- ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕೆ.ಆರ್.ನಗರ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮುಂಭಾಗದಲ್ಲಿ ನಗರದ ಮಹೇಂದ್ರ ಮೆಡಿಸನ್ ವತಿಯಿಂದ ನಿರ್ಮಿಸಿಕೊಟ್ಟಿರುವ ಶೀಟ್ ರೂಪಿಂಗ್ಅ ನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು. ಆನಂತರ ಮಾತನಾಡಿದ ಅವರು ಉಳ್ಳವರು ಕೇವಲ ತಮ್ಮ ಹಿತ ಕಾಪಾಡುಕೊಳ್ಳುವ ಜತೆಗೆ ಸಮಾಜಕ್ಕೆ ತಮ್ಮಿಂದಾದ ಸಹಾಯ ಮತ್ತು ಸೇವೆಯನ್ನು ಮಾಡಬೇಕೆಂದರು.
ಸೇವಾ ಮನೋಭಾವ ಎಲ್ಲರಲ್ಲೂಇರುವುದಿಲ್ಲಾ ಆದರೇ ಅದನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡರೆ ಸಮಾಜ ಸುಧಾರಣೆಯಾಗಲಿದೆ ಈ ನಿಟ್ಟಿನಲ್ಲಿ ಮಹೇಂದ್ರ ಮೆಡಿಷನ್ ಮಾಲೀಕರು ಮತ್ತು ಅವರ ಕುಟುಂಬದವರು ಇ0ತಹ ಸಮಾಜ ಸೇವಾ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವುದು ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಸರ್ಕಾರ ಜನ ಸಾಮಾನ್ಯರ ಆರೋಗ್ಯ ಕಾಪಡುವ ಹಿತದೃಷ್ಠಿಯಿಂದ ಪ್ರತಿ ವರ್ಷ ಸಾವಿರಾರು ಕೋಟಿ ಹಣ ಖರ್ಚು ಮಾಡಿ ಉಚಿತ ಚಿಕಿತ್ಸೆಕೊಡಿಸುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಪಣತೊಟ್ಟಿದ್ದುತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆನೀಡುತ್ತಿರುವುದರ ಜತೆಗೆ ವೈದ್ಯರು ಮತ್ತು ಸಿಬ್ಬಂದಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ವೇಳೆ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷಗಡ್ಡಮಹೇಶ್, ಪುರಸಭೆ ಸದಸ್ಯ ಕೋಳಿಪ್ರಕಾಶ್, ತಾಲೂಕುಆರೋಗ್ಯಾಧಿಕಾರಿಡಾ.ಡಿ.ನಟರಾಜ್, ಸಾರ್ವಜನಿಕಆಸ್ಪತ್ರೆ ಆಡಳಿತಾಧಿಕಾರಿ ಡಾ.ನವೀನ್‌ಕುಮಾರ್, ವೈದ್ಯರಾದಡಾ.ದರ್ಶನ್, ಆರೋಗ್ಯರಕ್ಷಕಮಿಟಿ ಸದಸ್ಯ ಹೆಚ್.ಹೆಚ್.ನಾಗೇಂದ್ರ, ಮಹೇಂದ್ರ ಮೆಡಿಷನ್ ಮಾಲೀಕ ನೆನ್‌ಮಲ್‌ಜೀ, ಪುತ್ರರಾದ ಮಹೇಂದ್ರ, ಮುಖೇಶ್, ಅಕ್ಷಯ್, ಕುಲದೀಪ್ ಮತ್ತಿತರರು ಇದ್ದರು.