ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್. ನಗರ: ಕೆ.ಅರ್.ನಗರ ಪಟ್ಟಣದಲ್ಲಿರುವ ಮಾತೃಶ್ರೀ ಬುದ್ದಿ ಮಾಂದ್ಯ ಮಹಿಳಾ ಅನುಪಾಲನ ಕೇಂದ್ರದಿಂದ ಮಾನಸಿಕ ಅಸ್ವಸ್ಥ ಮಹಿಳೆ ಕಾಣಿಯಾಗಿರುವ ಕುರಿತು ಕೆ.ಆರ್ .ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 28 ವರ್ಷದ ಸುರೇಖ ಬಾನು ಎಂಬ ಮಾನಸಿಕ ಅಸ್ವಸ್ಥೆ ಮಹಿಳೆ ಆ.23ರ ಶುಕ್ರವಾರ ರಾತ್ರಿ 7.30 ರ ಸಮಯದಿಂದ ಕೇಂದ್ರದಿಂದ ಕಾಣಿ ಅಗಿದ್ದು ಕಾಣಿಯಾಗಿರುವ ಮಹಿಳೆ ಸಣ್ಣ ದೇಹ ಹೊಂದಿದ್ದು, ಚರ್ಮ ಕಪ್ಪು ಬಣ್ಣ ಇದ್ದು , ತಲೆ ಕೂದಲನ್ನು ಕತ್ತರಿಸಲಾಗಿದೆ.
ಈಕೆಯ ಬಗ್ಗೆ ಎಲ್ಲಾ ಕಡೆ ಹುಡುಕಾಡಿದರು ಇವಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಇವಳ ಬಗ್ಗೆ
ಸುಳಿವು ದೊರೆತವರು ಕೆ.ಅರ್.ನಗರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08223-263666 ಇಲ್ಲವೇ ಪೊಲೀಸ್ ನಿರೀಕ್ಷರ ಮೊಬೈಲ್ ದೂರವಾಣಿ ಸಂಖ್ಯೆ – 9480805036 ಜತಗೆ ಸಂಸ್ಥೆಯ ಕಾರ್ಯದರ್ಶಿ ಕುಪ್ಪೆ ಮಂಜು ಅವರ ಮೊಬೈಲ್ ಸಂಖ್ಯೆ -9742434753
ಸಂಪರ್ಕಿಸುವಂತೆ ಕೋರಲಾಗಿದೆ