Friday, April 18, 2025
Google search engine

Homeರಾಜ್ಯಸುದ್ದಿಜಾಲವಿಜೃಂಭಣೆಯಿಂದ ಜರುಗಿದ ಕಾಡುಬಸಪ್ಪ ದೇವಸ್ಥಾನ ಗೋಪುರ ಜೀರ್ಣೋದ್ಧಾರ , ಬಸವಣ್ಣ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮ

ವಿಜೃಂಭಣೆಯಿಂದ ಜರುಗಿದ ಕಾಡುಬಸಪ್ಪ ದೇವಸ್ಥಾನ ಗೋಪುರ ಜೀರ್ಣೋದ್ಧಾರ , ಬಸವಣ್ಣ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್ ನಗರ : ಸುಮಾರು 300 ವರ್ಷಗಳ ಇತಿಹಾಸ ಇರುವ ಶ್ರೀ ಕಾಡುಬಸಪ್ಪ ದೇವಸ್ಥಾನದ ಗೋಪುರ ಜೀರ್ಣೋದ್ಧಾರ ಬಸವಣ್ಣ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮ ತಾಲೂಕಿನ ಮಳಲಿ ಗ್ರಾಮದಲ್ಲಿ ವಿಜೃಂಭಣೆಯಿಂದ ಸೋಮವಾರ ಜರುಗಿತು.

ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯರಾದ ದೊಡ್ಡ ಸ್ವಾಮಿಗೌಡ ಭೇಟಿ ನೀಡಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ಮಾತನಾಡಿದ ಅವರು ಹಲವು ವರ್ಷಗಳ ಹಿಂದೆ ಕಲ್ಲಿನ ಆಕಾರದಲ್ಲಿ ಬಸವಣ್ಣನ ಪ್ರತಿರೂಪ ಜನರಿಗೆ ಗೋಚಾರವಾಗಿದ್ದು ಆ ಬಸವಣ್ಣನ ಮೂರ್ತಿಯನ್ನು ತಾತಾ ಮುತ್ತಾತರ ಕಾಲದಿಂದಲೂ ಪೂಜಿಸಿಕೊಂಡು ಜನರು ತಮ್ಮ ಇಷ್ಟಾರ್ಥ ಪೂಜೆಯನ್ನು ಸಲ್ಲಿಸಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಹಾಗಾಗಿ ಈ ದೇವಸ್ಥಾನದ ಅಭಿವೃದ್ಧಿಗೆ ಮಳಲಿ ಗ್ರಾಮಸ್ಥರು ಎಲ್ಲಾ ಸಮಾಜದ ಮುಖಂಡನ ಒಳಗೊಂಡಂತೆ ದೇವಸ್ಥಾನ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಮುಂದಾಗಿದ್ದು ತುಂಬ ಸಂತೋಷದ ವಿಷಯ ಎಂದರು.

ಗ್ರಾಮದ ಹಿರಿಯ ಮುಖಂಡ ವೀರೇಂದ್ರ ಮಾತನಾಡಿ ಹಲವು ದಿನಗಳಿಂದ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿತ್ತು ಸುಂದರವಾಗಿ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮಸ್ಥರು ಶನಿವಾರ ಭಾನುವಾರ ಮತ್ತು ಸೋಮವಾರದ ತನಕ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ನೆರವೇರಿಸಿದರು ಸೋಮವಾರ ಬೆಳಿಗ್ಗೆ ಗೋಪುರ ಉದ್ಘಾಟನೆ ಮತ್ತು ಬಸವಣ್ಣ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಸೇರದಂತೆ ವಿವಿಧ ಪೂಜಾ ಕ ನಡೆದವು. ಎಂದು ತಿಳಿಸಿದರು.

ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡು ಸರತಿ ಸಾಲಿನಲ್ಲಿ ದೇವರ ದರ್ಶನವನ್ನು ಪಡೆದರು ಮಂಡಳಿ ಗ್ರಾಮಸ್ಥರಿಂದ ಬಂದಂತ ಎಲ್ಲಾ ಭಕ್ತಾದಿಗಳಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಿದರು ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದಲೂ ಬಂದಂತ ಭಕ್ತಾದಿಗಳು ಬಸವಣ್ಣನ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಭಾನುವಾರ ಸಂಜೆ ಗ್ರಾಮದ ಬೀರೇಶ್ವರ ದೇವಸ್ಥಾನ ಇರುವ ಕೆರೆಯಿಂದ ನೂರೊಂದು ಮಹಿಳೆಯರು ಕಳಸ ವತ್ತು ವೀರಗಾಸೆ ಡೊಳ್ಳು ಕುಣಿತ ಮಂಗಳವಾದ್ಯ ಸಿರಿದಂತೆ ಕಲಾ ತಂಡಗಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಕಾಡುಬಸವೇಶ್ವರ ನನ್ನ ಮೆರವಣಿಗೆ ಮಾಡಲಾಗಿತ್ತು ಪ್ರತಿ ಕುಟುಂಬದಲ್ಲೂ ಬಸವೇಶ್ವರನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.

ಶಕ್ತಿ ದೇವರು ಬಸವೇಶ್ವರ ಪುನರ್ ಪ್ರತಿಷ್ಠಾಪನ ಅಂಗವಾಗಿ ಗ್ರಾಮದಲ್ಲಿ ಪ್ರತಿ ಕುಟುಂಬದಲ್ಲೂ ದೇವರ ಭಕ್ತಿ ನಿಷ್ಠೆಯನ್ನು ಪಾಲಿಸಬೇಕು ಎಂಬ ವ್ರತ ಕೈಗೊಂಡಿದ್ದರು. ಪ್ರತಿಷ್ಠಾಪನೆ ಮತ್ತು ಗೋಪುರ ಉದ್ಘಾಟನೆ ಅಂಗವಾಗಿ ಯುಗಾದಿ ಹಬ್ಬದವರಿಗೆ ಯಾವುದೇ ಮನೆಯಲ್ಲಿ ಮಾಂಸಹಾರಿ ಊಟಗಳನ್ನ ಮಾಡುವಂತಿಲ್ಲ ಎಂಬ ಭಕ್ತಾದಿಗಳು ತಮ್ಮ ಇಷ್ಟಾರ್ಥ ಆರಕ್ಕೆಯನ್ನ ಮಾಡಿಕೊಂಡಿದ್ದು ವಿಶೇಷವಾಗಿತ್ತು.

ಪೂಜಾ ಕಾರ್ಯಕ್ರಮದಲ್ಲಿ ಪಿ.ಎಲ್.ಡಿ.ಬ್ಯಾಂಕ್ ಮಾಜಿ‌ ಅಧ್ಯಕ್ಷ ಹರಿಚಿಂದಬರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಕನ್ಯಾ. ಗ್ರಾಮದ ಮುಖಂಡರಾದ ವೀರೇಂದ್ರ ಕೃಷ್ಣನಾಯಕ ದೇವೇಂದ್ರ ಹರೀಶ್ ದಿವಾಕರ್ ಜಗದೀಶ್ ಮರಿಗೌಡ ಪುಟ್ಟೇಗೌಡ. ಮಂಗಳಹರೀಶ್, ಮುಖ್ಯ ಅರ್ಚಕ ನಾಗಭೂಷಣ ಆರಾಧ್ಯ ಹಾಗೂ ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular