277 ಮಂದಿ ಸದಸ್ಯತ್ವ ಪಡೆದಿದ್ದು ಈ ಪೈಕಿ 84 ಮಂದಿ ಜನರು ಮ ಸದಸ್ಯತ್ವ ವಾಪಸ್ಸು ಪಡೆದಿದ್ದಾರೆ ಎಂದು ತಿಳಿಸಿದರು.
ಬ್ಯಾಂಕಿನಿಂದ ಫೋನ್‌ಪೇ, ಗೂಗಲ್ ಪೇ ಮತ್ತು ಎಟಿಎಂಸವಲತ್ತು ಕಲ್ಪಿಸಿದ್ದು, ಇದರೊಂದಿಗೆ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಒದಗಿಸಿರುವುದರಿಂದ ಸರ್ವ ರಿಗೂ ಅನುಕೂಲವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಷೇರು ಬಂಡವಾಳವನ್ನು ಹೆಚ್ಚಿಸಿ ಬ್ಯಾಂಕಿನ ವ್ಯಾಪ್ತಿಯ ಜನರಿಗೆ ಉತ್ತಮ ಸೇವೆ ನೀಡಲಾಗುವುದು ಎಂದು ತಿಳಿಸಿದರು.
ಬ್ಯಾಂಕಿನ ಷೇರುದಾರ ಸದಸ್ಯರಾಗಿದ್ದು ಮರಣ ಹೊಂದಿದರೆ ಅವರ ಕುಟುಂಬಕ್ಕೆ ಪ್ರಸ್ತುತ 10 ಸಾವಿರ ರೂ. ಮರಣ ನಿಧಿ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ಸದಸ್ಯರಿಗೆ ಶೇ.10 ಡಿವಿಡೆಂಡ್, ಉಡುಗೊರೆ ಬದಲಿಗೆ ಶೇ 15% ರಷ್ಟು ಡಿವಿಡೆಂಡ್ ಪಾವತಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ಬ್ಯಾಂಕಿನ ಆಡಳಿತ ಕಛೇರಿ, ಕೆ.ಆರ್. ನಗರ ಶಾಖೆ, ಪಿರಿಯಾಪಟ್ಟಣ ಶಾಖೆಗಳು ಸ್ವಂತ ಕಟ್ಟಡ ಹೊಂದಿದ್ದು, ಮೈಸೂರಿನ ಹೂಟಗಳ್ಳಿ ಶಾಖೆಗೆ ರೂ. 115.50 ಲಕ್ಷ ಮೌಲ್ಯದ 38 ಚದರ ನಿವೇಶನವನ್ನು ಖರೀದಿಸಿದ್ದು, ಮುಂದಿನ ವರ್ಷದಲ್ಲಿ ಸುಮಾರು 50 ಚದರ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ ಮೈಸೂರು ನಗರದ ಗ್ರಾಹಕರಿಗೆ ಇನ್ನೂ ಉತ್ತಮ ಬ್ಯಾಂಕಿಂಗ್ ಸೇವೆಯನ್ನು ನೀಡಲು ಉದ್ದೇಶಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು.
ವ್ಯವಸ್ಥಾಪಕ ನಿರ್ದೇಶಕ ಸುರೇಶ್ 2025-26ನೇ ಸಾಲಿನ ಅಂದಾಜು ಆಯವ್ಯಯ ಮುಂಗಡ ಪ್ರಸ್ತಾವನೆ ಮಂಡಿಸಿ ಒಪ್ಪಿಗೆ ಪಡೆದರು. ಇದೇ ಸಂದರ್ಭದಲ್ಲಿ ಬ್ಯಾಂಕಿನ ಷೇರುದಾರ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಾಜಿ ಸಚಿವರಾದ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ದಿವಂಗತ ಎಸ್.ನಂಜಪ್ಪನವರ ಅಭಿಮಾನಿಗಳು ಮತ್ತು ಸ್ನೇಹಿತರು ನಮ್ಮನ್ನು ಕೈಹಿಡಿದಿದ್ದರಿಂದ ನವ ನಗರ ಅರ್ಬನ್ ಬ್ಯಾಂಕ್ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಷೇರುದಾರ ಸದಸ್ಯರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಹುಸಿ ಮಾಡದೆ, ಅವ್ಯವಹಾರಕ್ಕೆ ಆಸ್ಪದ ನೀಡದೆ ಪಾರದರ್ಶಕವಾಗಿ ಆಡಳಿತ ನಡೆಸುತ್ತಿದ್ದೇವೆ.
-ಕೆ.ಎನ್.ಬಸಂತ್, ಅಧ್ಯಕ್ಷ, ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್
ಬ್ಯಾಂಕಿನ ಉಪಾಧ್ಯಕ್ಷೆ ಸರೋಜ ನಾರಾಯಣ್, ನಿರ್ದೇಶಕರಾದ ರಶ್ಮಿದಿನೇಶ್, ಕೇಶವ್, ವೈ.ಎಸ್. ಕುಮಾರ್, ವಿಜಯ್ ಕುಮಾರ್, ಎಂ.ಕೆ.ಮಹದೇವ್, ಅಪ್ಪರ್‌ಬಾಬು, ಎಸ್.ಮಹದೇವಯ್ಯ, ಎ.ಚಂದ್ರಶೇಖರ್, ಚಂದ್ರಕುಮಾರ್, ಕೆ.ರಮೇಶ್ ರಾವ್, ಸುಬ್ಬನಾಯಕ, ವೃತ್ತಿಪರ ನಿರ್ಧೆಶಕ ಮರಿಲಿಂಗಾಚಾರ್, ಚೇತನ್, ವ್ಯವಸ್ಥಾಪಕ ನಿರ್ದೇಶಕ ಸಿ ಸುರೇಶ್, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಎನ್.ಎಸ್.ವಿಶ್ವನಾಥ್, ಹೆಚ್.ಟಿ. ಅನಂತರಾಮಯ್ಯ, ಆರ್.ಜೋಸೆಫ್, ಕೆ.ಆರ್. ನಗರ ಶಾಖಾ ವ್ಯವಸ್ಥಾಪಕ ಎಂ.ಪಿ.ಸುಹಾಸ್ ಗೌಡ, ಆಡಳಿತ ಕಚೇರಿಯ ಹಿರಿಯ ವ್ಯವಸ್ಥಾಪಕ ಎ.ವಿ.ಮಂಜುನಾಥ್, ಪಿರಿಯಾಪಟ್ಟಣ ಶಾಖಾ ವ್ಯವಸ್ಥಾಪಕ ಕಿರಣ್ , ಹುಣಸೂರು ಶಾಖಾ ವ್ಯವಸ್ಥಾಪಕ ಮಂಚನಾಯಕ,, ಹೂಟಗಳ್ಳಿ ಶಾಖಾ ವ್ಯವಸ್ಥಾಪಕ ಕೆಎಸ್. ಪ್ರಮೋದ್, ಸಾಲ ವಸೂಲಿ ವಿಭಾಗದ ಹಿರಿಯ ವ್ಯವಸ್ಥಾಪಕ ಹೆಚ್ ವಿ.ಚನ್ನಕೇಶವ, ಸಿಬ್ಬಂದಿಗಳಾದ ಎಂ.ಪಿ.ಹಿತೇಷ್, ಎಚ್.ಎಸ್.ಸಾಗರ್, ಶೃಂಗಾರ್ ಶಿವಣ್ಣ, ಶ್ರೀಧರ್,ಮಧುಕರ್,ಲಕ್ಷ್ಮಣ್, ಎಂ.ಎಸ್.ಸುದೀರ್, ಚರಣ್, ರೋಷನ್, ರಾಮಕೃಷ್ಣ, ನಟರಾಜ್, ರಾಮಕೃಷ್ಣ, ನವೀನ್ ಕುಮಾರ್, ಪ್ರವೀಣ್, ಹಾಜರಿದ್ದರು.