ಹನೂರು :ಜಲ್ಲಿಪಾಳ್ಯ ಗ್ರಾಮದ ಮನೆಯೊಂದರಲ್ಲಿ ಕಡವೆ ಮಾಂಸ ಮಾರಾಟ ಮಾಡಲು ಮುಂದಾಗಿದ್ದ ಆರೋಪಿಯೋರ್ವನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ
ಬಂಧಿತ ಆರೋಪಿ ರಾಜು ಆಲಿಯಾಸ್ ಚಿನ್ನಪ್ಪಯ್ಯ ಎಂಬಾತನಾಗಿದ್ದಾನೆ. ಅರಣ್ಯಾಧಿಕಾರಿಗಳಾದ ಗೀರಿಶ್ , ಅಮೀನ್ ಸಾಬ ಮಕಾಂದರ ಮತ್ತು ಕಾಶಿಲಿಂಗ ನರೂಟೆ, ಗಸ್ತು ಅರಣ್ಯಪಾಲಕರು ಮತ್ತು ಸಿಬ್ಬಂದಿಗಳು ಜಲ್ಲಿಪಾಳ್ಯ ಗ್ರಾಮದ ವಾಸದ ಮನೆಯಲ್ಲಿ ವನ್ಯಪ್ರಾಣಿಯ ಕಡವೆ ಮಾಂಸ ಇರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕಡವೆಯ ಚರ್ಮ, ಎರಡು ಕಾಲುಗಳು, ಎರಡು ಒಂಟಿ ನಳಿಕೆಯ ನಾಡ ಬಂದೂಕುಗಳು, ಮದ್ದುಗುಂಡುಗಳು ಮತ್ತು ಚೂರಿ ಮಚ್ಚುಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.