ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪಟ್ಟಣದ ಸಾಮರಸ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಅ.೧೬ರಂದು ಚುನಾವಣೆ ನಡೆಯಲಿದ್ದು ನಾಮಪತ್ರ ಸಲ್ಲಿಕೆಗೆ ಕಡೆ ದಿನವಾದ ಭಾನುವಾರ ೧೪ ಮಂದಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಮಹಿಳಾ ಮೀಸಲು ಸ್ಥಾನಕ್ಕೆ ಬಿ.ಶೀಲ, ಎ.ಇ.ಅನುಪಮ, ಪರಿಶಿಷ್ಟ ಪಂಗಡ ಸ್ಥಾನದಿಂದ ಕೃಷ್ಣನಾಯಕ, ಪರಿಶಿಷ್ಟ ಜಾತಿ ಸ್ಥಾನಕ್ಕೆ ಎಸ್.ವಿ.ಗೋವಿಂದರಾಜು, ಸಾಮಾನ್ಯ ಸ್ಥಾನದಿಂದ ಕೆ.ಟಿ.ಸ್ವಾಮಿ, ಹಿಂದುಳಿದ ವರ್ಗ ಎ.ಸ್ಥಾನದಿಂದ ಮಂಜುನಾಥ್ ನಾಮಪತ್ರ ಸಲ್ಲಿಸಿದರು.
ಇವರ ಜೊತೆಗೆ ಸಾಮಾನ್ಯ ಸ್ಥಾನದಿಂದ ಆಯ್ಕೆ ಬಯಸಿ ಎಂ.ಮoಜುರಾಜ್, ಸೈಯದ್‌ರಿಜ್ವಾನ್, ಶಿವಮೂರ್ತಿ, ಎನ್.ಎಲ್.ಮುರಳೀಧರ, ಸಿ.ಎಸ್.ಮಂಜುನಾಥ್, ರವಿ, ಪ್ರಕಾಶ್ ಮತ್ತು ಟಿ.ಪುರುಷೋತ್ತಮ, ಚುನಾವಣಾಧಿಕಾರಿ ಕೆ.ಎಲ್.ಸವಿತಾ ಅವರಿಗೆ ನಾಮಪತ್ರಗಳನ್ನು ಸಲ್ಲಿಕೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸ್ಥಾನದ ಆಕಾಂಕ್ಷಿ ಟಿ.ಪುರುಷೋತ್ತಮ ಸಂಘದ ಸದಸ್ಯ ಶಿಕ್ಷಕ ಭಾಂದವರು ಪರಸ್ಪರ ಮಾತನಾಡಿಕೊಂಡು ಚುನಾವಣೆ ನಡೆಸದಂತೆ ಅವಿರೋಧ ಆಯ್ಕೆ ಮಾಡಿಕೊಂಡು ಸಂಘಕ್ಕೆ ಅನಗತ್ಯ ಆರ್ಥಿಕ ಹೊರೆ ತಪ್ಪಿಸಲು ನಿರ್ಧಾರ ಮಾಡಿಕೊಂಡು ೧೪ ಮಂದಿ ನಾಮಪತ್ರ ಸಲ್ಲಿಕೆ ಮಾಡಿರುವುದರಿಂದ ಅವಿರೋಧ ಆಯ್ಕೆಯಾಗುವುದು ಖಚಿತ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜಶೇಖರ್, ಮೋಹನ್‌ಕುಮಾರ್, ಸಿ.ಎನ್.ಸ್ವಾಮಿ, ಒಂಟಿಮನೆನಾಗರಾಜ್, ಸಿ.ಎನ್.ಪ್ರಭು, ಜಿ.ಎನ್.ಮಹದೇವ್, ಎಸ್.ಆರ್.ಸಿದ್ದಯ್ಯ, ಲೋಹಿತಾಶ್ವ, ರಾಮಕೃಷ್ಣ, ಬಿ.ಎಲ್.ಮಹದೇವ್, ಪುಟ್ಟಯ್ಯ, ಗಂಗಾಧರ್, ಭೋಜೇಗೌಡ, ಕೆ.ಹೆಚ್.ನಾಗರಾಜು, ಸುರೇಶ್, ಕಮಲಮ್ಮ, ಚಿಕ್ಕೇಗೌಡ, ಕೃಷ್ಣನಾಯಕ, ಭಾಸ್ಕರ್, ನಾರಾಯಣಶೆಟ್ಟಿ, ಪ್ರಕಾಶ್, ಮುತ್ತೇಶಾಚಾರ್, ಲಕ್ಷಿö್ಮಶ, ರಾಮೇಗೌಡ, ಎನ್.ರಾಮಪ್ರಸಾದ್, ಬಿ.ವಿ.ಪ್ರಸನ್ನಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.