Tuesday, April 15, 2025
Google search engine

Homeರಾಜ್ಯಸುದ್ದಿಜಾಲಸಾಲಿಗ್ರಾಮ : ಅದ್ದೂರಿಯಾಗಿ ಹನುಮ ಜಯಂತೋತ್ಸವ ಆಚರಣೆ

ಸಾಲಿಗ್ರಾಮ : ಅದ್ದೂರಿಯಾಗಿ ಹನುಮ ಜಯಂತೋತ್ಸವ ಆಚರಣೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ಪಟ್ಟಣದಲ್ಲಿ ಶ್ರೀ ಪೇಟೆ ಆಂಜನೇಯ ಸ್ವಾಮಿ ಯುವಕರ ಬಳಗದ ವತಿಯಿಂದ ಮೂರನೇ ವರ್ಷದ ಹನುಮ ಜಯಂತೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಜಯಂತೋತ್ಸವದ ಅಂಗವಾಗಿ ಪಟ್ಟಣದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದಿಂದ ತೆರೆದ ವಾಹನಗಳಲ್ಲಿ ಗ್ರಾಮದ ಉತ್ಸವ ಮೂರ್ತಿ, ಶ್ರೀ ಆಂಜನೇಯಸ್ವಾಮಿ, ಶ್ರೀರಾಮ, ಕೃಷ್ಣರುಕ್ಮಿಣಿ, ಈಶ್ವರ, ಪುನೀತ್ ರಾಜ್ ಕುಮಾರ್ ಅವರುಗಳ ಸ್ತಬ್ಧ ಚಿತ್ರಗಳನ್ನು ಅಲಂಕಾರ ಗೊಳಿಸಿ ವಿವಿಧ ಕಲಾತಂಡಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ಪಟ್ಟಣದ ಪೇಟೆ ಬಾಗಿಲಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಕಾರ್ಯಕ್ರಮಕ್ಕೆ ಮಾಜಿ ಸಚಿವ ಸಾ ರಾ ಮಹೇಶ್. ಹಾಲಿ ವಿಧಾನ ಪರಿಷತ್ ಸದಸ್ಯರಾದ ಎಚ್ ವಿಶ್ವನಾಥ್, ಮಂಜೇಗೌಡ ನೀಡಿದರು.

ನಂತರ ಮಾತನಾಡಿದ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ಯಾವುದೇ ಜಾತಿಗೆ ಸೀಮಿತವಾಗದೆ ಸರ್ವದರ್ಮೀಯರು ಒಟ್ಟಿಗೆ ಸೇರಿ ಹನುಮ ಜಯಂತಿ ಆಚರಣೆ ಮಾಡುತ್ತಿರುವುದು ಉತ್ತಮ ಸಾಮರಸ್ಯ ವಾತಾವರಣ ನಿರ್ಮಾಣಕ್ಕೆ ನಾಂದಿ ಹಾಡಿದೆ ಎಂದರು. ಮಾಜಿ ಸಚಿವ ಸಾರಾ ಮಹೇಶ್ ಅವರು‌ ಮಾತನಾಡಿ ದೇವನೊಬ್ಬ ನಾಮ ಹಲವು ನಾವು ಈಶ್ವರ ಎಂದರೆ ಮುಸಲ್ಮಾನ್ ಬಾಂಧವರಿಗೆ ಅಲ್ಲಾ ಎನ್ನುತ್ತಾರೆ ಹಾಗೆ ಕ್ರಿಶ್ಚಿಯನ್ ಧರ್ಮದವರು ಎಸು ಎನ್ನುತ್ತಾರೆ ಸಾಲಿಗ್ರಾಮ ಗ್ರಾಮದಲ್ಲಿ 3 ನೇ ವರ್ಷದ ಜಯಂತೋತ್ಸವ ಆಚರಣೆ ಅದ್ದೂರಿಯಾಗಿ ಆಚರಣೆ ಆಗುತ್ತಿರುವುದು ಸಂತೋಷದ ಸಂಗತಿ ಆಗಿದೆ ಎಂದರು.

ಹನುಮ ಜಯಂತೋತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಗಳೆಲ್ಲವೂ ಕೇಸರಿ ಬಂಟಿಂಗ್ಸ್ ಗಳು ರಾರಾಜಿಸುತ್ತಿದ್ದವು. ಹನುಮನ ಮೂರ್ತಿಯನ್ನು ಚುಂಚನಕಟ್ಟೆ ಮುಖ್ಯ ರಸ್ತೆ. ಗಾಂಧಿ ವೃತ್ತ. ಬಸ್ ಸ್ಟ್ಯಾಂಡ್ ರಸ್ತೆ. ರಾಮನಾಥಪುರ ರಸ್ತೆ. ಮಹಾವೀರ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಭಾಗವಹಿಸಿದ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣಾ ಕಾರ್ಯವನ್ನು ಮಾಡಲಾಯಿತು.

ಮಹಿಳೆಯರು ಕುಟುಂಬ ಸಮೇತರಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆಯನ್ನು ಸಲ್ಲಿಸಿದರು. ನಂತರ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಅನ್ನದಾಸೋಹಕ್ಕೆ ತೆರಳಿ ಪಂಕ್ತಿ ಭೋಜನ ಪ್ರಸಾದ ಸ್ವೀಕರಿಸಿದರು.

ವಿಎಸ್ ಎಸ್ ಎನ್ ಅಧ್ಯಕ್ಷರಾದ ಸತೀಶ್, ನಾಗೇಂದ್ರ ಮುಖಂಡರಾದ ಎಸ್ ಪಿ ಆನಂದ್ ಲಾಲೂ ಸಾಹೇಬ್ ಗ್ರಾಂ ಪಂ ಮಾಜಿ ಅಧ್ಯಕ್ಷರಾದ ಎಸ್ ವಿ ನಟರಾಜ್ ಎಸ್ ಆರ್ ಪ್ರಕಾಶ್ ದೇವಿಕಾ ಸುಧಾರೇವಣ್ಣ ಸದಸ್ಯರಾದ ನೀಲಮ್ಮ ವಾಹನ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಹನುಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಪೇಟೆ ಆಂಜನೇಯ ಸ್ವಾಮಿ ಯುವಕರ ಬಳಗದವರು, ಜನಪ್ರತಿನಿಧಿಗಳು, ಮುಖಂಡರು, ಮಹಿಳೆಯರು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು

2

RELATED ARTICLES
- Advertisment -
Google search engine

Most Popular