ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಹೊಂದಲು ದಾನಿಗಳು ಅಗತ್ಯ ನೆರವು ನೀಡಬೇಕು ಎಂದು ಕೆ.ಆರ್.ನಗರ ತಾಲೂಕು ಶಿಕ್ಷಕರ ಪತ್ತಿನ ಸಹಕಾರ ಸಂಘದ ಗೌರವಾಧ್ಯಕ್ಷ ಹೆಬ್ಬಾಳು ಮಂಜೇಗೌಡ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಣರಾಜೋತ್ಸವದ ಪ್ರಯುಕ್ತ ಹೊಸೂರಿನ ಮಾತಾಜಿ ಗೋಲ್ಡ್ ಅವರು ವಿಧ್ಯಾರ್ಥಿಗಳಿಗೆ ನೀಡಿದ ಶೈಕ್ಷಣಿಕ ಪರಿಕರಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶದಲ್ಲಿನ ಶಾಲೆಗಳಲ್ಲಿ ಸರ್ಕಾರವು ಬಿಸಿಯೂಟ,ಉಚಿತ ಸಮವಸ್ತ್ರದ ಜತಗೆ ಉಚಿತ ಶಿಕ್ಷಣ ನೀಡಿ ಉತ್ತಮ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪ್ರಯತ್ನ ಮಾಡುತ್ತಿದ್ದು ಇದರ ಯಶಸ್ವಿಗೆ ಜೊತೆಗೆ ದಾನಿಗಳು ಕೈ ಜೋಡಿಸ ಬೇಕೆಂದರು.
ಶಾಲೆಯ ಸುಮಾರು 81 ವಿಧ್ಯಾರ್ಥಿಗಳಿಗೆ ಟ್ಯ್ರಾಕ್ ಡ್ರಸ್, ವಿವಿಧ ಶೈಕ್ಷಣಿಕ ಪರಿಕರಗಳು ವಿತರಣೆ ಮತ್ತು ಶಾಲೆಗೆ ಧ್ವಜ ಕಂಬ ನಿರ್ಮಿಸಿ ಕೊಟ್ಟ ಹೊಸೂರು ಮಾತಾಜಿ ಗೊಲ್ಡ್ ಮಾಲೀಕ ದಿಲೀಪ್ ಅವರನ್ನು ಶಾಲಾಭಿವೃದ್ದಿ ಸಮಿತಿ ವತಿಯಿಂದ ಅತ್ಮಿಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ.ಸದಸ್ಯೆ ರೇಣುಕಶ್ರೀನಿವಾಸ್, ಮುಖಂಡರಾದ ಬೋರೆಗೌಡ,ಪಾಂಡ, ಅವಿನಾಶ್ ಉದ್ಯಮಿ ಧರ್ಮ, ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಆರ್.ಜಿ.ಪವಿತ್ರ, ಎಚ್.ಎಸ್.ಸ್ವಾಮಿ, ಪವಿತ್ರಾ, ಕೃಷ್ಣೇಗೌಡ, ಶಾಲೆಯ ಶಿಕ್ಷಕರಾದ ಶಿವಮೂರ್ತಿ, ಶ್ವೇತಾ,ಪೂಜಾ, ಹಿತನ್ ಎಂಟರ್ ಪ್ರೈಸ್ ನ ಮಾಲೀಕ ಸಂತೋಷ್ ಸೇರಿದಂತೆ ಮತ್ತಿತರರು ಹಾಜರಿದ್ದರು.