ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ, ಫೆ.೨೦: ತಾಲ್ಲೂಕಿನ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ೮ನೇ ತರಗತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ ಒಟ್ಟು-೯೬ ವಿದ್ಯಾರ್ಥಿಗಳ, ೪ ದಿನಗಳ ಕಾಲ ಕರ್ನಾಟಕ ದರ್ಶನ ಪ್ರವಾಸಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಚಾಲನೆ ನೀಡಿದರು.
ಪಟ್ಟಣದ ಶಿಕ್ಷಕರ ಭವನದ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ೮ನೇ ತರಗತಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಮಕ್ಕಳಿಗೆ ಕರ್ನಾಟಕ ಪ್ರವಾಸ ೪ ದಿನಗಳ ಕಾಲ ಜರುಗಲಿದ್ದು ಪ್ರವಾಸದಲ್ಲಿ ಮಕ್ಕಳಿಗೆ ಸುರಕ್ಷತೆಯ ಜತೆಗೆ ಪ್ರವಾಸ ಕೈಗೊಳ್ಳಿ ಎಂದು ಸಲಹೆ ನೀಡಿದರು.
ಸಂಧರ್ಭದಲ್ಲಿ ಕುಪ್ಪಹಳ್ಳಿ ಕ್ಲಸ್ಟರ್‌ನ ಸಿ.ಆರ್.ಪಿ ಎಸ್.ವಸಂತಕುಮಾರ, ಶಿಕ್ಷಣ ಸಂಯೋಜಕರಾದ ಜೆ.ಜಗದೀಶ, ಬಿ.ಆರ್.ಪಿಗಳಾದ ಹರೀಶ ಕುಮಾರ, ಕೆ.ಎಸ್.ಸುಬ್ಬುರಾಮನ್, ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕ ಕೆ.ಸಿ.ಮಧು, ಸಿ.ಎನ್.ಸ್ವಾಮಿ, ಕುಮಾರ, ರವಿಕುಮಾರ, ಮಂಜುನಾಥ, ಲಲಿತ ಸೇರಿದಂತೆ ಮಕ್ಕಳ ಪೋಷಕರು ಹಾಜರಿದ್ದರು.