ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ :ಸಾಲಿಗ್ರಾಮ ತಾಲೂಕು ಕುರುಬರ ಸಂಘದ ನೂತನ ಅಧ್ಯಕ್ಷರಾಗಿ ಬೀಚನಹಳ್ಳಿಕೊಪ್ಪಲು ಗ್ರಾಮದ ಸಿದ್ದರಾಮೇಗೌಡ ಆಯ್ಕೆಯಾಗಿದ್ದಾರೆ.
ಪಟ್ಟಣದಲ್ಲಿ ನಡೆದ ತಾಲೂಕು ಕುರುಬರ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಬೀಚನಹಳ್ಳಿಕೊಪ್ಪಲು ಸಿದ್ದರಾಮೇಗೌಡ, ಗೌರವಾಧ್ಯಕ್ಷರಾಗಿ ಅಂಕನಹಳ್ಳಿಕೊಪ್ಪಲು ದೊಡ್ಡೆಗೌಡ, ಉಪಾಧ್ಯಕ್ಷರಾಗಿ ಗುಮ್ಮನಹಳ್ಳಿ ರಾಮೇಗೌಡ, ಸೋಮನಹಳ್ಳಿ ಮಂಜುನಾಥ್, ಭೇರ್ಯ ಮಂಜಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಕಾಳಮ್ಮನಕೊಪ್ಪಲು ಮಹದೇವ್, ಸಹ ಕಾರ್ಯದರ್ಶಿಯಾಗಿ ಕೆಡಗ ರವಿ, ಚನ್ನಂಗೆರೆ ಜಗದೀಶ್, ಸಾಲೆಕೊಪ್ಪಲು ರಂಗಸ್ವಾಮಿ, ಸಂಘಟನಾ ಕಾರ್ಯದರ್ಶಿಯಾಗಿ ದಿಡ್ಡಹಳ್ಳಿ ಪಾಲಾಕ್ಷ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದೊಡ್ಡಕೊಪ್ಪಲು ರಾಜೇಗೌಡ, ಸಂಚಾಲಕರಾಗಿ ದಿಡ್ಡಹಳ್ಳಿ ಗೋವಿಂದರಾಜು ಸೇರಿದಂತೆ 30ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ಆಯ್ಕೆ ಮಾಡ ಲಾಯಿತು.
ತಾಲೂಕು ಕುರುಬರ ಸಂಘದ ನೂತನ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಬಲರಾಮ್, ಸಂದೀಪ್, ಕೃಷ್ಣೆಗೌಡ, ಸತೀಶ್, ರಾಜೇಗೌಡ, ರಂಗೇಗೌಡ,
ಜಯರಾಮೇಗೌಡ, ಕೃಷ್ಣಮೂರ್ತಿ, ಸುರೇಶ್, ರಾಜೇಗೌಡ, ಸ್ವಾಮಿ, ಕುಮಾರ್, ಲೋಕೇಶ್, ಶಿವರಾಜ್, ಜೈಕುಮಾರ್, ಮಹದೇವ್, ರಾಜೇಗೌಡ, ಹೇಮಂತ್, ಶಂಕರ್ ಸೇರಿದಂತೆ ಹಲವರು ಇದ್ದರು.