ಕೆ.ಆರ್.ಪೇಟೆ: ಕೆ.ಆರ್.ಪೇಟೆಯಲ್ಲಿ ನಿರ್ಮಾಣವಾಗಿರುವ 8 ಅಡಿ ಎತ್ತರದ ಪುನೀತ್ ರಾಜ್ ಕುಮಾರ್ ಕಂಚಿನ ಪುತ್ಥಳಿಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅನಾವರಣ ಮಾಡಿದರು.
ಪುನೀತ್ ಯುವ ಸಾಮ್ರಾಜ್ಯದ ವತಿಯಿಂದ ಕೆ.ಆರ್.ಪೇಟೆ ಪಟ್ಟಣದ ಬೊಮ್ಮೇಗೌಡ ವೃತ್ತದಲ್ಲಿ ಅಪ್ಪು ಪುತ್ಥಳಿ ನಿರ್ಮಾಣ ಮಾಡಲಾಗಿದೆ.

ಪುತ್ಥಳಿ ಅನಾವರಣಕ್ಕೆ ಆಗಮಿಸಿದಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.
ಪಟಾಕಿಗಳನ್ನು ಸಿಡಿಸಿ, ಪುಷ್ಪವೃಷ್ಟಿ ಮಾಡಿ, ಅಪ್ಪು ಘೋಷಣೆಯೊಂದಿಗೆ ಸ್ವಾಗತ ಕೋರಿದರು.
ಇದೇ ವೇಳೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್ ಪೇಟೆ, ಮನೋಹರ ಗೌಡ, ಮಂಡ್ಯ ರವಿ, ಸೇರಿ ಸಾವಿರಾರು ಅಭಿಮಾನಿಗಳು ಭಾಗಿಯಾಗಿದ್ದರು.