Tuesday, May 6, 2025
Google search engine

Homeರಾಜ್ಯಸುದ್ದಿಜಾಲಕೆ.ಎಸ್. ಸೋಮಶೇಖರ್, ಎಂ.ಕೆ.ಹರಿಚರಣ್ ತಿಲಕ್‌ಗೆ ಸನ್ಮಾನ

ಕೆ.ಎಸ್. ಸೋಮಶೇಖರ್, ಎಂ.ಕೆ.ಹರಿಚರಣ್ ತಿಲಕ್‌ಗೆ ಸನ್ಮಾನ

ಕೆ.ಆರ್.ಪೇಟೆ : ರೇಷ್ಮೆ ಕೃಷಿಯಲ್ಲಿ ಸಾಧನೆ ಮಾಡಿರುವ ಪ್ರಗತಿಪರ ರೈತ ಕೆ.ಎಸ್. ಸೋಮಶೇಖರ್ ಅವರಿಗೆ ರಾಜ್ಯ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಸಿಕ್ಕಿರುವುದು ಹಾಗೂ ಪತ್ರಿಕಾ ಕ್ಷೇತ್ರದಲ್ಲಿನ ಸಾಧನೆಗೆ ಎಂ.ಕೆ.ಹರಿಚರಣ್ ತಿಲಕ್ ಅವರನ್ನು ಮಿತ್ರ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಮಾಜಿ ಶಾಸಕ ಬಿ.ಪ್ರಕಾಶ್ ಹೇಳಿದರು.

ಪಟ್ಟಣದ ರಾಮದಾಸ್ ಹೋಟೆಲ್ ಸಭಾಂಗಣದಲ್ಲಿ ಮಿತ್ರ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ೨೦೨೪ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜ ಸೇವಕ ವಿಜಯರಾಮೇಗೌಡ ಅವರು ತಮ್ಮ ಸಂಸ್ಥೆಯ ಮೂಲಕ ಬಡಜನರು ಹಾಗೂ ತುಳಿತಕ್ಕೆ ಒಳಗಾದವರ ಸೇವೆ ಮಾಡುತ್ತಾ ಭಗವಂತನನ್ನು ಕಾಣುತ್ತಿದ್ದಾರೆ. ಕಳೆದ ೨೨ವರ್ಷಗಳಿಂದ ಮೈಸೂರಿನಲ್ಲಿ ಉದ್ಯಮಿಯಾಗಿ ಬಡವರು ಮತ್ತು ನೊಂದವರಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ, ಕ್ರೀಡಾ ಸಾಧಕರಿಗೆ ಯಾವುದೇ ಪ್ರಚಾರ ಬಯಸದೇ ಕೈಲಾದ ನೆರವು ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಉತ್ತಮ ಸ್ಥಾನಮಾನಗಳು ಸಿಗಲಿ ಎಂದು ಶುಭ ಹಾರೈಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಮಾತನಾಡಿ.

ಸ್ವಾರ್ಥವೇ ತುಂಬಿರುವ ಇಂದಿನ ಸಮಾಜದಲ್ಲಿ ಸೇವಾ ಚಟುವಟಿಕೆಗಳನ್ನು ನಡೆಸುವ ಜನರು ಕಡಿಮೆಯಾಗುತ್ತಿದ್ದಾರೆ. ಇದಕ್ಕೆ ಅಪವಾದವೆನ್ನುವಂತೆ ಸಮಾಜ ಸೇವಕರಾದ ಬೂಕನಕೆರೆ ವಿಜಯ್ ರಾಮೇಗೌಡ ಅವರು ಮಿತ್ರ ಫೌಂಡೇಶನ್ ಮೂಲಕ ಜನೋಪಯೋಗಿ ಕೆಲಸ ಗಳನ್ನು ನಡೆಸಿ ನಾಗರಿಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್, ಜಿಪಂ ಮಾಜಿ ಸದಸ್ಯ ಕೊಡಿಮಾರನಹಳ್ಳಿ ದೇವರಾಜು, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಘಲಯ ರಮೇಶ್, ಮಾಜಿ ಉಪಾಧ್ಯಕ್ಷ ಎಲ್.ಪಿ.ನಂಜಪ್ಪ, ಸನ್ಮಾನಿತರಾದ ಸೋಮಶೇಖರ್ ಹಾಗೂ ಹರಿಚರಣ್ ತಿಲಕ್, ಪುರಸಭಾ ಸದಸ್ಯರಾದ ಕೆ.ಸಿ.ಮಂಜುನಾಥ್, ಡಿ.ಪ್ರೇಮಕುಮಾರ್, ಕೆ.ಆರ್.ನೀಲಕಂಠ, ಸಚಿವ ಚೆಲುವರಾಯಸ್ವಾಮಿ ಆಪ್ತ ಸಹಾಯಕ ಚೇತನಾಮಹೇಶ್, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಗೋವಿಂದರಾಜು, ತಾ.ಪಂ.ಮಾಜಿ ಸದಸ್ಯರಾದ ಮಾಧವಪ್ರಸಾದ್, ಶ್ಯಾಮಣ್ಣ, ಸಾಸಲು ಈರಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಎನ್.ದಿವಾಕರ್, ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಿವಮ್ಮ, ನಿವೃತ್ತ ಇಂಜಿನಿಯರ್ ವೆಂಕಟಪ್ಪ, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular