Friday, August 22, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರದ ಕೆ.ಎಸ್. ಮಂಜುನಾಥ್ ಅಹಿಂದ ಸಂಘಟನೆ ಮೈಸೂರು ಜಿಲ್ಲಾಧ್ಯಕ್ಷರಾಗಿ ನೇಮಕ

ಕೆ.ಆರ್.ನಗರದ ಕೆ.ಎಸ್. ಮಂಜುನಾಥ್ ಅಹಿಂದ ಸಂಘಟನೆ ಮೈಸೂರು ಜಿಲ್ಲಾಧ್ಯಕ್ಷರಾಗಿ ನೇಮಕ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ರಾಷ್ಟ್ರೀಯ ಅಹಿಂದ ಸಂಘಟನೆ ಪ್ರಚಾರ ಸಮಿತಿಯ ಮೈಸೂರು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಕೆ.ಆರ್.ನಗರ ತಾಲೂಕಿನ ಕಾಳೇನಹಳ್ಳಿ ಹೊಸಕೊಪ್ಪಲು ಗ್ರಾಮದ ರೈತ ಮುಖಂಡ ಗರುಡಗಂಭದ ಸ್ವಾಮಿಯವರ ಮಗ ಕೆ.ಎಸ್.ಮಂಜುನಾಥ್ ರವರನ್ನು ನೇಮಕ ಮಾಡಲಾಗಿದೆ.

ಸಂಘಟನೆಯ ರಾಜ್ಯ ಅಧ್ಯಕ್ಷ ಮುತ್ತಣ್ಣ ಎಸ್.ಶಿವಳ್ಳಿ ರವರು ನೇಮಕ ಮಾಡಿ ಆದೇಶ ಹೊರಡಿಸಿದ್ದು ಜಿಲ್ಲೆಯಲ್ಲಿ ಅಹಿಂದ ಸಂಘಟನೆಯನ್ನು ಬಲವರ್ಧನೆ ಮಾಡುವ ಮೂಲಕ ಸಂಘಟನೆಗೆ ಶ್ರಮಿಸಬೇಕು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಅಹಿಂದ ಸಂಘಟನೆ ಪ್ರಚಾರ ಸಮಿತಿಯ ಮೈಸೂರು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವ ಕೆ.ಎಸ್.ಮಂಜುನಾಥ್ ರವರನ್ನು ನಗರ ಯೋಜನಾ ಪ್ರಾಧಿಕಾರದ ಕಾನೂನು ಸಲಹೆಗಾರ ಶಿವರಾಜ್, ರೈತ ಮುಖಂಡರಾದ ದೇವೆಂದ್ರ, ಕೆ.ಪಿ.ಜಗದೀಶ್, ಎಂಎಸ್ ಎಸ್ ತಾಲೂಕು ಅಧ್ಯಕ್ಷ ರವಿಕುಮಾರ್ ಇನ್ನಿತರರು ಅಭಿನಂದಿಸಿದ್ದಾರೆ.

RELATED ARTICLES
- Advertisment -
Google search engine

Most Popular