ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಾಲೂಕಿನ ಹಂಪಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ವಿದ್ಯಾನಾರಾಯಣ್ ಅವಿರೋಧವಾಗಿ ಆಯ್ಕೆಯಾದರು.
ಈವರೆಗೆ ಅಧ್ಯಕ್ಷರಾಗಿದ್ದ ರಮ್ಯಮಂಜುನಾಥ್ ರವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗ್ರಾಮ ಪಂಚಾಯಿತಿ ಆಡಳಿತ ಕಚೇರಿಯಲ್ಲಿ ಚುನಾವಣೆ ನಡೆಸಲಾಯಿತು. ೧೮ ಮಂದಿ ಸದಸ್ಯರನ್ನು ಹೊಂದಿರುವ
ಹಂಪಾಪುರ ಗ್ರಾ.ಪಂನಲ್ಲಿ ವಿದ್ಯಾನಾರಾಯಣ್ ಹೊರತುಪಡಿಸಿ ಅಧ್ಯಕ್ಷ ಸ್ಥಾನಕ್ಕೆ ಬೇರಾರು ನಾಮಪತ್ರ ಸಲ್ಲಿಸದಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಿಡಿಪಿಒ ಸಿ.ಎಂ.ಅಣ್ಣಯ್ಯ ಇವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಸದಸ್ಯ ಎಂ.ಮಾನಸ ಗೈರು ಹಾಜರಾಗಿದ್ದರು. ಚುನಾವಣಾ ಸಭೆಯಲ್ಲಿ ಉಪಾಧ್ಯಕ್ಷ ಎಂ.ಬಿ.ಲೋಕೇಶ್, ಸದಸ್ಯರಾದ ಹೆಚ್.ಡಿ.ನಾಗೇಶ್, ಮಹದೇವಕುಮಾರ್, ಕೆ.ಎಸ್.ಚೈತ್ರ, ಹೆಚ್.ಕೆ.ನಾಗರಾಜು, ಗೌರಮ್ಮ, ಹರಿರಾಜು, ಕಲಾವತಿ, ಆರ್.ಜಿ.ನಾಗಮಣಿ, ಹೆಚ್.ಎಸ್.ರಾಮೇಗೌಡ, ಕಾರ್ತಿಕ್, ಎಸ್.ವೈ.ಸೌಮ್ಯ, ಎಂ.ಎಸ್.ರವಿಕುಮಾರ್, ಬಿ.ಎನ್.ರೇವಣ್ಣ, ಎಂ.ಎಸ್.ಗಿರೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಎ.ಅಶ್ವಿನಿ, ಕಾರ್ಯದರ್ಶಿ ಭಾರತಿ ಹಾಜರಿದ್ದರು.
ನೂತನ ಅಧ್ಯಕ್ಷೆ ವಿದ್ಯಾನಾರಾಯಣ್ ಮಾತನಾಡಿ ನನ್ನ ಅಧಿಕಾರದ ಅವಧಿಯಲ್ಲಿ ಗ್ರಾಮ ಪಂಚಾಯಿತಿ
ವ್ಯಾಪ್ತಿಯ ಗ್ರಾಮಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಇದಕ್ಕೆ ಎಲ್ಲಾ ಸದಸ್ಯರು ಸಹಕಾರ ನೀಡಬೇಕು ಎಂದು ಕೋರಿದರು.
ನೂತನ ಅಧ್ಯಕ್ಷರ ಆಯ್ಕೆ ಪ್ರಕಟಗೊಳ್ಳುತ್ತಿದ್ದಂತೆ ಪಂಚಾಯಿತಿ ಸದಸ್ಯರು, ಅಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಹಂಪಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ
ಹೆಚ್.ಪಿ.ಪ್ರಶಾಂತ್, ನಿರ್ದೇಶಕ ಪಿ.ಎಸ್.ದೇವರಾಜು, ಮಾಜಿ ಸದಸ್ಯ ಬಸವರಾಜು, ಮುಖಂಡರಾದ ಪರಶುರಾಮ್, ನಾರಾಯಣ್, ಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು ಮತ್ತಿತರರು ಹಾಜರಿದ್ದರು.