- ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿ ಜನವರಿ 5 ರಿಂದ ಆರಂಭವಾಗುವ ಇತಿಹಾಸ ಪ್ರಸಿದ್ದ ಚುಂಚನಕಟ್ಟೆ ಬಾರಿ ದನಗಳ ಜಾತ್ರೆ ಮತ್ತು ಜ.15 ನಡೆಯುವ ಶ್ರೀರಾಮ ರಥೋತ್ಸವದ ಯಶಸ್ವಿಗೆ ಅಧಿಕಾರಿಗಳು ಶ್ರಮಿಸುವಂತೆ ಶಾಸಕ ಡಿ.ರವಿಶಂಕರ್ ಸೂಚನೆ ನೀಡಿದರು.
ಶನಿವಾರ ಚುಂಚನಕಟ್ಟೆ ಶ್ರೀರಾಮ ದೇವಾಲಯದ ಅವರಣದಲ್ಲಿ ಜನವರಿ ತಿಂಗಳಲ್ಲಿ ನಡೆಯುವ ಶ್ರೀರಾಮ ದೇವರ ರಥೋತ್ಸವ ಮತ್ತು ಬಾರಿ ದನಗಳ ಜಾತ್ರೆಯ ಪೂರ್ವ ಭಾವಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು ಈ ರಥೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗುತ್ತದೆ ಎಂದರು.
ಜಾತ್ರೆಗಳಿಗೆ ಬರುವ ರಾಸುಗಳಿಗೆ ಮತ್ತು ಜನರಿಗೆ ಸೂಕ್ತ ಕುಡಿಯುವ ನೀರು- ಸ್ವಚ್ಚತೆಗಳಿಗೆ- ರಸ್ತೆಯಲ್ಲಿ ದೂಳು ಬಾರದಂತೆ ರಸ್ತೆಗೆ ನೀರು ಹಾಕಲು ಆದ್ಯತೆ ನೀಡುವಂತೆ ಕುಪ್ಪೆ- ಹಳಿಯೂರು ಪಿಡಿಓಗಳಾದ ರಾಜೇಶ್ ಮತ್ತು ಚಿದಾನಂದ್ ಅವರಿಗೆ ಮತ್ತು ನೀರಾವರಿ ಇಲಾಖೆಯವರಿಗೆ ಸೂಚಿಸಿದರಲ್ಲದೇ ಜಾತ್ರಾ ಅವರಣದಲ್ಲಿ ರಾಸುಗಳಿಗೆ ಚಿಕಿತ್ಸೆ ನೀಡಲು ಮೂರು ಕಡೆ ತಾತ್ಕಲಿಕ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸುವಂತೆ ಪಶು ಇಲಾಖೆಯ ಎಡಿ ಡಾ.ಮಂಜುನಾಥ್ ಅವರಿಗೆ ತಾಕೀತು ಮಾಡಿದರು.
ಜಾತ್ರಾ ಮಾಳದಲ್ಲಿ ಮತ್ತು ಶ್ರೀರಾಮ ದೇವಾಲಯಕ್ಕೆ ಜಗಮಗಮಿಸುವ ವಿದ್ಯುತ್ ಅಲಂಕಾರವನ್ನು ಡಿ.31ರ ಒಳಗೆ ಮಾಡುವಂತೆ ಚೆಸ್ಕಾಂ ಎಇಇ ಅರ್ಕೇಶ್ ಮೂರ್ತಿ ಅವರಿಗೆ ಹೇಳಿದ ಶಾಸಕ ಡಿ.ರವಿಶಂಕರ್ ಜಾತ್ರೆ ರಾಜ್ಯದ ವಿವಿಧ ಕಡೆಯಿಂದ ಜನರು ಜಾತ್ರೆ ಮತ್ತು ರಥೋತ್ಸವಕ್ಕೆ ಅಗಮಿಸುವುದರಿಂದ ಇವು ಮುಗಿಯುವ ವರೆಗೂ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸುವಂತೆ ಡಿಪೋ ವ್ಯವಸ್ಥಾಪಕರಿಗೆ ಅದೇಶಿಸಿದರು.
ಜಾತ್ರೆಗೆ ಲಕ್ಷಾಂತರ ಮಂದಿ ಭಾಗವಹಿಸುವುದರಿಂದ ಪೊಲೀಸ್ ಇಲಾಖೆಯವರು ಹೆಚ್ಚಿನ ಭದ್ರತೆ ಒದಗಿಸಿ ಜನರಿಗೆ ಸೂಕ್ತ ರಕ್ಷಣೆ ಕೊಡಿ ಎಂದು ಸೂಚಿಸಿದ ಅವರು ಜಾತ್ರೆಯ ಕುರಿತು ರಾಜ್ಯಮಟ್ಟದಲ್ಲಿ ಪ್ರಚಾರ ನೀಡುವಂತೆ ತಾಲೂಕು ಅಡಳಿತಕ್ಕೆ ನಿರ್ದೇಶನ ನೀಡಿದರಲ್ಲದೇ ಜಾತ್ರಾ ಸಮಯದಲ್ಲಿ ನದಿಯಲ್ಲಿ ಈಜುವುದನ್ನ ನಿಷೇದಿಸಿ ಎಚ್ಚರ ವಹಿಸಿ ಎಂದು ನೀರಾವರಿ ಇಲಾಖೆಗೆ ನಿರ್ದೇಶನ ನೀಡಿದರು.
ಸರ್ಕಾರದ ಯೋಜನೆಗಳನ್ನು ಹೆಚ್ಚಿನ ಪ್ರಚಾರ ಪಡಿಸಲು ಆಯಾ ಇಲಾಖೆಯಿಂದ ಸಿಗುವ ಸೌಲಭ್ಯದ ಕುರಿತು ಕೃಷಿ,ತೋಟಗಾರಿಕೆ,ರೇಷ್ಮೆ, ಅರಣ್ಯ ಮತ್ತು ಮಹಿಳಾ ಕಲ್ಯಾಣ ಇಲಾಖೆಯವರು ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಆರಂಭಿಸುವಂತೆ ಈ ಐದು ಇಲಾಖೆಯವರಿಗೆ ಸೂಚಿಸಿದರು.
ಸಭೆಯಲ್ಲಿ ಜಿ.ಪಂ.ಮಾಜಿ ಸದಸ್ಯ ಜಯರಾಮೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಶ್ರೀರಾಮಪುರ ಆನಂದ್, ವಕೀಲ ಪಣೀತ್, ಕಾಂಗ್ರೇಸ್ ಮುಖಂಡ ಡೈರಿಮಾದು ಸೇರಿದಂತೆ ಮತ್ತಿರರು ಜಾತ್ರೆಯಲ್ಲಿ ಕೈಗೊಳ್ಳಬೇಕಾದ ಸಿದ್ದತೆಗಳು ಮತ್ತು ಆಗಬೇಕಾದ ಕಾರ್ಯಗಳ ಕುರಿತು ಸಭೆಯಲ್ಲಿ ಮಾತಾಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಗಳಾ ಸುರೇಂದ್ರ ಮೂರ್ತಿ, ನರಗುಂದ, ತಾ.ಪಂ.ಇಓ ಕುಲದೀಪ್, ಬಿಇಓ ಕೃಷ್ಣಪ್ಪ, ಎಇಇ ಅರ್ಕೇಶ್, ಪಶುಇಲಾಖೆಯ ಡಾ.ಮಂಜುನಾಥ್, ಅಗ್ನಿಶಾಮಕ ಇಲಾಖೆ ವೆಂಕಟೇಶ್ ಮೂರ್ತಿ, ಕೃಷಿ ಇಲಾಖೆಯ ಮಲ್ಲಿಕಾರ್ಜುನ್, ಉಪತಸೀಲ್ದಾರ್ ಶರತ್, ಆರ್.ಐ, ಚಿದನಂದಬಾಬು, ದೇವಾಲಯದ ಇಓ ರಘು, ಪಾರುಪತ್ತೆದಾರ್ ಯತೀಶ್, ಪಿಡಿಓ ರಾಜೇಶ್, ಇಂಜಿನಿಯರ್ ಸಿದ್ದೇಶ್ವರ ಪ್ರಸಾದ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಉದಯಶಂಕರ್ ಎಂ.ಎಸ್.ಮಹದೇವ್, ವಕ್ತಾರ ಸಯದ್ ಜಾಬೀರ್, ಜಿ.ಪಂ.ಮಾಜಿ ಸದಸ್ಯ ಜಿ.ಆರ್.ರಾಮೇಗೌಡ, ಕುಪ್ಪೆ ಸಹಕಾರ ಸಂಘದ ಅಧ್ಯಕ್ಷ ಸಿ.ಬಿ.ಸಂತೋಷ್,ಹಳಿಯೂರು ಗ್ರಾ.ಪಂ ಉಪಾಧ್ಯಕ್ಷ ನೂತನ್ ಗೌಡ, ಕುಪ್ಪೆ ಗ್ರಾ.ಪಂ. ಸದಸ್ಯರಾದ ಗೋವಿಂದೇಗೌಡ ,ಗೌರಮ್ಮ ಮುಖಂಡರಾದ ಡೈರಿ ಮಾದು, ಎಚ್.ಜೆ.ರಮೇಶ್, ಬಡ್ಡೆಮಂಜು, ಸಯದ್ ಸಲೀಂ, ಸಿ.ಎಸ್.ಗಿರೀಶ್, ವಿಜಿ ಕಾಡು, ಉದಯಮಾವತ್ತೂರ್ ಮಹಾಲಿಂಗು, ಚಿಬುಕಹಳ್ಳಿ ಬಸವರಾಜು, ಹೊಸಕೋಟೆ ಚೆಲುವರಾಜು ಶಾಸಕರ ಅಪ್ತಸಹಾಯಕ ಮಹದೇವ್,ನವೀನ್ ಸೇರಿದಂತೆ ಮತ್ತಿತರರು ಹಾಜರಿದ್ದರು
“ಜನವರಿ 5 ರಿಂದ ಜಾತ್ರೆಗೆ ಬನ್ನಿ”
ಜನವರಿ 5ರಿಂದ ಆರಂಭವಾಗುವ ಚುಂಚನಕಟ್ಟೆ ಜಾನುವಾರು ಜಾತ್ರೆಗೆ ದನಗಳನ್ನು ರೈತರು ಕರೆ ತರಬೇಕು ಇದಕ್ಕಿಂತ ಮೊದಲು ಬಂದರೆ ಸೂಕ್ತ ಸೌಲಭ್ಯ ಕಲ್ಪಿಸಿ ಕೊಡಲಾಗುದಿಲ್ಲ ಜತಗೆ ರಾಸುಗಳಿಗೆ ಬಹುಮಾನ ನೀಡಲು ಕ್ರಮ ಕೈಗೊಳ್ಳಲಾಗುವುದು ರೈತರು ಸಹಕಾರ ನೀಡಿ ಜಾತ್ರೆಯ ಯಶಸ್ವಿಗೆ ಸಹಕರಿಸಿ ಬೇಕು ಪೂರ್ವ ಭಾವಿ ಸಭೆಗೆ ಬಾರದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುತ್ತದೆ.
ಡಿ.ರವಿಶಂಕರ್, ಶಾಸಕರು