ಕೆ.ಆರ್.ನಗರ: ಗ್ರಾಮದೇವತೆಗಳಲ್ಲಿ ಒಂದಾದ ಕನ್ನಂಬಾಡಿಯಮ್ಮ ದೇವರ ಆಚರಣೆ ,ಮೆರವಣಿಗೆಯನ್ನು ಬಹಳ ವಿಶೇಷವಾಗಿ ಭತ್ತದನಾಡು ಕೆ.ಆರ್.ನಗರ ಪಟ್ಟಣದ ಆಂಜನೇಯ ಬಡಾವಣೆಯಲ್ಲಿ ಗಾಣಿಗ ಸಮುದಾಯ ಬಹಳ ಸಂಪ್ರದಾಯಕವಾಗಿ ಆಚರಣೆ ಮಾಡಿದರು.
ಪಟ್ಟಣದ ಆಂಜನೇಯ ಬಡಾವಣೆಯಲ್ಲಿ ಕಳೆದ ಎರಡು ದಿನಗಳಿಂದ ಪಟ್ಟಣದ ಆಂಜನೇಯ ಬಡಾವಣೆ ರಸ್ತೆಗೆ ತಳಿರು ತೋರಣಗಳನ್ನು ಕಟ್ಟಿ, ಕಣ್ಮನ ಸೆಳೆಯುವ ವಿದ್ಯುತ್ ದೀಪಾಂಲಕಾರ ಮಾಡಲಾಗಿತ್ತು.
ಕನ್ನಂಬಾಡಿಯಮ್ಮಎಂದರೆ ಕಾವೇರಿ ಮಾತೆಯೆ ಎಂಬುದು ಇಲ್ಲಿಯವರ ವಾಡಿಕೆ. ಪಟ್ಟಣದಲ್ಲಿ ಆರಂಭದಲ್ಲೇ ನೆಲೆ ನಿಂತಿರುವ ಕನ್ನಂಬಾಡಿಯಮ್ಮ ದೇವರ ಅಸ್ಥಿತ್ವವು ಹಿರಿಯರ ಪೂರ್ವಿಕರು ಒಳಿತುಗಾಗಿ ಆಚರಣೆ ಮಾಡುತ್ತಿದ್ದಾರೆ . ಇದೇ ಮೇ ೨೦ ಸೋಮವಾರದಿಂದ ನಡೆಯುವ ಕನ್ನಂಬಾಡಿ ಹಬ್ಬ, ಮಂಗಳವಾರ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಬಹಳ ವಿಜೃಂಭಣೆಯಿಂದ ಮೆರವಣಿಗೆ ಮೂಲಕ ನಡೆಯಿತು. ವಿವಿದ ಬಗೆಯ ಹೂಗಳಿಂದ ಆಲಂಕೃತಗೊಂಡ ತೆರದ ವಾಹನದದಲ್ಲಿ ಕನ್ನಂಬಾಡಿ ಅಮ್ಮನ ದೇವರ ವಿಗ್ರಹ ಪ್ರತಿಷ್ಠಾಪಿಸಿ, ಕೊಂಬು ,ಕಹಳೆ, ನಗಾರಿಯೊಂದಿಗೆ ಮೆರವಣಿಗೆಯಲ್ಲಿ ಬಾಲಕಿಯರು ಐದು ಗ್ರಾಮದೇವತೆಗಳ ಪಂಚ ಕಳಸ ಹೊತ್ತ ಸಾಗಿದರು.
ಐತಿಹ್ಯ ಕಥೆ: ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟು ಕಟ್ಟುವ ವೇಳೆ ಅಲ್ಲಿಯ ಕನ್ನಂಬಾಡಿ ದೇವರು ವಾಸ ಸ್ಥಾನ ಮುಳುಗಿ ಹೋಗಿಯಿತು. ಇದರಿಂದ ಕೊಡಗಿಗೆ ಹೋಗುತ್ತಿದ್ದ ಸಹೋದರಿಯನ್ನು ಗ್ರಾಮದೇವತೆ ಮಸಣೀಕಮ್ಮ ತಡೆದು ಇಲ್ಲೆ ನೆಲೆಯೂರುವಂತೆ ತಿಳಿಸಿತು ಎನ್ನುವ ಐತಹ್ಯ ಎಂಬುದು ಸಮುದಾಯ ನಂಬಿಕೆ.
ಕನ್ನಂಬಾಡಿ ಅಮ್ಮ ದೇವರು ಮೈಸೂರು ಜಿಲ್ಲೆಯಲಿ ಗಡಿಯಲ್ಲೆ ಇದ್ದರು ಪಟ್ಟಣದ ಗಾಣಿಗ ಸಮುದಾಯದ ಮನೆ ದೇವತೆ ಎಂದು ನಂಬುವುದು ಪಟ್ಟಣದ ನಾಗರೀಕರ ಅಭಿಪ್ರಾಯ ವಾಗಿದೆ. ಮಂಗಳವಾರ ಪಟ್ಟಣದ ಗಾಣಿಗ ಸಮುದಾಯದ ಭವನದಲ್ಲಿ ಸಾವಿರಾರು ಭಕ್ತರಿಗೆ ಅನ್ನ ದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಗಾಣಿಗ ಸಮುದಾಯದ ಮುಖಂಡರಾದ ವಿಕಾಸ್, ಕೃಷ್ಣಶೆಟ್ಟಿ, ರಾಘವೇಂದ್ರ, ಸತೀಶ್, ಅವಿನಾಶ್, ಪ್ರಭಾಕರ್,ಮಂಜುನಾಥ್, ಸುಬ್ರಹ್ಮಣ್ಯ,ಗೋಪಾಲಶೆಟ್ಟಿ ಮೊದಲಾದವರು ಇದ್ದರು.
ನಮ್ಮ ಗಾಣಿಗ ಸಮುದಾಯದ ಅಧಿದೇವತೆ ಕನ್ನಂಬಾಡಿ ಅಮ್ಮ ದೇವರನ್ನು ೬೦ ವರ್ಷಗಳಿಂದ ನಮ್ಮ ಪೂರ್ವೀಕರು ಉತ್ಸವವನ್ನು ಸಾಮರಸ್ಯದಿಂದ ನಾಡಿನ ಒಳಿತಿಗಾಗಿ, ಮಳೆಬೆಳೆ ಚೆನ್ನಾಗಿ ಆಗಲಿ, ಯಾವುದೇ ಸಾಂಕ್ರಾಮಿಕ ರೋಗಗಳ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ, ಕೆ.ಆರ್.ಎಸ್. ಹಿನ್ನೀರಿನಲ್ಲಿರುವ ಕನ್ನಂಬಾಡಿ ಅಧಿದೇವತೆಯ ಮೂಲ ವಿಗ್ರಹವನ್ನು ವಿವಿದ ಪೂಜಾ ಕೈಂಕರ್ಯಗಳೊಂದಿಗೆ ಕರೆತಂದು ಪಟ್ಟಣದಲ್ಲಿ ಅಲಂಕೃತ ತೆರದ ವಾಹನದಲ್ಲಿ ಮೆರವಣಿಗೆ ಮಾಡಿ ನಂತರ ಭಕ್ತಾದಿಗಳಿಗೆ ದಾಸೋಹ ಮಾಡಲಾಗುತ್ತದೆ.
ಉಮೇಶ್, ಪುರಸಭಾ ಸದಸ್ಯ. ಕೆ.ಆರ್.ನಗರ. ಗಾಣಿಗ ಸಮುದಾಯದ ಮುಖಂಡರು.