ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ತಾಲೂಕಿನ ಹೊಸಕೊಪ್ಪಲು ಗೇಟ್ ಬಳಿ ಇರುವ ಶ್ರೀ ಅದಿ ಶಕ್ತಿ ಪಟ್ಲದಮ್ಮ ಮತ್ತು ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದ ಜಾತ್ರಾ ಮತ್ತು ಪೂಜಾ ಮಹೋತ್ಸವ ಶುಕ್ರವಾರ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಬಾರಿ ವಿಜೃಂಭ್ರಣೆಯಿಂದ ನಡೆಯಿತು.
ಜಾತ್ರಾ ಮತ್ತು ಪೂಜಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 6.30ಕ್ಕೆ ಗಣಪತಿ ಹೋಮ,ನವಗ್ರಮ ಹೋಮ, ದುರ್ಗ ಹೋಮವನ್ನು ಕೆ.ಆರ್.ನಗರದ ಚಂದ್ರ ಮೌಳೇಶ್ವರ ದೇವಸ್ಥಾನದ ಗಣಪತಿ ಭಟ್ ನೇತೃತ್ವದಲ್ಲಿ ನಡೆಸಲಾಯಿತು.
ಆನಂತರ ಪಟ್ಲದಮ್ಮ ಮತ್ತು ಲಕ್ಷ್ಮಿ ದೇವರಿಗೆ ಭಕ್ತಾಧಿಗಳ ಸಮ್ಮುಖದಲ್ಲಿ ವಿಶೇಷ ಪೂಜೆಸಲ್ಲಿಸಿದ ದೇವಾಲಯದ ಪ್ರಧಾನ ಅರ್ಚಕ ರಾಜಣ್ಣ ಅವರು ಮಹಾಮಂಗಳಾರತಿ ನೇರವೇರಿಸಿದಾಗ ಭಕ್ತಾಧಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ಪ್ರಾರ್ಥಿಸಿದರು.
ಜಾತ್ರಾ ಮಹೋತ್ಸವಕ್ಕೆ ಹೊಸಕೊಪ್ಪಲು, ಡಿ.ಕೆ.ಕೊಪ್ಪಲು, ಕಂಚಗಾರಕೊಪ್ಪಲು, ಸಿದ್ದಾಪುರ, ಶ್ರೀರಾಮಪುರ, ಕೆಸ್ತೂರು ಗೇಟ್, ಅರಸನಕೊಪ್ಪಲು ಸೇರಿದಂತೆ ಮತ್ತಿತರ ಗ್ರಾಮಗಳ ಸಾವಿರಾರು ಮಂದಿ ಭಾಗವಹಿಸಿದ್ದರು ಕಾರ್ಯಕ್ರಮಕ್ಕೆ ಅಗಮಿಸಿದ್ದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಪುರಸಭೆ ಅಧ್ಯಕ್ಷ ಶಿವುನಾಯಕ್, ಸದಸ್ಯ ನಟರಾಜು,
ಕೆ.ಆರ್.ನಗರ ಅರ್ಭನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಪಿ.ಎಲ್.ಡಿ.ಬ್ಯಾಂಕ್ ಉಪಾಧ್ಯಕ್ಷ ಪ್ರದೀಪ್,
ನಿರ್ದೇಶಕ ಹರಿಚಿದಂಬರ್, ದೇವಾಲಯ ಸಮಿತಿ ಗೌರವಧ್ಯಕ್ಷ ಕೆ.ಬಿ.ಪ್ರಕಾಶ್, ಅಧ್ಯಕ್ಷ ಕೆ.ಬಿ.ಬಲರಾಮೇಗೌಡ, ಕಾರ್ಯದರ್ಶಿ ಕೆ.ಎಸ್.ಹಿರಣ್ಣಯ್ಯ, ಸಹಕಾರ್ಯದರ್ಶಿ ಕೆ.ಟಿ.ಚಂದ್ರೇಗೌಡ, ಉಪಾಧ್ಯಕ್ಷ ಎಚ್.ಪಿ.ನಾಗರಾಜೇಗೌಡ, ಸಂಚಾಲಕರಾದ ಕುಮಾರ್, ವಿಶ್ವನಾಥ್, ಗ್ರಾ.ಪಂ.ಅಧ್ಯಕ್ಷ ರಂಗಸ್ವಾಮಿ, ವಕೀಲ ಕೆ.ಸಿ.ಹರೀಶ್, ಎಡತೊರೆ ಬಿ.ಎಡ್.ಕಾಲೇಜಿನ ವ್ಯವಸ್ಥಾಪಕ ಡಿ.ಕೆ.ಕೊಪ್ಪಲು ಗೇಟ್ ಲೋಕೇಶ್,
ಖಂಡರಾದ ಅನಂತ್ ಕುಮಾರ್ ಬಾಬು, ರಾಘು,ಕಾಂತರಾಜು, ಮಿಠಾಯಿ ಗೋವಿಂದೇಗೌಡ , ಮಹೇಶ್, ಎಚ್.ಬಿ. ಕುಮಾರ್, ಎಚ್.ಕೆ.ಮಂಜ, ಕಂಚಗಾರಕೊಪ್ಪಲು ಬಾಲು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.