ಕೆ.ಆರ್.ಪೇಟೆ: ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತ ಬಲಿಯಾಗಿರುವ ಘಟನೆ ತಾಲೂಕಿನ ಬೀಡದಹಳ್ಳಿಯಲ್ಲಿ ನಡೆದಿದೆ.
ಸಿಂಗನಹಳ್ಳಿ ಗ್ರಾಮದ ಶಿವೇಗೌಡ (60) ಮೃತ ರೈತ.
ಜಮೀನಿಗೆ ಹೋಗಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವನ್ನಪ್ಪಿದ್ದಾನೆ.
ಕಿಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.